ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 17ರ ಸಂಜೆ 6:58ಕ್ಕೆ ತಲಕಾವೇರಿಯಲ್ಲಿ ತೀರ್ಥೋದ್ಭವ

By Staff
|
Google Oneindia Kannada News

Talakaveriಮೈಸೂರು : ಅಕ್ಟೋಬರ್‌ 17ರಂದು ತುಲಾಸಂಕ್ರಮಣ. ಭಾರತೀಯ ಕಾಲಮಾನದ ರೀತ್ಯ ಬುಧವಾರ ಸಂಜೆ 6:58ಕ್ಕೆ ಸರಿಯಾಗಿ ಮೇಷ ಲಗ್ನದಲ್ಲಿ ತಲಕಾವೇರಿಯ ಬ್ರಹ್ಮ ಕುಂಡಿಕೆಯಲ್ಲಿ ಪವಿತ್ರ ತೀರ್ಥೋದ್ಭವ ಆಗಲಿದೆ.

ದಕ್ಷಿಣದ ಗಂಗೆ ಎಂದೇ ಖ್ಯಾತವಾಗಿರುವ ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯಲ್ಲಿ ತೀರ್ಥೋದ್ಭವವನ್ನು ನೋಡಲೆಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ಪ್ರತಿವರ್ಷ ಇಲ್ಲಿ ಸೂರ್ಯನು ತುಲಾ ರಾಶಿಗೆ ಪ್ರವೇಶಿಸುವ ಪುಣ್ಯಕಾಲದಲ್ಲಿ ತೀರ್ಥೋದ್ಭವ ಆಗುತ್ತದೆ.

ಈ ಹಿನ್ನೆಲೆಯಲ್ಲಿ ಕಾವೇರಿ ಜಾತ್ರೆ ಅಥವಾ ತುಲಾ ಸಂಕ್ರಮಣ ಜಾತ್ರೆ ಸೆ.26ರಿಂದಲೇ ಇಲ್ಲಿ ಆರಂಭವಾಗಿದೆ. ಕಾವೇರಿಯ ಪವಿತ್ರ ಸ್ನಾನಕ್ಕೆಂದು ಹಾಗೂ ಜಾತ್ರೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ಅನುಕೂಲಗಳನ್ನು ಕಲ್ಪಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಭಾಗಮಂಡಲ , ತಲಕಾವೇರಿ ಮತ್ತು ಮಡಿಕೇರಿಯಲ್ಲಿ ಹಲವು ಸ್ವಯಂ ಸೇವಾ ಸಂಘಟನೆಗಳು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರವಾಸಿಗರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿವೆ. ಕಾವೇರಿ ಜಾತ್ರೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ.

ತಲಕಾವೇರಿಯ ಅಗಸ್ತ್ಯೇಶ್ವರನ ದೇವಾಲಯದಲ್ಲಿ ಬುಧವಾರ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು ನಡೆಯುತ್ತಿವೆ. ತೀರ್ಥೋದ್ಭವ ವೀಕ್ಷಣೆಗೆ ಸುಮಾರು 50 ಸಾವಿರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಕಳೆದ ವರ್ಷ ಅಕ್ಟೋಬರ್‌ 17ರಂದು ಮಧ್ಯಾಹ್ನ 12.31ಕ್ಕೆ ತಲಕಾವೇರಿಯ ತೀರ್ಥೋದ್ಭವ ಆಗಿತ್ತು.

(ಇನ್‌ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X