ಕಾಂತಕುಮಾರ್ ಕೆನರಾಬ್ಯಾಂಕ್‌ನ ಹೊಸ ಕಾರ್ಯನಿರ್ವಾಹಕ ನಿರ್ದೇಶಕ
ಬೆಂಗಳೂರು : ರಾಷ್ಟ್ರೀಕೃತ ಹಾಗೂ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಕೆನರಾಬ್ಯಾಂಕ್‌ನ ನೂತನ ಕಾರ್ಯ ನಿರ್ವಾಹಕ ನಿರ್ದೇಶಕರಾಗಿ ಕಾಂತಕುಮಾರ್ ನೇಮಕಗೊಂಡಿದ್ದಾರೆ. ಕುಮಾರ್ ಅವರು ಗುರುವಾರ, ಬೆಂಗಳೂರಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.
ವಾಣಿಜ್ಯ ಬ್ಯಾಂಕಿಂಗ್ ವ್ಯವಹಾರಗಳಲ್ಲಿ 35 ವರ್ಷಗಳ ಸುದೀರ್ಘ ಅನುಭವ ಹೊಂದಿರುವ ಬ್ಯಾಂಕರ್ ಕಾಂತ ಕುಮಾರ್ ಅವರು, ಈ ಮುನ್ನ ಬ್ಯಾಂಕ್‌ನ ಪ್ರಧಾನ ಕಚೇರಿಯಲ್ಲಿರುವ ಯೋಜನೆ ಮತ್ತು ಅಭಿವೃದ್ಧಿ (ಪ್ಲಾನಿಂಗ್ ಅಂಡ್ ಡೆವಲಪ್‌ಮೆಂಟ್ ವಿಂಗ್) ವಿಭಾಗದ ನೇತೃತ್ವವನ್ನು ವಹಿಸಿದ್ದರು.
ಬಡ್ಡಿ ದರ ಪರಿಷ್ಕರಣೆ: ಕೆನರಾ ಬ್ಯಾಂಕ್ ಡಿಸೆಂಬರ್ 10ರಿಂದ ಅನ್ವಯವಾಗುವಂತೆ ಠೇವಣಿ ಮೇಲಿನ ಬಡ್ಡಿ ದರಗಳನ್ನು ಶೇಕಡಾ 0.25ರಷ್ಟು ಪರಿಷ್ಕರಿಸಿದೆ. 15ರಿಂದ 45 ದಿನಗಳ ಅವಧಿಯ ಹಾಗೂ 15 ಲಕ್ಷ ರುಪಾಯಿಗಿಂತ ಕಡಿಮೆ ಇರುವ ಠೇವಣಿಗೆ ಶೇ.5 ರಷ್ಟು ಬಡ್ಡಿ ದರ, 46ರಿಂದ 90 ದಿನಗಳ ಅವಧಿಯ ಠೇವಣಿಗೆ 5.75ರಷ್ಟು ಹಾಗೂ 91ರಿಂದ 179 ದಿನಗಳವರೆಗಿನ ಠೇವಣಿಗೆ 6.25ರಷ್ಟು ಬಡ್ಡಿ ದರವನು ಬ್ಯಾಂಕ್ ನಿಗದಿಪಡಿಸಿದೆ.
15 ಲಕ್ಷ ರುಪಾಯಿಗಿಂತ ಕಡಿಮೆ ಇರುವ ಎನ್.ಆರ್.ಎನ್.ಆರ್. ಠೇವಣಿಗೆ ಆರು ತಿಂಗಳಿಂದ ಒಂದು ವರ್ಷದೊಳಗಿನ ಅವಧಿಗೆ ಶೇ.6.75, ಒಂದು ವರ್ಷದಿಂದ ಎರಡು ವರ್ಷದ ಒಳಗಿನ ಅವಧಿ ಠೇವಣಿಗೆ 7.75 ಮತ್ತು ಎರಡು ವರ್ಷದಿಂದ ಮೂರು ವರ್ಷದ ಒಳಗಿನ ಸಾವಧಿ ಠೇವಣಿಗೆ ಶೇ.8 ಮತ್ತು ಮೂರು ವರ್ಷ ಮೇಲ್ಪಟ್ಟ ಅವಧಿಯ ಠೇವಣಿಗೆ ಶೇ. 8.25ರಷ್ಟು ಬಡ್ಡಿ ನೀಡಲಾಗುವುದು ಎಂದು ಬ್ಯಾಂಕ್ ಪ್ರಕಟಣೆ ಹೇಳಿದೆ.
(ಪಿ.ಟಿ.ಐ/ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications