ಶಿವಸುಬ್ರಮಣ್ಯಂ ಬಂಧನ ಒಂದು ಕಪಟ ನಾಟಕ-ಗೋಪಾಲ್
ಬೆಂಗಳೂರು : ಶಿವಸುಬ್ರಮಣ್ಯಂನನ್ನು ಸೇಲಂನ ತನ್ನ ಗೃಹದಿಂದ ಹೊತ್ತೊಯ್ಯಲಾಗಿದೆ. ಅದರ ಬಗ್ಗೆ ನನ್ನ ಬಳಿ ಪ್ರತ್ಯಕ್ಷದರ್ಶಿಗಳ ಸಾಕ್ಷ ್ಯ ಇದೆ. ಈ ಬಗ್ಗೆ ಎಫ್ಐಆರ್ ಕೂಡ ನೋಂದಾವಣೆಯಾಗಿದೆ. ಹೀಗಿದ್ದೂ ಕೊಳ್ಳೇಗಾಲದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಎಸ್ಟಿಎಫ್ ಪೊಲೀಸರು ಬೊಬ್ಬೆ ಹೊಡೆಯುತ್ತಿದ್ದಾರೆ. ಶಿವಸುಬ್ರಮಣ್ಯಂ ವಿರುದ್ಧ ಎಸ್ಟಿಎಫ್ ಎಫ್ಐಆರ್ ಫೈಲ್ ಮಾಡಿರುವುದನ್ನು ನಾನು ನೋಡಿಲ್ಲ- ನಕ್ಕೀರನ್ ಸಂಪಾದಕ ಆರ್.ಆರ್.ಗೋಪಾಲ್.
ಕರ್ನಾಟಕ ಎಸ್ಟಿಎಫ್ ಪಡೆ ವಶಕ್ಕೆ ತೆಗೆದುಕೊಂಡಿರುವ ತನ್ನ ಪತ್ರಿಕೆಯ ವರದಿಗಾರ ಹಾಗೂ ವೀರಪ್ಪನ್ನನ್ನು ಮೊದಲು ಸಂದರ್ಶಿಸಿದವನು ಎಂಬ ಅಗ್ಗಳಿಕೆಗೆ ಪಾತ್ರವಾಗಿರುವ ಶಿವಸುಬ್ರಮಣ್ಯಂನನ್ನು ನ್ಯಾಯಾಲದಲ್ಲಿ ಹಾಜರು ಪಡಿಸಬೇಕೆಂದು ಗೋಪಾಲ್ ಮದ್ರಾಸ್ ಹೈಕೋರ್ಟಿಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ನನ್ನ ಗಂಡ ಮನೆಗೆ ಮರಳಿಲ್ಲ, ಅವರ ಅಪಹರಣವಾಗಿರುವ ಸಾಧ್ಯತೆಯೂ ಇದೆ ಎಂದು ವರದಿಗಾರನ ಪತ್ನಿ ಸೇಲಂ ಠಾಣೆಯಲ್ಲಿ ದೂರನ್ನೂ ಕೊಟ್ಟಿದ್ದಾರೆ.
ಗೋಪಾಲ್ ಪ್ರಕಾರ ಶಿವಸುಬ್ರಮಣ್ಯಂ ಬಂಧನ ಒಂದು ಕಪಟ ನಾಟಕ. ಅದರ ಸೂತ್ರಧಾರ ಯಾರೆಂಬುದನ್ನು ತಿಳಿಯಲು ಅವರೀಗ ಹಗಲು ರಾತ್ರಿ ಒದ್ದಾಡುತ್ತಿದ್ದಾರೆ. ವೀರಪ್ಪನ್ನ ಅನೇಕ ನೆಂಟ-ಬಂಟರ ಬಂಧನ ಮತ್ತು ಈ ವರದಿಗಾರನ ಬಂಧನದಿಂದ ಮಂಕು ಕವಿದಂತಾಗಿದ್ದ ವೀರಪ್ಪನ್ ಶಿಕಾರಿಗೆ ಮತ್ತೆ ಒಂದು ವೇಗ ಸಿಕ್ಕಿರುವುದಂತೂ ನಿಜ.(ಇನ್ಫೋ ವಾರ್ತೆ)
-
ನೌಕರಿ ಬಿಟ್ಟು ಸ್ವಂತ ಉದ್ಯಮ: ಹುಣಸೆ ಸಿಹಿತಿಂಡಿಗೆ ಪೇಟೆಂಟ್ ಪಡೆದ ಬೈಲಹೊಂಗಲದ ಟೆಕ್ಕಿ; 17 ದೇಶಗಳಿಗೆ ರಫ್ತು -
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ












Click it and Unblock the Notifications