ವಿದೇಶಿ ಕಂಪನಿಗಳ ಕೈಗೆ ಬೆಂಗಳೂರು ನೀರುಸರಬರಾಜು ವ್ಯವಸ್ಥೆ
ಬೆಂಗಳೂರು : ನೀರು ಸರಬರಾಜಿನಲ್ಲಿ ದೈತ್ಯರಾದ ಫ್ರಾನ್ಸ್‌ನ ವಿವೆಂಡಿ ಮತ್ತು ಸುಯೆಜ್ ಸಂಸ್ಥೆಗಳು ಬೆಂಗಳೂರು ಮಹಾನಗರ ನೀರು ಸರಬರಾಜು ನಿರ್ವಹಣಾ ಯೋಜನೆಯಲ್ಲಿ ಜಂಟಿಯಾಗಿ ಬಂಡವಾಳ ತೊಡಗಿಸುತ್ತಿವೆ. ಈ ಯೋಜನೆಯು ನಿರ್ಮಾಣ, ನಿರ್ವಹಣೆ ಮತ್ತು ಹಸ್ತಾಂತರ ಆಧಾರದ್ದಾಗಿದೆ.
ಖಾಸಗಿ ಸಂಸ್ಥೆಯಾಂದು ಇಡೀ ನಗರವೊಂದರ ನೀರು ಸರಬರಾಜು ನಿರ್ವಹಣೆಯನ್ನು ಹೊರುತ್ತಿರುವ ಭಾರತದ ಮೊಟ್ಟ ಮೊದಲ ಯೋಜನೆ ಇದಾಗಿದೆ. ಈ ಯೋಜನೆಯ ಬಗ್ಗೆ ಕೂಲಂಕಷ ಮಾತುಕತೆ ನಡೆದಿದ್ದು, ಫ್ರೆಂಚ್‌ನ ಈ ಎರಡು ಕಂಪನಿಗಳು ಮತ್ತು ಬೆಂಗಳೂರು ಮಹಾನಗರ ಪ್ರಾಧಿಕಾರಗಳು ಶೀಘ್ರವೇ ಈ ಸಂಬಂಧದ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ.
ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ (ಜೂನ್ 6ರಂದು) ರಾಜ್ಯದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗೀಕರಣ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು. ಆಗಲೇ ನೀರು ಸರಬರಾಜು ವ್ಯವಸ್ಥೆಯ ಖಾಸಗೀಕರಣದ ಸುಳಿವು ದೊರೆತಿತ್ತು.
ಇದು ಒಂದು ಪ್ರಾಯೋಗಿಕ ಅಥವಾ ಮಾರ್ಗದರ್ಶಕ ಯೋಜನೆ ಎಂದು ಇಂಡೋ - ಫ್ರೆಂಚ್ ವೇದಿಕೆಯ ಅಧ್ಯಕ್ಷರಲ್ಲೊಬ್ಬರಾದ ಜೀನ್ ಫ್ರಾಂಕೋಸ್ ಪೊನ್ಸೆಟ್ ಸುದ್ದಿಸಂಸ್ಥೆಯಾಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ. ಈ ಯೋಜನೆ ಯಶಸ್ವಿಯಾದರೆ, ನಾವು ಭಾರತದ ಇನ್ನಿತರ ರಾಜ್ಯಗಳಲ್ಲೂ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸುವುದಾಗಿ ಅವರು ಹೇಳಿದ್ದಾರೆ.
ಈ ಯೋಜನೆ ಕೇವಲ ವಾಣಿಜ್ಯ ವಹಿವಾಟಿನದಾಗಿರದೆ, ಭಾರತ ಹಾಗೂ ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಸಹಕಾರ ಅಭಿವದ್ಧಿಯ ದ್ಯೋತಕವೂ ಆಗಲಿದೆ ಎಂಬುದು ಪೊನ್ಸೆಟ್ ಅವರ ಭಾರತೀಯ ಸಹವರ್ತಿ ರಾಮಕೃಷ್ಣ ಹೆಗಡೆ ಅವರ ಅಂಬೋಣ.
ಈ ಕ್ಷೇತ್ರದಲ್ಲಿ ಫ್ರೆಂಚ್, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ಹೊಂದಿದೆ. ನಾವು ಅದರ ಸದುಪಯೋಗ ಪಡೆಯಬಯಸುತ್ತೇವೆ ಎಂದು ಹೆಗಡೆ ಹೇಳಿದ್ದಾರೆ. ಈ ವಹಿವಾಟಿನಲ್ಲಿ ವಿವೆಂಡಿ ಎನ್ವಿರೋನ್‌ಮೆಂಟ್ ಹಾಗೂ ಸುಯೆಜ್ ಕಂಪನಿಗಳು ಭಾರತದ ಮಾಹಿತಿ ತಂತ್ರಜ್ಞಾನ ನಗರಿಯ 6 ದಶಲಕ್ಷ ಜನರಿಗೆ ನೀರು ಒದಗಿಸುವ ವ್ಯವಸ್ಥೆಯನ್ನು ಉತ್ತಮ ಪಡಿಸುವತ್ತ ಹೆಚ್ಚ ಗಮನ ಹರಿಸಲಿವೆ.
ಈ ಯೋಜನೆಯಲ್ಲಿ ಈ ಎರಡು ಸಂಸ್ಥೆಗಳು ಜಲ ಮೂಲವನ್ನು ಹುಡುಕಿ, ನೀರು ಸರಬರಾಜು ಮಾಡುವವರೆಗೆ ಹಾಗೂ ತ್ಯಾಜ್ಯ ನೀರನ್ನು ಪುನರ್‌ಬಳಕೆಗೆ ಶುದ್ಧೀಕರಿಸುವವರೆಗಿನ ಜವಾಬ್ದಾರಿಯನ್ನು ಹೊರಲಿವೆ. ಈ ಪ್ರಯೋಗದಲ್ಲಿ ತಾವು ಈಗಾಗಲೇ ಫ್ರಾನ್ಸ್‌ನಲ್ಲಿ ಗೆದ್ದಿರುವ ಉದಾಹರಣೆಯನ್ನು ಪೊನ್ಸೆಟ್ ಐ.ಎ.ಎನ್.ಎಸ್. ಸುದ್ದಿ ಸಂಸ್ಥೆಗೆ ನೀಡಿದ್ದಾರೆ.
ನೀರು ಸರಬರಾಜು ಕ್ಷೇತ್ರದ ಖಾಸಗೀಕರಣಕ್ಕೆ ಸಂಬಂಧಿಸಿದಂತೆ, ನಾವು ತಾಂತ್ರಿಕ ಮತ್ತು ಕಾನೂನಾತ್ಮಕ ಚೌಕಟ್ಟನ್ನು ರೂಪಿಸುವಲ್ಲಿ ಕೂಡ ಭಾರತ ಸರಕಾರದೊಂದಿಗೆ ಕೈಜೋಡಿಸುವುದಾಗಿ ಅವರು ಹೇಳಿದ್ದಾರೆ. ಎನ್ರಾನ್ ವಿವಾದದ ಬಳಿಕವೂ ಈ ಎರಡು ಸಂಸ್ಥೆಗಳು ಭಾರತ ನೆಲದಲ್ಲಿ ಬಿಲ್ಡ್ ಆಪರೇಟ್ ಅಂಡ್ ಟ್ರಾನ್ಸ್‌ವರ್ ಆಧಾರದ (ಬಿ.ಓ.ಟಿ) ಯೋಜನೆಯಲ್ಲಿ ಹಣ ಹೂಡುತ್ತಿರುವುದು ಉದ್ಯಮಿಗಳಿಗೆ ಅಚ್ಚರಿ ಮೂಡಿಸಿದೆ.
ಮುಖಪುಟ / ಇವತ್ತು... ಈ ಹೊತ್ತು...
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications