ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಂಧದಗುಡಿ ಎಂ.ಪಿ.ಶಂಕರ್‌ ನೇತೃತ್ವದಿ ಮೈಸೂರಿಗೆ ಬಂತು ರಂಗಸುಗ್ಗಿ

By Staff
|
Google Oneindia Kannada News

ಮೈಸೂರು : ನಗರದ ಹಿರಿಯ ಹವ್ಯಾಸಿ ರಂಗ ತಂಡಗಳು ಮುಂದಿನ ಜನವರಿ 28ರಿಂದ ಫೆಬ್ರವರಿ 6ರವರೆಗೆ ನಾಟಕೋತ್ಸವವನ್ನು ಆಯೋಜಿಸಿದೆ.

ಹಿರಿಯ ರಂಗಕಲಾವಿದ ಎ. ಶಿವಪ್ರಸನ್ನ ಅವರ ತಂದೆ ಎ. ಅತ್ತಿಗೋಡು ಗುರುಕಾರ್‌ ಅವರ ಸ್ಮರಣಾರ್ಥ ಹಿರಿಯ ಹವ್ಯಾಸಿ ರಂಗತಂಡಗಳ ನಾಟಕೋತ್ಸವದ ನೇತೃತ್ವವನ್ನು ಚಿತ್ರನಟ ಎಂ. ಪಿ. ಶಂಕರ್‌ ವಹಿಸಿದ್ದ್ದಾರೆ. ಇದೇ ಸಂದರ್ಭದಲ್ಲಿ ಭರಣಿ ಕಲಾವಿದರ ಸಂಸ್ಥೆಯು ರಂಗಭೂಮಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 15 ಮಂದಿ ಹಿರಿಯ ಕಲಾವಿದರನ್ನು ಸನ್ಮಾನಿಸಲಿದೆ.

ಅಲ್ಲದೆ, ಪ್ರಸಿದ್ಧ ಹವ್ಯಾಸಿ ರಂಗ ಕಲಾವಿದರ ಪರಿಚಯವನ್ನು ಹೊತ್ತ ಪುಸ್ತಕವನ್ನು ಹೊರತರಲಾಗುವುದು. ಭಾರತೀಯ ಕಲಾಕೇಂದ್ರ, ಸರಸ್ವತಿ ಯೂನಿಯನ್‌, ಪ್ರಭು ರಾಂ ಕಲಾವಿದರು, ಲಾವಣ್ಯ ಕಲಾನಿಕೇತನ, ಶ್ರಿಕಲಾವಿದರು, ನಕಮೇ, ಭರಣಿ ಕಲಾವಿದರು, ಕದಂಬ ಮಿತ್ರ ಮಂಡಳಿ, ರೈಲ್ವೇ ಕಲಾವಿದರು, ಮಾತಾ ಅಸೋಸಿಯೇಷನ್‌, ಅಮರ ಕಲಾಸಂಘ ಹವ್ಯಾಸಿ ರಂಗ ತಂಡಗಳು ನಾಟಕೋತ್ಸವದಲ್ಲಿ ನಾಟಕ ಪ್ರದರ್ಶಿಸಲಿವೆ.

ಐವತ್ತು ಮತ್ತು ಅರುವತ್ತರ ದಶಕದಲ್ಲಿ ಜನಪ್ರಿಯವಾಗಿದ್ದ ಟಿಪ್ಪು ಸುಲ್ತಾನ್‌, ಕಂಪ್ನಿ ಮನೆ, ಹುಚ್ಚ, ಛತ್ರಪತಿ ಶಿವಾಜಿ, ಸಮಯಕ್ಕೊಂದ್ಸುಳ್ಳು, ಆಶಾ, ಎಚ್ಚಮನಾಯಕ, ವಿಷಜ್ವಾಲೆ, ಗಂಡಸ್ಕತ್ರಿ, ಅಳಿಯ ದೇವರು ಹಾಗೂ ನಂಜಿನ ನಾಲಿಗೆ ನಾಟಕಗಳು ಈ ಹತ್ತು ದಿನಗಳ ಅವಧಿಯಲ್ಲಿ ಪ್ರದರ್ಶನವಾಗಲಿವೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X