ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

9 ಲಕ್ಷ ಎಸ್‌ಟಿಡಿ ಬೂತ್‌ಗಳನ್ನು ಸೈಬರ್‌ ಡಾಬಾ ಮಾಡಲು ಚಿಂತನೆ

By Staff
|
Google Oneindia Kannada News

ಬೆಂಗಳೂರು : 2002ರ ಏಪ್ರಿಲ್‌ ಒಂದರಿಂದ ಇಂಟರ್‌ನೆಟ್‌ ಟೆಲಿಫೋನಿ ಸೌಲಭ್ಯಒದಗಿಸಲು ನಿರ್ಧರಿಸಿರುವ ಕೇಂದ್ರ ಸರಕಾರವು, ರಾಷ್ಟ್ರದಲ್ಲಿರುವ 9 ಲಕ್ಷ ಸಾರ್ವಜನಿಕ ದೂರವಾಣಿ ಕೇಂದ್ರ (ಎಸ್‌.ಟಿ.ಡಿ. ಬೂತ್‌) ಗಳನ್ನು ಸೈಬರ್‌ ಡಾಬಾಗಳಾಗಿ ಪರಿವರ್ತಿಸುವ ಆಲೋಚನೆ ಹೊಂದಿದೆ. ಈ ವಿಷಯವನ್ನು ದೂರವಾಣಿ ಇಲಾಖೆಯ ಕಾರ್ಯದರ್ಶಿ ಶ್ಯಾಮಲ್‌ ಘೋಷ್‌ ಮಂಗಳವಾರ ಬೆಂಗಳೂರಿನಲ್ಲಿ ತಿಳಿಸಿದರು.

ಈ ವಾಣಿಜ್ಯ ಕುರಿತ ಪ್ರಾದೇಶಿಕ ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡುತ್ತಿದ್ದ ಟೆಲಿಕಾಂ ಆಯೋಗದ ಅಧ್ಯಕ್ಷರೂ ಆದ ಘೋಷ್‌ ಅವರು, ಇಂಟರ್‌ನೆಟ್‌ ಟಿಲಿಫೋನಿ ಸೌಲಭ್ಯದಿಂದ ಟೆಲಿಕಾಂ ದರ ಕಡಿಮೆ ಆಗುತ್ತದೆ ಎಂದು ಹೇಳಿದರು.

ನಗರದಲ್ಲಿ ನಡೆಯುತ್ತಿರುವ ನಾಲ್ಕು ದಿನಗಳ ವಿಚಾರ ಸಂಕಿರಣವು ಇ -ವಾಣಿಜ್ಯದ ಪ್ರಸ್ತುತ ಅಭಿವೃದ್ಧಿ ಹಾಗೂ ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಇಲೆಕ್ಟ್ರಾನಿಕ್‌ ವಾಣಿಜ್ಯದ ಭವಿಷ್ಯದ ಬಗ್ಗೆ ಬೆಳಕು ಚೆಲ್ಲಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇ -ವಾಣಿಜ್ಯ ಕುರಿತಂತೆಯೂ ಇಲ್ಲಿ ಚಿಂತನ ಮಂಥನ ನಡೆಯಲಿದೆ.

ಈ ವಿಚಾರ ಸಂಕಿರಣವನ್ನು ಟೆಲಿಕಮ್ಯುನಿಕೇಷನ್‌ ಇಲಾಖೆಯ ಸಹಯೋಗದಲ್ಲಿ ಏಷ್ಯಾ ಪೆಸಿಫಿಕ್‌ ಸಮುದಾಯ ಹಾಗೂ ದಿ ಏಷ್ಯಾ ಅಂಡ್‌ ದಿ ಪೆಸಿಫಿಕ್‌ ಸೆಂಟರ್‌ ಫಾರ್‌ ಟ್ರಾನ್ಸ್‌ಫರ್‌ ಆಫ್‌ ಟೆಕ್ನಾಲಜಿ (ಎಪಿಸಿಟಿಟಿ)ಯು ಆಯೋಜಿಸಿತ್ತು. ಈ ವಿಚಾರ ಸಂಕಿರಣದಲ್ಲಿ 20 ರಾಷ್ಟ್ರಗಳ 50ಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ.

(ಪಿ.ಟಿ.ಐ)

ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X