ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರ್‌ಬಿಐನಿಂದ ನಗದು ಮೀಸಲು ಅನುಪಾತ,ಬ್ಯಾಂಕ್‌ ದರ ಕಡಿತ

By Staff
|
Google Oneindia Kannada News

ಮುಂಬಯಿ : ಕುಸಿಯುತ್ತಿರುವ ಮಾರುಕಟ್ಟೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ - ಸೋಮವಾರ ಬ್ಯಾಂಕ್‌ ರೇಟ್‌ ಕಡಿತ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದೆ. 0.5ರಷ್ಟು ಕಡಿತ ಮಾಡುವ ಮೂಲಕ ಬ್ಯಾಂಕ್‌ ದರವನ್ನು 7 ರಿಂದ 6.5ಕ್ಕೆ ತರಲಾಗಿದೆ.

ಅಲ್ಲದೆ ಹೆಚ್ಚುವರಿ ಲೇಣಿಯನ್ನು (additional liquidity) ಏರಿಸುವ ದೃಷ್ಟಿಯಿಂದ ನಗದು ಮೀಸಲು ಅನುಪಾತವನ್ನು (CRR cut by 2%) 200ರ ಆಧಾರದಲ್ಲಿ ಪ್ರತಿಶತ 5.50ಯಷ್ಟು ಕಡಿತಗೊಳಿಸುವ ಮೂಲಕ 8000 ಕೋಟಿ ರುಪಾಯಿಗಳನ್ನು ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ತೊಡಗಿಸಲಾಗಿದೆ. 1973ರಿಂದೀಚೆಗೆ ಇದು ಅತ್ಯಂತ ಕಡಿಮೆ ಬ್ಯಾಂಕ್‌ದರ ಆಗಿದೆ.

ರಿಸರ್ವ್‌ ಬ್ಯಾಂಕಿನ ಅರ್ಧವಾರ್ಷಿಕ ಸಾಲನೀತಿಯನ್ನು ಬಿಡುಗಡೆ ಮಾಡಿದ ರಿಸರ್ವ್‌ ಬ್ಯಾಂಕ್‌ ಗೌರ್ನರ್‌ ಬಿಮಲ್‌ ಜಲನ್‌ ಈ ವಿಷಯ ತಿಳಿಸಿದರು. ನಗದು ಮೀಸಲು ಅನುಪಾತ ಹಾಗೂ ಬ್ಯಾಂಕ್‌ದರ ಕಡಿತದಿಂದ 8000 ಕೋಟಿ ರುಪಾಯಿಗಳ ಸಂಪನ್ಮೂಲ ಕ್ರೋಡೀಕರಣ ಆಗಲಿದೆ ಎಂದು ಅವರು ವಿವರಿಸಿದರು.

(ಇನ್‌ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X