ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾ.ಡಿ.ಎಂ.ನಂಜುಂಡಪ್ಪ ಕಂಡಂತೆ ಉತ್ತರ ಕರ್ನಾಟಕದ ಕಣ್ಣಿಗೆ ಸುಣ್ಣ

By Staff
|
Google Oneindia Kannada News

ಬೆಂಗಳೂರು : ಹೆಸರಾಂತ ಅರ್ಥತಜ್ಞ ಡಾ। ಡಿ.ಎಂ. ನಂಜುಂಡಪ್ಪ ನೇತೃತ್ವದ ಪ್ರಾದೇಶಿಕ ಅಸಮತೋಲನ ನಿವಾರಣೆಯ ಉನ್ನತಾಧಿಕಾರ ಸಭೆಯ ಮಧ್ಯಂತರದ ವರದಿಯ ಕೆಲವು ಅಂಶಗಳನ್ನು ಗಮನಿಸಿ :

ರಾಜ್ಯದಲ್ಲಿನ ತಾಲ್ಲೂಕುಗಳ ಸಂಖ್ಯೆ : 175
ಹಿಂದುಳಿದ ತಾಲ್ಲೂಕುಗಳ ಸಂಖ್ಯೆ : 95
ಉತ್ತರ ಕರ್ನಾಟಕದ ಹಿಂದುಳಿದ ತಾಲ್ಲೂಕುಗಳ ಸಂಖ್ಯೆ : 45.

ವಿಧಾನಸೌಧದಲ್ಲಿ ಗುರುವಾರ ನಡೆದ ಪ್ರಾದೇಶಿಕ ಅಸಮತೋಲನ ನಿವಾರಣೆಯ ಉನ್ನತಾಧಿಕಾರ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಗಮನಕ್ಕೆ ತರಲಾಯಿತು. ಮಾರ್ಚ್‌ ತಿಂಗಳ ಒಳಗಾಗಿ ಸಮಿತಿ ತನ್ನ ಅಂತಿಮ ವರದಿಯನ್ನು ನೀಡಲಿದೆ ಎಂದು ಸಭೆಯ ನಂತರ ಡಿ.ಎಂ.ನಂಜುಂಡಪ್ಪನವರು ಸುದ್ದಿಗಾರರಿಗೆ ತಿಳಿಸಿದರು.

ಸಮಿತಿಯ ಅಂತಿಮ ವರದಿ ಸಿದ್ಧವಾದ ನಂತರ ಮತ್ತೊಮ್ಮೆ ಸಭೆ ಕರೆಯಲು ಮುಖ್ಯಮಂತ್ರಿ ಬಯಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಬೃಹತ್‌ ಉದ್ದಿಮೆಗಳನ್ನು ಸ್ಥಾಪಿಸಲು ಹಾಗೂ ಈ ಉದ್ದಿಮೆಗಳ ಸ್ಥಾಪನೆಗೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಬಗೆಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ನಂಜುಂಡಪ್ಪ ಹೇಳಿದರು.

ಸಭೆಯಲ್ಲಿ ನಂಜುಂಡಪ್ಪನವರು ಎತ್ತಿದ ಪ್ರಶ್ನೆ ಹಾಗೂ ನೀಡಿದ ಸಲಹೆ

ಪ್ರಶ್ನೆ : ಎಂಟು ದಿನಗಳಲ್ಲಿ ಹುಬ್ಬಳ್ಳಿಯಿಂದ ಬೆಂಗಳೂರಿಗೆ ನೈಋತ್ಯ ರೈಲ್ವೆ ವಲಯ ಕಚೇರಿ ಸ್ಥಳಾಂತರವಾಗಿದೆ. ಆದರೆ, ಬೆಂಗಳೂರಿನಿಂದ ಹುಬ್ಬಳ್ಳಿಗೆ 8 ದಿನಗಳಲ್ಲಿ ಈ ಕಚೇರಿ ವಾಪಸ್ಸಾಗಲು ಯಾಕೆ ಸಾಧ್ಯವಾಗಿಲ್ಲ .

ಸಲಹೆ : ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುವಾಗ ಸಮಾನ ನೀತಿ ಅನುಸರಣೆ ಸರಿಯಲ್ಲ . ಬದಲಿಗೆ ಹಿಂದುಳಿದ ಪ್ರದೇಶಗಳಿಗೆ ಹೆಚ್ಚಿನ ಹಣ ಬಿಡುಗಡೆ ಮಾಡಿ.

ಈ ಸಲಹೆ ಸೂಚನೆಗಳಿಗೆ ಮುಖ್ಯಮಂತ್ರಿ ಕೃಷ್ಣ ಅವರ ಪ್ರತಿಕ್ರಿಯೆ ತಿಳಿದುಬಂದಿಲ್ಲ . ಸಭೆಯಲ್ಲಿ ಸಚಿವರಾದ ಎಂ.ವೈ. ಘೋರ್ಪಡೆ, ಡಾ। ಎ.ಬಿ. ಮಾಲಕರೆಡ್ಡಿ , ಎಚ್‌.ಕೆ. ಪಾಟೀಲ್‌, ಎಚ್‌. ವಿಶ್ವನಾಥ್‌, ಡಿ.ಕೆ. ಶಿವಕುಮಾರ್‌, ಖಮರುಲ್‌ ಇಸ್ಲಾಂ, ಕಾಗೋಡು ತಿಮ್ಮಪ್ಪ ಭಾಗವಹಿಸಿದ್ದರು. ಯಥಾ ಪ್ರಕಾರ ಹಿರಿಯ ಅಧಿಕಾರಿಗಳು ಜೊತೆಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣಗಾರುಡಿಯ ಕನ್ನಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X