Get Updates
Get notified of breaking news, exclusive insights, and must-see stories!

ಚಿತ್ತಾರದ ಪ್ಲಾಸ್ಟಿಕ್‌ ಬ್ಯಾಗ್‌ಗಳು ಇನ್ನು ಮುಂದೆಕಾನೂನು ಸಮ್ಮತವಲ್ಲ

ಬೆಂಗಳೂರು : ಇನ್ನು ಮುಂದೆ ಕೇವಲ ಕಪ್ಪು ಮತ್ತು ಬಿಳಿ ಬಣ್ಣದ ಪ್ಲಾಸ್ಟಿಕ್‌ ಬ್ಯಾಗ್‌ಗಳು ಮಾತ್ರ ಕಾನೂನು ಸಮ್ಮತ. ತರಾವಳಿ ಬಣ್ಣ, ಚಿತ್ತಾರದ ಪ್ಲಾಸ್ಟಿಕ್‌ ಬ್ಯಾಗ್‌ಗಳನ್ನು ಉತ್ಪಾದಿಸುವುದು ಮತ್ತು ಬಳಸುವುದು ಸರಿಯಲ್ಲ.

ಈ ಕುರಿತ ನೋಟಿಫಿಕೇಷನ್‌ನ್ನು ಕೇಂದ್ರ ಪರಿಸರ ಸಚಿವಾಲಯ ಎರಡು ವರ್ಷಗಳ ಹಿಂದೆಯೇ ಜಾರಿ ಮಾಡಿದ್ದರೂ, ರಾಜ್ಯದ ಪ್ಲಾಸ್ಟಿಕ ತಯಾರಕರು ಈ ಬಾರಿಯಷ್ಟೇ ಎಲ್ಲ ಪ್ಲಾಸ್ಟಿಕ್‌ ಲಕೋಟೆಗಳನ್ನು ಎರಡೇ ಬಣ್ಣಗಳಲ್ಲಿ ತಯಾರಿಸಲು ನಿರ್ಧರಿಸಿದ್ದಾರೆ. ಶುದ್ಧ ಪ್ಲಾಸ್ಟಿಕ್‌ ಕವರ್‌ಗಳಾದರೆ ಅವು ಬಿಳಿ ಬಣ್ಣದಲ್ಲಿರುತ್ತವೆ. ಮರುಸಂಸ್ಕರಿಸಲ್ಪಟ್ಟ ಪ್ಲಾಸ್ಟಿಕ್‌ ಕಪ್ಪು ಬಣ್ಣದ್ದಾಗಿರುತ್ತದೆ.

ಎಲ್ಲಾ ರೀತಿಯ ಆಹಾರ ವಸ್ತುಗಳನ್ನೂ ಕಪ್ಪು ಅಥವಾ ಬಿಳಿ ಪ್ಲಾಸ್ಟಿಕ್‌ ಲಕೋಟೆಗಳಲ್ಲಿ ಮಾತ್ರ ಪ್ಯಾಕ್‌ ಮಾಡಲಾಗುತ್ತದೆ. ಆದರೆ ರಾಜ್ಯ ಸರಕಾರದ ಆದೇಶ ಬೇರೆಯೇ ತೆರನಾದುದು. ಆ ಪ್ರಕಾರ 20 ಮೈಕ್ರೋನ್‌ಗಳಿಂತ ಕೆಳಗಿನ ಪ್ಲಾಸ್ಟಿಕ್‌ನಿಂದ ತಯಾರಿಸಿದ ಲಕೋಟೆಗಳನ್ನು ಮಾತ್ರ ಮಾರುಕಟ್ಟೆಯಲ್ಲಿ ಬಳಸಬೇಕು. ಪ್ಲಾಸ್ಟಿಕ್‌ ತಯಾರಕರು ಹೇಳುವಂತೆ ಮೈಕ್ರೋಮೀಟರ್‌ ಗೇಜ್‌ ಬಳಸಿ, ಪ್ಲಾಸ್ಟಿಕ್‌ಗಳು 20 ಮೈಕ್ರೋನ್‌ಗಳಿಗಿಂತ ಕೆಳಗಿನದ್ದಾಗಿದೆಯೇ ಎಂದು ಪರಿಶೀಲಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಿ ತರಬೇತು ಪಡೆದ ಸಾಕಷ್ಟು ಮಂದಿ ಅಧಿಕಾರಿಗಳೇ ಇಲ್ಲ. ಅಲ್ಲದೆ ರಾಜ್ಯದಲ್ಲಿ ಮಾತ್ರ ಈ ಪರಿಯ ಆದೇಶ ಜಾರಿಯಲ್ಲಿದೆ. ಕೇರಳ , ಮಹಾರಾಷ್ಟ್ರ ಮತ್ತು ತಮಿಳು ನಾಡಿನಿಂದ ಬಂದ ಪ್ಲಾಸ್ಟಿಕ್‌ಗಳು ಮೈಕ್ರೋ ಗೇಜ್‌ ಮೂಲಕ ಪರೀಕ್ಷಿಸಲ್ಪಟ್ಟದ್ದೇನೂ ಅಲ್ಲ. ಅಂದ ಮೇಲೆ ಈ ಘೋಷಣೆಯಿಂದ ಲಾಭವೇನು ?

ಬೆಂಗಳೂರು ಮಹಾನಗರ ಪಾಲಿಕೆಯೂ ಪ್ಲಾಸ್ಟಿಕ್‌ ಬಗ್ಗೆ ರೂಲ್ಸ್‌ಗಳನ್ನು ಪರಿಪರಿಯಾಗಿ ತಂದಿದ್ದರೂ ಮಾರುಕಟ್ಟೆಯಿಂದ ತರಕಾರಿ - ಪದಾರ್ಥಗಳು ಮನೆಗೆ ಕೊಂಡೊಯ್ಯುವ ಪ್ಲಾಸ್ಟಿಕ್‌ ಕವರ್‌ಗಳ ವಿಷಯದಲ್ಲಿ ಯಾವುದೇ ಬದಲಾವಣೆ ಕಂಡಿಲ್ಲ.

20 ಮೈಕ್ರೋನ್‌ಗಳಿಗಿಂತ ಹೆಚ್ಚಿರುವ ದಪ್ಪನೆಯ ಪ್ಲಾಸ್ಟಿಕ್‌ಗಳಿಗೆ ಹೆಚ್ಚು ತೆರಿಗೆ ವಿಧಿಸಲು ವಾಣಿಜ್ಯ ತೆರಿಗೆ ವಿಭಾಗಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಉಪೇಂದ್ರ ತ್ರಿಪಾಟಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ.

ಬಣ್ಣದ ಬಗ್ಗೆ ಸರಕಾರ ಮಾಡುವ ಕಟ್ಟಳೆಗಳನ್ನು ನಾವು ಪಾಲಿಸಬಹುದು. ಆದರೆ ಪ್ಲಾಸ್ಟಿಕ್‌ ಎಷ್ಟು ದಪ್ಪವಿರಬೇಕು ಎಂಬ ಬಗೆಗಿನ ನಿಯಮಗಳನ್ನು ಪಾಲಿಸುವುದು ಕಷ್ಟವಾಗುತ್ತದೆ ಎಂದು ಪ್ಲಾಸ್ಟಿಕ್‌ ಉತ್ಪಾದಕರ ಸಂಘದವರು ಹೇಳುತ್ತಾರೆ. ಎಚ್‌ಎಂಎಚ್‌ಡಿಪಿ (ಹೈ ಮೊಲಿಕ್ಯುಲರ್‌, ಹೈ ಡೆನ್ಸಿಟಿ ಪಾಲಿ) ಪ್ಲಾಸ್ಟಿಕ್‌ನಿಂದ ಲಕೋಟೆ ತಯಾರಿಕೆ ನಿಲ್ಲಿಸುವಂತೆ ಆದೇಶಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೇಂದ್ರ ಪರಿಸರ ಸಚಿವಾಲಯದ ಬಳಿ ಮತ್ತೊಂದು ಮನವಿ ಮಾಡಿಕೊಂಡಿದೆ.

ಸದ್ಯಕ್ಕೆ ಕಪ್ಪು - ಬಿಳಿ ಬಣ್ಣದ ಪ್ಲಾಸ್ಟಿಕ್‌ ತಯಾರಿಸಲು ಉತ್ಪಾದಕರೇ ನಿರ್ಧರಿಸಿರುವುದರಿಂದ ಮಾರುಕಟ್ಟೆಯಲ್ಲಿ ಬಣ್ಣ ಬಣ್ಣದ ಕವರುಗಳು ದುರ್ಲಭವಾಗಬಹುದು. ಪರಿಸರ ರಕ್ಷಣೆಯ ವಿಷಯದಲ್ಲಿ ಇದರಿಂದಾಗುವ ಮಹಾ ಲಾಭವೇನು ಎಂಬುದು ಗೊತ್ತಾಗುತ್ತಿಲ್ಲ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+