Get Updates
Get notified of breaking news, exclusive insights, and must-see stories!

ಬರಲಿದೆ ಸಲಿಂಗ- ಉಭಯ ರತಿಗಳಿಗಾಗಿಯೇ ಟಿವಿ ಚಾನೆಲ್ಲು !

ಒಟ್ಟಾವ (ಕೆನಡಾ): ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಫ್ಯಾಷನ್‌ ಟೀವಿ ಈಗಲೂ ಕಿರುತೆರೆ ಮೇಲೆ ಬರುತ್ತಿದೆ. ಸುಷ್ಮಾ ಸ್ವರಾಜ್‌ ಕತ್ತರಿ ಈ ಚಾನೆಲ್ಲಲ್ಲಿ ಬರುವ ಮಾಡೆಲ್‌ಗಳಿಗೆ ಬಟ್ಟೆ ಹೊಲಿಸುವ ಕೆಲಸವನ್ನೇನೂ ಮಾಡಲಿಲ್ಲ ಅನ್ನೋದು ಸುಸ್ಪಷ್ಟ. ಈಗ ಇದಕ್ಕೂ ಒಂದು ಹೆಜ್ಜೆ ಮುಂದಿಟ್ಟು , ಸಲಿಂಗ ಹಾಗೂ ಉಭಯಲಿಂಗ ಕಾಮಿಗಳನ್ನು ಟಾರ್ಗೆಟ್‌ ವೀಕ್ಷಕರಾಗಿ ಇಟ್ಟುಕೊಂಡು ಹೊಸ ಟಿವಿ ಚಾನೆಲ್ಲೊಂದು ಪ್ರಾರಂಭವಾಗಲಿದೆ ಎಂದು ಎಎಫ್‌ಪಿ ಸುದ್ದಿಸಂಸ್ಥೆ ಪ್ರಕಟಿಸಿದೆ.

ಪ್ರೆೃಡ್‌ ವಿಶನ್‌ ಟಿವಿ ಸೆಪ್ಟೆಂಬರ್‌ 7ರಂದು ಈ ಹೊಸ ಚಾನೆಲ್ಲಿಗೆ ಕೆನಡಾದಲ್ಲಿ ಚಾಲನೆ ನೀಡಲಿದೆ. ದಿನದ ಇಪ್ಪತ್ತನಾಲ್ಕೂ ಗಂಟೆ ಕಾರ್ಯಕ್ರಮಗಳು ಪ್ರಸಾರವಾಗಲಿದ್ದು, ಪುರುಷ ಸಲಿಂಗಿ ಹಾಗೂ ಬೆತ್ತಲೆ ದೊರೆಗಳಿಗೆ ಹೇಳಿ ಮಾಡಿಸಿದ ಪ್ರಕಾರಗಳು ಇದರಲ್ಲಿ ಸೇರಿವೆ. ಸುದ್ದಿ, ಪ್ರವಾಸ, ವಿತ್ತ ವಿಷಯ, ಸಂಗೀತ ಹಾಗೂ ಅಡುಗೆ ಕಾರ್ಯಕ್ರಮಗಳನ್ನೂ ಪ್ರಸಾರ ಮಾಡಿ ಇತರೆ ಪ್ರೇಕ್ಷಕರನ್ನೂ ಕಂಡುಕೊಳ್ಳಲು ಚಾನೆಲ್‌ ನಿರ್ಧರಿಸಿದೆ.

ಅಂದಹಾಗೆ, ಸಲಿಂಗ ಕಾಮಿಗಳ ಈ ಚಾನೆಲ್ಲು ಬರೇ ಮುಫತ್‌ ಮನರಂಜನೆಯನ್ನಷ್ಟೇ ಕೊಡುವುದಿಲ್ಲ. ಅವರ ಸಮಸ್ಯೆಗಳನ್ನು ಧಾರಾವಾಹಿ ಮತ್ತಿತರ ಕಾರ್ಯಕ್ರಮಗಳ ಮೂಲಕ ಪುಂಖಾನುಪುಂಖ ತೋರಿಸುತ್ತದೆ ಎಂಬುದನ್ನು ಪ್ರೆೃಡ್‌ ವಿಶನ್‌ ಪ್ರೆೃಡಾಗಿ ಹೇಳಿಕೊಂಡಿದೆ.

ಭಾರತಕ್ಕೆ ಈ ಚಾನೆಲ್‌ ಎಂದು ಪ್ರವೇಶಿಸುತ್ತದೆ ಅನ್ನೋದು ಇನ್ನೂ ಗೊತ್ತಿಲ್ಲ. ಕೇಂದ್ರ ವಾರ್ತಾ ಸಚಿವೆ ಸುಷ್ಮಾ ಸ್ವರಾಜ್‌ ಈ ಸುದ್ದಿ ಕೇಳಿ ತಮ್ಮ ಸಚಿವಾಲಯದ ಸಿಬ್ಬಂದಿಗೆ ಕತ್ತರಿ ಕೊಟ್ಟು, ಮತ್ತೆ ಟಿವಿ ನೋಡಲು ಕೂರಿಸುವರೇ?

(ಇನ್ಫೋ ವಾರ್ತೆ)

What do you say on this Article?

ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+