Get Updates
Get notified of breaking news, exclusive insights, and must-see stories!

ದೇವರ ವೈಭವಕ್ಕೆ ಬರವಿಲ್ಲ !

ಕುಂದಾಪುರ : ದೇವರಿಲ್ಲದೆ ಏನಾದರೂ ನಡೆಯುವುದು ಉಂಟೇ ? ಸರ್ವಶಕ್ತ ದೇವರ ಮುಂದೆ ರಾಶಿ ಬೇಡಿಕೆಗಳನ್ನು ಇಟ್ಟು ಹರಕೆ ಹೇಳಿಕೊಳ್ಳುವ ಸಂಪ್ರದಾಯಕ್ಕೆ ಮನಶಾಸ್ತ್ರಜ್ಞರದ್ದೇ ಬೆಂಬಲವಿದೆ.

ಈ ಹರಕೆಯ ದೆಸೆಯಿಂದ ಪ್ರಸಿದ್ಧ ದೇವಸ್ಥಾನಗಳು ಕುಬೇರನ ರಾಜಧಾನಿಯಾಗುತ್ತಿರುವುದಕ್ಕೆ ತಿರುಪತಿ, ಶಬರಿಮಲೈ, ಗುರುವಾಯೂರು ದೇವಳಗಳು ಸಾಕ್ಷಿಯಾದರೆ,ಭಕ್ತಾದಿಗಳ ಕೃಪೆಯಿಂದ ಆ ಹಾದಿಯಲ್ಲಿ ಕೊಲ್ಲೂರು ಉಡುಪಿಗಳೂ ದಾಪುಗಾಲು ಹಾಕಿವೆ.

ಇಷ್ಟಾರ್ಥ ಸಿದ್ಧಿಗಾಗಿ ಕೊಲ್ಲೂರು ಮೂಕಾಂಬಿಕೆಗೆ ಬೆಳ್ಳಿ ಧ್ವಜಸ್ತಂಭ ನಿರ್ಮಿಸುವುದಾಗಿ ಹರಕೆ ಹೊತ್ತಿದ್ದ ಉದ್ಯಮಿ ವಿಜಯ ಮಲ್ಯ ಅವರು ಬೆಳ್ಳಿ ಧ್ವಜಕ್ಕೆ ಬದಲಾಗಿ ಚಿನ್ನದ ಧ್ವಜಸ್ತಂಭ ಅರ್ಪಿಸುವುದಾಗಿ ಹೇಳಿದ್ದಾರೆ.

ಈ ವಿಷಯವನ್ನು ಕೊಲ್ಲೂರು ದೇವಳದ ಆಡಳಿತ ಧರ್ಮದರ್ಶಿ ಬಿ.ಎಂ. ಸುಕುಮಾರ ಶೆಟ್ಟಿ ತಿಳಿಸಿದ್ದಾರೆ. ಗುರುವಾಯೂರು, ಶಬರಿಮಲೈ ಮತ್ತಿತರೆಡೆ ದೇವಾಲಯದ ಚಿನ್ನದ ಧ್ವಜಮರದ ಕಸೂತಿ ಕೆಲಸ ಮಾಡಿರುವ ಸಂದಿಲ್‌ನಾಥನ್‌ ಅವರು ಕೊಲ್ಲೂರಿನ ಚಿನ್ನದ ಧ್ವಜಮರದ ಕೆಲಸವನ್ನು ಕೈಗೆತ್ತಿಕೊಳ್ಳಲಿದ್ದಾರೆ.

ಕೊಲ್ಲೂರಿಗೂ ತಮಿಳುನಾಡು ಭಕ್ತರಿಗೂ ಶ್ರೀಮಂತ ಸಂಬಂಧವಿದೆ. ಇತ್ತೀಚೆಗಷ್ಟೇ ಅನಾಮಿಕನಾಗಿಯೇ ಉಳಿಯಬಯಸಿದ ತಮಿಳು ಭಕ್ತ , ದೇವಿಯ ವಾಹನ ಸಿಂಹಕ್ಕೆ ಚಿನ್ನದ ಮುಖವಾಡವನ್ನು ಅರ್ಪಿಸಿದ್ದರೆ ಈಗ ಸುಕುಮಾರ ಶೆಟ್ಟರು ಹೇಳುವ ಪ್ರಕಾರ ಇಡೀ ದೇವಾಲಯ ಗೋಪುರದ ಛಾವಣಿಗೆ ಚಿನ್ನ ಹೊದೆಸುವ ಯೋಜನೆ ಆಡಳಿತ ಮಂಡಳಿಯ ಮುಂದಿದೆ. ಈ ಮಹತ್ಕಾರ್ಯಕ್ಕೂ ತಮಿಳುನಾಡಿನ ಭಕ್ತರೊಬ್ಬರು 75 ಲಕ್ಷ ರೂಪಾಯಿ ನೀಡುವುದಾಗಿ ಪ್ರತಿಜ್ಞೆ ಮಾಡಿದ್ದಾರಂತೆ. ಮತ್ತೆ ದೇವಿಯ ಹುಂಡಿಯಲ್ಲಿ ಜಯಲಿಲಿತಾ ಪ್ರತಿಮೆ, ಎಂಜಿಆರ್‌ ಪ್ರತಿಮೆ... ರಾಶಿ ಕಾಸು ಇವೆಲ್ಲಾ ಮಾಮೂಲಿನದೇ.

ಕಡಗೋಲುದ್ದ ಕೃಷ್ಣ ಮೂರ್ತಿಗೆ...

Udupi Krishnaಇದು ಕೊಲ್ಲೂರಿನ ಸಿರಿವಂತಿಕೆಯಾದರೆ ಮುಖಪುಟ / ಲೋಕೋಭಿನ್ನರುಚಿ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+