ಬಿನ್ ಲ್ಯಾಡೆನ್‌ಗೆ ಛೀಮಾರಿ ಹಾಕಿದ ವಿದ್ಯಾರ್ಥಿ ಆಸ್ಪತ್ರೆಗೆ
ಸೂರಿ (ಪಶ್ಚಿಮ ಬಂಗಾಳ) : ಇನ್ನೇನು ಮೂರನೇ ಮಹಾಯುದ್ಧ ಸ್ಫೋಟಿಸುವ ಲಕ್ಷಣಗಳು ಇಣುಕುತ್ತಿರುವಾಗ ಒಸಾಮ ಬಿನ್ ಲ್ಯಾಡೆನ್ ಅನುಯಾಯಿಗಳೂ ಮುಷ್ಟಿಯನ್ನು ಬಿಗಿ ಹಿಡಿಯುತ್ತಿದ್ದಾರೆ. ಅಮೆರಿಕಾ ತಾಲಿಬಾನ್ ಮೇಲೆ ದಾಳಿ ಮಾಡಿದರೆ, ತಾಲಿಬಾನ್ ಅಮೆರಿಕಕ್ಕೆ ಬೆಂಬಲ ಕೊಡುವ ಎಲ್ಲಾ ರಾಷ್ಟ್ರಗಳನ್ನೂ ದಂಡಿಸುವ ಠರಾವು ಮಾಡಿದೆ. ಇದು ಮೇಲಿನ ಸ್ಥರದ ಘೋಷಣೆಯಾದರೆ, ಆಂತರ್ಯದಲ್ಲಿ ಲ್ಯಾಡೆನ್‌ನನ್ನು ಆರಾಧ್ಯ ದೈವ ಅಂದುಕೊಂಡಿರುವವರಿಗೂ ಕೊರತೆಯಿಲ್ಲ.
ಯುದ್ಧ ಸ್ಫೋಟಿಸಿದರೆ, ಲ್ಯಾಡೆಲ್ ಭಕ್ತರೆಲ್ಲಾ ಭುಗಿಲೇಳುವ ಸಾಧ್ಯತೆಯಿದೆ. ಅದಕ್ಕೆ ಪುಟ್ಟದೊಂದು ನಿದರ್ಶನ ಇದೋ ಇಲ್ಲಿದೆ...
ಮಂಗಳವಾರ ಅಮೆರಿಕಾದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಕ್ಕೆ ವಿಮಾನಗಳಿಂದ ಗುದ್ದಿ, ಸಾವಿರಾರು ಮಂದಿ ಸಾವಿಗೆ ಕಾರಣರಾದ ಲ್ಯಾಡೆನ್ ಅನುಯಾಯಿಗಳೆನ್ನಲಾಗುತ್ತಿರುವ ಭಯೋತ್ಪಾದಕರನ್ನು ಇಲ್ಲಿನ ಶಾಲೆಯಾಂದರ ಮಕ್ಕಳು ಬಾಯಿಗೆ ಬಂದಂತೆ ಬಯ್ದಿದ್ದಾರೆ. ಮಾಧ್ಯಮಿಕ ಶಾಲೆಯ ಮಕ್ಕಳು ಟಿವಿಯಲ್ಲಿ ತಾವು ನೋಡಿದ ಅಮೆರಿಕಾ ದುರಂತದ ಚಿತ್ರಣಗಳ ಬಗ್ಗೆ ಮಾತಾಡುತ್ತಾ, ಒಸಾಮ ಬಿನ್ ಲ್ಯಾಡೆನ್‌ನನ್ನು ಹೀನಾಮಾನ ಜರೆದಿದ್ದಾರೆ.
ಇದು ಹೇಗೋ ಶಾಲೆಯ ಉರ್ದು ಶಿಕ್ಷಕರೊಬ್ಬರ ಕಿವಿಗೆ ಬಿದ್ದಿತು. ಲ್ಯಾಡೆನ್ ಅಭಿಮಾನಿಯಾದ ಮೇಷ್ಟ್ರು ಕೆಂಡಾಮಂಡಲವಾದರು. ಲ್ಯಾಡೆನ್‌ನನ್ನು ಜರೆಯಲು ಕಾರಣನಾದ ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಚಚ್ಚಿದರು. ಹುಡುಗ ನೆಲಕ್ಕೆ ಕುಸಿದು ಬಿದ್ದ. ಈಗ ಆಸ್ಪತ್ರೆಯಲ್ಲಿ ಸಾವು- ಬದುಕಿನ ಹೋರಾಟ ನಡೆಸಿದ್ದಾನೆ ಆ ವಿದ್ಯಾರ್ಥಿ !
(ಇನ್ಫೋ ವಾರ್ತೆ)
Post Your Views
ಮುಖಪುಟ / ಭಯೋತ್ಪಾದನೆ
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications