ಮಾವೋ ನಾಡು ;ಭಾರತೀಯರಿಗೆ ಉದ್ಯೋಗದ ಹೊಸ ಬೀಡು
*ಅನಿಲ್ ಕೆ ಜೋಸೆಫ್
ಬೀಜಿಂಗ್: ಸೆಪ್ಟಂಬರ್ 11 ರ ಆಘಾತದಿಂದ ಅಮೆರಿಕದ ಅರ್ಥ ವ್ಯವಸ್ಥೆಯಲ್ಲಿ ಭಾರೀ ಅಲ್ಲ ಕಲ್ಲೋಲ ಉಂಟಾಗಿದ್ದರೆ, ಚೀನಾ ತನ್ನ ಆರ್ಥಿಕ ಬೆಳವಣಿಗೆಯ ದರದಲ್ಲಿ ಶೇ.7 ರ ಪ್ರಗತಿ ಸಾಧಿಸಿದೆ. ಅಂದರೆ, ಒಬ್ಬರ ಸೋಲು ಮತ್ತೊಬ್ಬರ ಗೆಲುವು ಎಂದಾಯಿತು. ಈ ಸೋಲು ಗೆಲುವುಗಳ ಕಥೆಗಿಂತಲೂ ಬಹಳ ಮುಖ್ಯವಾದುದು- ಭಾರತದ ಸಾಫ್ಟ್‌ವೇರ್ ಪರಿಣತರು, ಆಡಳಿತ ಹಾಗೂ ಆರ್ಥಿಕ ತಜ್ಞರಿಗೆ ಚೀನಾದ ಮಾರುಕಟ್ಟೆ ಆಕರ್ಷಕವಾಗಿ ತೆರೆದುಕೊಂಡಿರುವುದು.
ಚೀನಾದ ಮಾಹಿತಿ ತಂತ್ರಜ್ಞಾನ ಹಾಗೂ ಟೆಲಿ ಕಮ್ಯುನಿಕೇಷನ್ ಕ್ಷೇತ್ರದ ಮುಂದಾಳುಗಳಾದ ಲೆಜೆಂಡ್, ಫೌಂಡರ್ ಹಾಗೂ ಹುವಾಯ್ ಮುಂತಾದವು ಭಾರತೀಯ ಸಾಫ್ಟ್‌ವೇರ್ ತಜ್ಞರನ್ನು ಆಕರ್ಷಿಸುತ್ತಿವೆ. ಅಮೆರಿಕಾದಲ್ಲಿ ತಾವು ಕಳೆದುಕೊಂಡಿರುವ ಕೆಲವು ಭಾರತೀಯ ಐಟಿ ಪರಿಣತರು ಈ ಕಂಪನಿಗಳಲ್ಲಿ ನೆಲೆ ಕಂಡುಕೊಂಡಿರುವುದೂ ಉಂಟು.
ಬಹುಕೋಟಿ ಕಂಪನಿಗಳಾದ ನೋಕಿಯಾ, ಸೀಮನ್ಸ್ ಹಾಗೂ ಪ್ರೊಕ್ಟರ್ ಅಂಡ್ ಗ್ಯಾಂಬಲ್‌ಗಳು ಕೂಡ ಭಾರತೀಯ ಪರಿಣತರಿಗೆ ಕೆಲಸ ಕೊಟ್ಟಿವೆ. ಚೀನಾದಲ್ಲಿ ನೌಕರಿ ಮಾಡುತ್ತಿರುವ ಭಾರತೀಯರ ಸಂಖ್ಯೆ ಬಹಳ ವೇಗವಾಗಿ ಬೆಳೆಯುತ್ತಿದೆ ಎನ್ನುತ್ತಾರೆ ಭಾರತೀಯ ರಾಯಭಾರ ಕಚೇರಿಯ ಮೊದಲ ಕಾರ್ಯದರ್ಶಿ (ವಾಣಿಜ್ಯ) ದಿನೇಶ್ ಪಟ್ನಾಯಕ್. ಚೀನಾ ಆಡಳಿತ- ಆಗಮನ ಹಾಗೂ ನಿರ್ಗಮನ ನೀತಿಗಳ ಸಡಿಲಿಕೆ ಕ್ರಮ ಕೂಡ ಹೆಚ್ಚಿನ ಭಾರತೀಯರನ್ನು ಆಕರ್ಷಿಸುತ್ತಿದೆ.
ಸಾರ್ವಜನಿಕ ಭದ್ರತೆ ಸಚಿವಾಲಯ ಕಳೆದ ವಾರ ಪ್ರಕಟಿಸಿರುವಂತೆ- ಚೀನಾದಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಲು ಸಿದ್ಧವಾಗಿರುವ ವಿದೇಶಿ ಆಡಳಿತ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಪರಿಣತರಿಗೆ ಚೀನಾದಲ್ಲಿ ಶಾಶ್ವತವಾಗಿ ನೆಲೆಸಲು ಸ್ವಾಗತ. ಇಂಥ ಮಂದಿ 2003 ರವರೆಗೂ ವೀಸಾ ಇಲ್ಲದೆ ಚೀನಾಕ್ಕೆ ಬರಬಹುದು.
ಇನ್ನೂ ಹೆಚ್ಚಿನ ಸಂಖ್ಯೆಯ ಭಾರತೀಯರು ಉದ್ಯೋಗಕ್ಕಾಗಿ ಚೀನಾಕ್ಕೆ ಬರುವ ಸಂಭವವಿದೆ ಎನ್ನುತ್ತಾರೆ ಪಟ್ನಾಯಕ್. ವಿಶೇಷವಾಗಿ ಸಾಫ್ಟ್‌ವೇರ್, ಬಿಜಿನೆಸ್ ಮೇನೇಜ್‌ಮೆಂಟ್ ಹಾಗೂ ಆರ್ಥಿಕ ವಲಯಗಳಲ್ಲಿ ಭಾರತೀಯರಿಗೆ ಹೆಚ್ಚಿನ ಉದ್ಯೋಗಾವಕಾಶಗಳಿವೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications