ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

25 ಶತಕೋಟಿ ಡಾಲರ್‌ಗೆ ಕಾಂಪ್ಯಾಕ್‌ ಕಂಪ್ಯೂಟರ್‌ ಬಿಕರಿ!

By Staff
|
Google Oneindia Kannada News

ಕಂಪ್ಯೂಟರ್‌ ತಯಾರಿಕೆಯಲ್ಲಿ ಹೆಸರು ಮಾಡಿರುವ ಕಾಂಪ್ಯಾಕ್‌ ಸಂಸ್ಥೆಯನ್ನು ಹೆವ್ಲೆಟ್‌ ಪ್ಯಾಕಾರ್ಡ್‌ ಕಂಪನಿ ಖರೀದಿಸಲಿದೆ. ಸೊರಗುತ್ತಿರುವ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ತೀವ್ರ ಪೋಟಿ ನಡೆಸುತ್ತಿದ್ದ ಈ ಕಂಪನಿಗಳು ಈಗ ಒಂದಾಗುತ್ತಿರುವುದು ಕಂಪ್ಯೂಟರ್‌ ಮಾರುಕಟ್ಟೆಯನ್ನೇ ಕೊಳ್ಳೆಹೊಡೆಯಬಲ್ಲ ನಡೆಯಾಗಿದೆ.

ಕಾಂಪ್ಯಾಕ್‌ನ ಒಟ್ಟಾರೆ ಸ್ಟಾಕನ್ನು 25 ಶತಕೋಟಿ ಡಾಲರ್‌ಗೆ ಹೆವ್ಲೆಟ್‌- ಪ್ಯಾಕಾರ್ಡ್‌ ಖರೀದಿಸಲಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಈ ಹೊತ್ತಿನ ಸೆನ್ಸೇಷನ್‌ ಸುದ್ದಿಯಿದು. ಹೆವ್ಲೆಟ್‌ ಪ್ಯಾಕಾರ್ಡ್‌ನ ಸಿಇಓ ಹಾಗೂ ಅಧ್ಯಕ್ಷ ಕಾರ್ಲಿ ಫಯೋರಿನಾ ಜಂಟಿ ಕಂಪನಿಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಕಾಂಪ್ಯಾಕ್‌ನ ಸಿಇಓ ಹಾಗೂ ಅಧ್ಯಕ್ಷ ಮೈಕೆಲ್‌ ಕ್ಯಾಪೆಲ್ಲಾಸ್‌ ಅಧ್ಯಕ್ಷರಾಗಿ ಕೆಲಸ ಮಾಡುವರು.

ಕ್ಯಾಪೆಲ್ಲಾಸ್‌ ಸೇರಿದಂತೆ ಕಾಂಪ್ಯಾಕ್‌ ಕಂಪನಿಯ ನಿರ್ದೇಶಕರ ಮಂಡಳಿಯಲ್ಲಿರುವ ನಾಲ್ವರು ಹೆವ್ಲೆಟ್‌- ಪ್ಯಾಕಾರ್ಡ್‌ ನಿರ್ದೇಶಕರ ಮಂಡಳಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X