ಬಿ.ವಿ.ಕಾರಂತರಿಗೆ ಸಂಗೀತ ನಾಟಕ ಅಕಾಡೆಮಿಯ ಫೆಲೋಷಿಪ್
ನವದೆಹಲಿ : ಹಿರಿಯ ರಂಗಕರ್ಮಿ ಬಿ.ವಿ.ಕಾರಂತ ಹಾಗೂ ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿರುವ ಬಾಲ ಮುರಳಿ ಕೃಷ್ಣ ಸಂಗೀತ ನಾಟಕ ಅಕಾಡೆಮಿಯ ಫೆಲೋಷಿಪ್‌ಗೆ ಆಯ್ಕೆಯಾಗಿದ್ದಾರೆ. ಕೂಚುಪುಡಿ ಗುರು ವೆಂಪತಿ ಚಿನ್ನ ಸತ್ಯಂ ಅಕಾಡೆಮಿ ಫೆಲೋಷಿಪ್‌ಗೆ ಆಯ್ಕೆಯಾಗಿರುವ ಮತ್ತೊಬ್ಬ ಪ್ರಮುಖರು.
ಫೆಲೋಷಿಪ್ ಮಾತ್ರವಲ್ಲದೆ ಸಂಗೀತ, ನೃತ್ಯ ಮತ್ತು ನಾಟಕ ವಿಭಾಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 25 ಮಂದಿಗೆ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ. ನವಂಬರ್ 27 ರಂದು ಭೂಪೆನ್ ಹಜಾರಿಕಾ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆ ಅಕಾಡೆಮಿ ಫೆಲೋಷಿಪ್‌ಗೆ ಅರ್ಹರ ಪಟ್ಟಿಯನ್ನು ಅಂತಿಮಗೊಳಿಸಿತು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದ ಪ್ರಮುಖರು : ಅಭಯ್ ನಾರಾಯಣ್ ಮಲಿಕ್, ಆರ್.ಎನ್.ದೊರೆಸ್ವಾಮಿ (ಸಂಗೀತ), ಅಲರ್‌ಮೆಲ್ ವೆಲ್ಲಿ (ನೃತ್ಯ), ಭೀಷ್ಮ ಸಹಾನಿ (ರಂಗಭೂಮಿ), ಕಲಾಮಂಡಲಂ ಗೋವಿಂದ ವಾರಿಯರ್(ಜಾನಪದ).
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications