ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಊಟಕ್ಕೂ ಬಂತು ಸಂಚಕಾರ! ಒಸಾಮ ಪತ್ತೆಗೆ ವಾಸನಾ ಶೋಧಕ

By Staff
|
Google Oneindia Kannada News

ವಾಷಿಂಗ್ಟನ್‌: ಅಫ್ಘಾನಿಸ್ತಾನದ ದುರ್ಗಮ ಬೆಟ್ಟ ಪ್ರದೇಶದಲ್ಲಿ ಅಡಗಿರುವ ಒಸಾಮ ಬಿನ್‌ ಲ್ಯಾಡೆನ್‌ನ್ನು ಪತ್ತೆ ಹಚ್ಚಲು ವಾಸನಾ ಶೋಧಕವನ್ನು ಬಳಸಲು ಅಮೆರಿಕಾ ನಿರ್ಧರಿಸಿದೆ.

ಈ ವಾಸನಾ ಶೋಧಕದ ಮೂಲಕ ವ್ಯಕ್ತಿಯಾಬ್ಪ ತಿನ್ನುವ ಆಹಾರದ ವಾಸನೆಯನ್ನು ಗುರುತಿಸಿಕೊಂಡು ವ್ಯಕ್ತಿ ಯಾವ ಪ್ರದೇಶದಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಬಹುದು. ರಿಮೋಟ್‌ ಸೆನ್ಸಿಂಗ್‌ ಗ್ಯಾಸ್‌ ಡಿಟೆಕ್ಟರ್‌(ಆರ್‌ಎಸ್‌ಜಿಡಿಡಿ) ಗುಹೆಗಳಲ್ಲಿ ಅಡಗಿಕೊಂಡಿರುವ ಒಸಾಮಾನನ್ನು ಹಿಡಿಯುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲುದು. ಉದಾಹರಣೆಗೆ ಒಸಾಮ ಬಿನ್‌ ಲ್ಯಾಡೆನ್‌ ಗುಹೆಯಾಂದರಲ್ಲಿ ನಿಂಬೆ ರಸದ ಪೆಪ್ಪರಮಿಂಟು ತಿನ್ನುತ್ತಿದ್ದರೆ, ಆರ್‌ಎಸ್‌ಜಿಡಿಡಿ, ಪೆಪ್ಪರಮಿಂಟಿನ ಪರಿಮಳವನ್ನು ಗ್ರಹಿಸಿಕೊಂಡು ಪೊಲೀಸರಿಗೆ ಆತ ಯಾವ ದಿಕ್ಕಿನಲ್ಲಿದ್ದಾನೆ ಎಂಬ ಸುಳಿವು ನೀಡುತ್ತದೆ.

ವಾಸನಾ ಶೋಧಕವು ಎಷ್ಟು ಕರಾರುವಕ್ಕಾಗಿ ಕೆಲಸ ಮಾಡಬಲ್ಲುದೆಂದರೆ, ಬೇರೆ ಬೇರೆ ಸಮುದಾಯದ ಜನರು ಬಳಸುವ ವಿವಿಧ ಆಹಾರಗಳ ವಾಸನೆಯ ನಡುವಿನ ವ್ಯತ್ಯಾಸವನ್ನು ಗುರುತಿಸಬಲ್ಲುದು ಎಂದು ಪೆಂಟಗನ್‌ ಸುದ್ದಿ ಮೂಲ ತಿಳಿಸಿದೆ.

(ಇನ್ಫೋ ವಾರ್ತೆ)

ಮುಖಪುಟ / ‘ಆಪರೇಷನ್‌ ಎಂಡ್ಯೂರಿಂಗ್‌ ಫ್ರೀಡಂ’

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X