ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ವಧರ್ಮ ಸಮನ್ವಯ ಸಮಿತಿ ವತಿಯಿಂದ 1001 ಜೋಡಿ ವಿವಾಹ

By Staff
|
Google Oneindia Kannada News

ಬೆಂಗಳೂರು : ಸರ್ವಧರ್ಮ ಸಮನ್ವಯ ಸಮಿತಿಯು ಇದೇ ಡಿಸೆಂಬರ್‌ 8ರ ಶನಿವಾರ ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸಾವಿರದ ಒಂದು ಜೋಡಿ ಸಾಮೂಹಿಕ ವಿವಾಹವನ್ನು ಏರ್ಪಡಿಸಿದೆ. ಈ ವಿಷಯವನ್ನು ರಾಜ್ಯ ನಗರಾಭಿವೃದ್ಧಿ ಸಚಿವ ಬಿ.ಬಿ. ಚಿಮ್ಮನಕಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಸಾಮೂಹಿಕ ವಿವಾಹವು ಯಾವುದೇ ಜಾತಿ, ಧರ್ಮ, ಮತಕ್ಕೆ ಸೀಮಿತವಾಗಿಲ್ಲ. ಇಲ್ಲಿ ಎಲ್ಲ ಜಾತಿಯ, ಧರ್ಮದ ಯುವ ಜೋಡಿಗಳು ಸತಿ-ಪತಿಯರಾಗುತ್ತಿದ್ದಾರೆ. ಮಿಗಿಲಾಗಿ ದೇವದಾಸಿಯರ ವಿವಾಹ, ವಿಧವಾ ವಿವಾಹ ಹಾಗೂ ಅಂತರ್ಜಾತೀಯ ವಿವಾಹವೂ ಇಲ್ಲಿ ನಡೆಯುತ್ತಿದೆ ಎಂದು ಅವರು ಹೇಳಿದರು.

ಈ ಭಾರೀ ಪ್ರಮಾಣ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ಸಮಿತಿಯು 25 ಲಕ್ಷ ರುಪಾಯಿ ಖರ್ಚು ಮಾಡುತ್ತಿದೆ. ಈ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಧೂವರರಿಗೆ ಧಾರ್ಮಿಕ ವಿಧಿ ವಿಧಾನಗಳ ರೀತ್ಯ ಹೊಸ ವಸ್ತ್ರ, ಮಂಗಳ ಸೂತ್ರ, ಹೂಮಾಲೆಯನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ವರದಕ್ಷಿಣೆ ಭೂತವನ್ನು ಹೊಡೆದೋಡಿಸಲು ಇಂತಹ ಸಾಮೂಹಿಕ ವಿವಾಹಗಳು ಸಹಕಾರಿಯಾಗುತ್ತವೆ ಎಂದು ಸಚಿವರು ಅಭಿಪ್ರಾಯಪಟ್ಟರು.

(ಇನ್‌ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X