ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಪ್ಟೆಂಬರ್‌ 11ರ ದಾಳಿಯ ರೂವಾರಿ ಫ್ರೆಂಚ್‌ನ ಮೌಸ್ಸಾಯಿ?

By Staff
|
Google Oneindia Kannada News

ವಾಷಿಂಗ್ಟನ್‌ : ಸೆಪ್ಟೆಂಬರ್‌ 11ರಂದು ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ನಡೆದ ದಾಳಿ ಕುರಿತ ಪ್ರಥಮ ದೋಷಾರೋಪಣೆಯಲ್ಲಿ ಕೇಳಿ ಬಂದಿರುವ ಹೆಸರು ಫ್ರೆಂಚ್‌ ಪ್ರಜೆ ಜಕಾರಿಯಾಸ್‌ ಮೌಸ್ಸೌಯಿ. ಒಸಾಮ ಹಾಗೂ ಆತನ ಅಲ್‌ ಕ್ವೆದಾ ಸಂಘಟನೆ ಜೊತೆ ಸೇರಿ ಸಾವಿರಾರು ಜನರ ಜೀವ ತೆಗೆಯುವಂಥಾ ಮಹಾ ಪಿತೂರಿಯನ್ನು ಈತ ನಡೆಸಿದ್ದಾನೆ ಎನ್ನಲಾಗಿದೆ.

ಅಮೆರಿಕೆಯ ಅಟಾರ್ನಿ ಜನರಲ್‌ ಜನರಲ್‌ ಜಾನ್‌ ಆ್ಯಷ್‌ಕ್ರಾಫ್ಟ್‌ ಮಂಗಳವಾರ ಈ ವಿಷಯ ತಿಳಿಸಿದರು.ಅಮೆರಿಕಾದ ನಾಲ್ಕು ವಿಮಾನಗಳನ್ನು ಅಪಹರಿಸಿದ 19 ಹೈಜಾಕರ್‌ಗಳ ತಂತ್ರವನ್ನೇ 33ರ ಹರೆಯದ ಮೌಸ್ಸೌಯಿ ರೂಪಿಸಿದ್ದ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಮೌಸ್ಸೌಯಿ ಅಪರಾಧಿ ಎಂದು ಸಾಬೀತಾದಲ್ಲಿ , ಆತನಿಗೆ ಮರಣ ದಂಡನೆ ವಿಧಿಸಲಾಗುವುದು ಎಂದು ಆ್ಯಷ್‌ಕ್ರಾಫ್ಟ್‌ ಹೇಳಿದರು.

ಮೂವತ್ತು ಪುಟಗಳ ಪ್ರಥಮ ದೋಷಾರೋಪಣೆ ಪಟ್ಟಿ (ಎ ಕ್ರಾನಿಕಲ್‌ ಆಫ್‌ ಇವಿಲ್‌ ಎಂದು ಇದನ್ನು ಹೆಸರಿಸಲಾಗಿದೆ) ಯಲ್ಲಿ ಮೌಸ್ಸೌಯಿ 6 ಪ್ರಕರಣಗಳ ಆರೋಪಿ. ಆಫ್ಘಾನಿಸ್ತಾನದ ಅಲ್‌ ಕ್ವೆದಾ ಶಿಬಿರವೊಂದರಲ್ಲಿ ತರಪೇತುಗೊಂಡಿರುವ ಮೌಸ್ಸೌಯಿ ವಿಮಾನ ಹಾರಿಸುವುದನ್ನು ಕಲಿತದ್ದು ಅಮೆರಿಕಾದಲ್ಲಿ. ಈತನ ಚಟುವಟಿಕೆಗಳಿಗೆ ಜರ್ಮನಿ ಮತ್ತು ಮಧ್ಯ ಪ್ರಾಚ್ಯದಿಂದ ಹಣ ಹರಿದು ಬರುತ್ತಿತ್ತು ಎಂದು ದೋಷಾರೋಪಣೆಯಲ್ಲಿ ತಿಳಿಸಲಾಗಿದೆ.

ದಾಳಿಯ ಹಿಂದಿನ ಮಹಾ ಮಿದುಳು ಮೌಸ್ಸೌಯಿ. ಒಸಾಮ ಬಿನ್‌ ಲ್ಯಾಡೆನ್‌, ವಿಜ್ಞಾನಿ ಅಯ್ಮಾನ್‌ ಅಲ್‌-ಜವಾಹಿರಿ ಹಾಗೂ 19 ಮಂದಿ ಹೈಜಾಕರ್‌ಗಳು ಸೇರಿದಂತೆ ಇತರ 23 ಉಗ್ರರು ಮೌಸ್ಸೌಯಿ ಪಿತೂರಿಗೆ ತಾಳ ಹಾಕಿದ್ದಾರೆ ಎಂದು ಬೇಹುಗಾರಿಕಾ ದಳಗಳ ತನಿಖೆಯಿಂದ ತಿಳಿದು ಬಂದಿದೆ. ಜನವರಿ 2, 2002ರಂದು ವರ್ಜಿನಿಯಾದ ಅಲೆಕ್ಸಾಂಡ್ರಿಯಾದಲ್ಲಿ ಮೌಸ್ಸೌಯಿ ಮೊದಲ ವಿಚಾರಣೆ ಎದುರಿಸಲಿದ್ದಾರೆ.

(ಪಿಟಿಐ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X