ಮೈಸೂರು ವಿವಿಯಲ್ಲಿ ಕನ್ನಡದ ಕೊಲೆ: ದೇ.ಜವರೇಗೌಡ ಕಿಡಿ

ಬೆಂಗಳೂರು : ಮೈಸೂರು ವಿಶ್ವ ವಿದ್ಯಾಲಯದ ಪದವಿ ತರಗತಿಯಲ್ಲಿ ಕನ್ನಡವನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವುದನ್ನು ತೀವ್ರವಾಗಿ ವಿರೋಧಿಸಿರುವ ಮೈಸೂರು ವಿವಿಯ ಮಾಜಿ ಉಪಕುಲಪತಿ ದೇ. ಜವರೇಗೌಡರು, ಈಗಿನ ಉಪಕುಲಪತಿಗಳಾದ ಡಾ. ಎಸ್‌. ಎನ್‌. ಹೆಗ್ಡೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಅವರು ಶುಕ್ರವಾರ ಕನ್ನಡ ಚಳವಳಿ ಹೋರಾಟದಲ್ಲಿ 39 ವರ್ಷಗಳನ್ನು ಕಳೆದ ವಾಟಾಳ್‌ ನಾಗರಾಜ್‌ ಅವರಿಗೆ ಕನ್ನಡ ಚಳವಳಿ ವಾಟಾಳ್‌ ಅಭಿಮಾನಿಗಳ ಸಂಘ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಪದವಿಯಲ್ಲಿ ಎರಡು ವರ್ಷಗಳ ಕನ್ನಡ ಬೋಧನೆಯನ್ನು ಒಂದೇ ವರ್ಷಕ್ಕೆ ಸೀಮಿತಗೊಳಿಸುವ ಹೆಗ್ಡೆ ಅವರ ಇಚ್ಛೆ ಕನ್ನಡಕ್ಕೆ ಮಾರಕವಾದುದು ಎಂದು ಜವರೇಗೌಡ ಟೀಕಿಸಿದರು.

ಈಗಾಗಲೇ ಐಎಎಸ್‌ ಅಧಿಕಾರಿಗಳು ದೇಶವನ್ನು ಹಾಳು ಮಾಡಿದ್ದಾರೆ. ಕನ್ನಡದ ಬಗ್ಗೆ ಅವರೇನೂ ಆಸಕ್ತಿ ಉಳಿಸಿಕೊಂಡಿಲ್ಲ. ಕನ್ನಡ ಭಾಷೆಯನ್ನು ಉಳಿಸದ ಮಂತ್ರಿಗಳು, ಶಾಸಕರು ರಾಜೀನಾಮೆ ನೀಡಲಿ ಎಂದು ಜವರೇಗೌಡರು ಆಕ್ರೋಶ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ವಾಟಾಳ್‌ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ. ಎನ್‌. ಬಸವಾರಾಧ್ಯ ಕನ್ನಡ ಚಳವಳಿ ಸಂಕೇತವಾಗಿ ಪಂಜನ್ನು ನೀಡಿ ಅಭಿನಂದಿಸಿದರು.

ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್‌, ಹಿರಿಯ ಸ್ವಾತಂತ್ರ್ಯ ಯೋಧ ಎಚ್‌. ಎಸ್‌. ದೊರೆಸ್ವಾಮಿ, ಕವಿ ಹಾಗೂ ಮಾಜಿ ಶಾಸಕ ಸಿದ್ಧಲಿಂಗಯ್ಯ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

What do you think about this story ?

ಮುಖಪುಟ / ಇವತ್ತು... ಈ ಹೊತ್ತು...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+