Get Updates
Get notified of breaking news, exclusive insights, and must-see stories!

ನ್ಯೂಯಾರ್ಕ್‌ ದುರಂತದಲ್ಲಿ 250 ಕ್ಕೂ ಹೆಚ್ಚು ಭಾರತೀಯರ ಸಾವು?

ನ್ಯೂಯಾರ್ಕ್‌ : ಇಲ್ಲಿನ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳ ಮೇಲೆ ಮಂಗಳವಾರ ನಡೆದ ಭಯೋತ್ಪಾದಕರ ದಾಳಿಯಲ್ಲಿ 250 ಕ್ಕೂ ಹೆಚ್ಚು ಭಾರತೀಯರು ಸತ್ತಿರುವುದಾಗಿ ಅಥವಾ ಗಾಯಗೊಂಡಿರುವುದಾಗಿ ಅಥವಾ ಕಣ್ಮರೆಯಾಗಿರುವುದಾಗಿ ಶಂಕಿಸಲಾಗಿದೆ. ಈ ಕಚೇರಿಗಳಲ್ಲಿ ಭಾರೀ ಸಂಖ್ಯೆಯ ಭಾರತೀಯರು ಉದ್ಯೋಗ ನಿರತರಾಗಿದ್ದರು.

ಭಾರತೀಯ ರಾಯಭಾರ ಕಚೇರಿಯ ಶಶಿ ತ್ರಿಪಾಠಿ ತಿಳಿಸಿರುವಂತೆ ಈವರೆಗೆ 37 ಮಂದಿ ಭಾರತೀಯರು ಗಾಯಗೊಂಡಿರುವ ಬಗೆಗೆ ವರದಿಗಳು ಲಭ್ಯವಾಗಿದ್ದು , ಅವರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಕೆಲವು ಸಮುದಾಯಗಳ ಮುಖಂಡರು ಹೇಳುವ ಪ್ರಕಾರ 60 ರಿಂದ ನೂರು ಮಂದಿ ಭಾರತೀಯರು ಗಾಯಗೊಂಡಿದ್ದಾರೆ.

ಈಗಾಗಲೇ ಭಾರತೀಯ ರಾಯಭಾರಿ ಕಚೇರಿ ವಿವಿಧ ಆಸ್ಪತ್ರೆಗಳಿಗೆ ತನ್ನ ಪ್ರತಿನಿಧಿಗಳನ್ನು ಕಳುಹಿಸಿ ಅಲ್ಲಿ ದಾಖಲಾಗಿರುವ ಭಾರತೀಯರ ಬಗೆಗೆ ಮಾಹಿತಿಗಳನ್ನು ಸಂಗ್ರಹಿಸುತ್ತಿದೆ. ನ್ಯೂಯಾಕ್‌ನ ಮೇಯರ್‌ ರುಡಿ ಗುಯ್‌ಲಿಯಾನಿ ಅವರು ನಗರದಲ್ಲಿ 4763 ಮಂದಿ ಕಣ್ಮರೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

(ಪಿಟಿಐ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+