ನಾರಾಯಣ ಮೂರ್ತಿ, ಪ್ರೇಮ್‌ಜಿಗೆ ಬ್ಯುಸಿನೆಸ್ ಲೀಡರ್ ಪ್ರಶಸ್ತಿ
ಬೆಂಗಳೂರು : ಇನ್ಫೋಸಿಸ್‌ನ ನಾರಾಯಣ ಮೂರ್ತಿ ಹಾಗೂ ವಿಪ್ರೋ ಕಂಪೆನಿಯ ಅಜೀಮ್ ಪ್ರೇಮ್‌ಜಿ ಅವರು
ದಿ. ಏಷ್ಯನ್ ಬ್ಯುಸಿನೆಸ್ ಲೀಡರ್ ಪ್ರಶಸ್ತಿ -2001ಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿಯನ್ನು ಸಿಎನ್‌ಎನ್ ಏಶಿಯಾ ಬ್ಯುಸಿನೆಸ್ ಹಾಗೂ ಟಿಎನ್‌ಟಿ ಕಂಪೆನಿ ಉದ್ಯಮ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ನೀಡುತ್ತಿದ್ದು, ಬೆಂಗಳೂರು ಮೂಲದ ಇಬ್ಬರು ಐಟಿ ಸಾಧಕರು ಈ ಪ್ರಶಸ್ತಿಯನ್ನು ಪಡೆದಿರುವುದು ವಿಶೇಷ.
ಮಂಗಳವಾರ ಟಿಎನ್‌ಟಿ ಕಂಪೆನಿಯು ಪ್ರಶಸ್ತಿಯನ್ನು ಪ್ರಕಟಿಸಿದ್ದು ಐಸಿಐಸಿಐ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ.ವಿ. ಕಾಮತ್, ಸತ್ಯಂ ಕಂಪ್ಯೂಟರ್ಸ್ ಲಿಮಿಟೆಡ್‌ನ ಬಿ. ರಾಮಲಿಂಗರಾಜು ಅವರೂ ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಶಸ್ತಿಯು ನಗದು ಮತ್ತು ಪ್ರಶಸ್ತಿ ಫಲಕವನ್ನೊಳಗೊಂಡಿದೆ.(ಇನ್ಫೋ ವಾರ್ತೆ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ












Click it and Unblock the Notifications