ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರು : ಅ.1 ರಿಂದ ದೂರವಾಣಿ ಬಾಡಿಗೆ 140 ರು. ದುಬಾರಿ

By Staff
|
Google Oneindia Kannada News

ಮೈಸೂರು : ಬರುವ ಅಕ್ಟೋಬರ್‌ 1 ರಿಂದ ಮೈಸೂರು ಟೆಲಿಕಾಂ ವಲಯ ವ್ಯಾಪ್ತಿಯ ಬಳಕೆದಾರರ ಟೆಲಿಫೋನ್‌ ದ್ವೆ ೖ ಮಾಸಿಕ ಬಾಡಿಗೆ ದುಬಾರಿಯಾಗಲಿದೆ. ಈವರೆಗಿದ್ದ 360 ರುಪಾಯಿಗಳ ಬಾಡಿಗೆ ಅ.1 ರಿಂದ 500 ರುಪಾಯಿಗೆ ಏರಿದೆ.

ಟೆಲಿಫೋನ್‌ ಬಾಡಿಗೆ ಹೆಚ್ಚಳದ ವಿಷಯವನ್ನು ಟೆಲಿಕಾಂ ಇಲಾಖೆ ಈಗಾಗಲೇ ತನ್ನ ಗ್ರಾಹಕರಿಗೆ ತಿಳಿಸುವ ಕಾರ್ಯವನ್ನು ಪ್ರಾರಂಭಿಸಿದೆ. ಅಂದಹಾಗೆ, ದೂರವಾಣಿ ಬಾಡಿಗೆಯ ಈ ದಿಢೀರ್‌ ಹೆಚ್ಚಳಕ್ಕೆ ಕಾರಣವೇನು? ಅಮೆರಿಕ ಹಾಗೂ ಆಫ್ಘನ್‌ಯುದ್ಧ ಎಂದು ಭಾವಿಸಿದ್ದಲ್ಲಿ ಅದು ತಪ್ಪು. ಫೋನ್‌ ಬಾಡಿಗೆ ದುಬಾರಿಯಾಗಲಿಕ್ಕೆ ಕಾರಣ ಏನೆಂದರೆ, ಮೈಸೂರು ಟೆಲಿಕಾಂನ ಜನರಲ್‌ ಮೇನೇಜರ್‌ ಫರೂಕ್‌ ಅಮೀನ್‌ ಹೇಳುತ್ತಾರೆ-

ದೂರವಾಣಿ ಗ್ರಾಹಕರ ಸಂಖ್ಯೆ 1 ಲಕ್ಷದ ಗಡಿ ದಾಟಿದಲ್ಲಿ ಬಾಡಿಗೆಯ ದರವನ್ನು ಹೆಚ್ಚು ಮಾಡಲಾಗುತ್ತದೆ. ಪ್ರಸ್ತುತ, ಮೈಸೂರು ಟೆಲಿಕಾಂ ವಲಯದ ಗ್ರಾಹಕರ ಸಂಖ್ಯೆ 1 ಲಕ್ಷ ದಾಟಿದ್ದರಿಂದಲೇ ಈ ಹೆಚ್ಚಳ. ಅಂದಹಾಗೆ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿನ ಟೆಲಿಫೋನ್‌ ಗ್ರಾಹಕರ ಸಂಖ್ಯೆ 1 ಲಕ್ಷ 13 ಸಾವಿರ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X