Get Updates
Get notified of breaking news, exclusive insights, and must-see stories!

ಭಾರತೀಯ ವಿದ್ಯಾಭವನದಿಂದ ಗಾಂಧಿ ಕುರಿತ ಕನ್ನಡ ಪುಸ್ತಕ ಅನಾವರಣ

ಬೆಂಗಳೂರು : ಮಹಾತ್ಮಾ ಗಾಂಧಿ ಕುರಿತ ಸಂಪಾದಿತ ಕೃತಿಗಳ ಕನ್ನಡ ಅವತರಣಿಕೆ ‘ಮಹಾತ್ಮಾ ಗಾಂಧಿ ಕೃತಿ ಸಂಚಯ, ಸಂಪುಟ 10’ ಪುಸ್ತಕವನ್ನು ಭಾರತೀಯ ವಿದ್ಯಾಭವನ ಮಂಗಳವಾರ ಬಿಡುಗಡೆ ಮಾಡಿದೆ.

ಭಾರತೀಯ ವಿದ್ಯಾಭವನ ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ರಾಜ್ಯ ತೆರಿಗೆ ಸುಧಾರಣಾ ಆಯೋಗದ ಅಧ್ಯಕ್ಷರಾಗಿರುವ ಎಂ. ವೀರಪ್ಪ ಮೊಯ್ಲಿ ಅವರು ಈ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಸಮಾಜಕ್ಕೆ ಗಾಂಧಿ ನೀಡಿದ ಕೊಡುಗೆ ಅಪಾರ. ಗಾಂಧಿ ತತ್ವಗಳು ಸಾರ್ವಕಾಲಿಕವಾದುದು ಎಂದ ಮೊಯ್ಲಿ ಸಮಾಜದಲ್ಲಿ ಈ ಮೌಲ್ಯಗಳು ಸವೆಯುತ್ತಿರುವುದರ ಬಗ್ಗೆ ಬೇಜಾರು ಮಾಡಿಕೊಂಡರು.

ಅಮೆರಿಕಾ ದುರಂತದ ಬಗೆ ್ಗ ಮಾತನಾಡುತ್ತಾ ವೀರಪ್ಪ ಮೊಯ್ಲಿ ಅವರು, ಕೇಂದ್ರ ಸರಕಾರದ ನಿಲುವುಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಗಾಂಧಿಯಂತಹ ಮಹಾನ್‌ ಪುರುಷರನ್ನು ಪಡೆದ ನಾಡಿಗೆ ಅಮೆರಿಕವನ್ನು ಪ್ರಶ್ನಿಸುವ ನೈತಿಕ ಹಕ್ಕು ಇದ್ದೇ ಇರುತ್ತದೆ. ಯಾವ ರಾಷ್ಟ್ರದ ಮೇಲೆ ಯುದ್ದ ಸಾರುತ್ತಿದೆ ಎಂಬುದನ್ನು ಸ್ಪಷ್ಟಪಡಿಸುವಂತೆ ಭಾರತ ಅಮೆರಿಕವನ್ನು ಒತ್ತಾಯಿಸಬೇಕು ಎಂದು ಮೊಯ್ಲಿ ಅಭಿಪ್ರಾಯಪಟ್ಟರು.

ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ. ಗುರುಲಿಂಗ ಕಾಪಸೆ ಮತ್ತು ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್‌. ರಾಮಾನುಜ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಲಕ್ಷ್ಮಿ ಕೇಶವ್‌ ಹಾಗೂ ವಾಣಿ ವಿದ್ಯಾ ಕೇಂದ್ರದ ವಿದ್ಯಾರ್ಥಿಗಳಿಂದ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+