ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ಶಸ್ತ್ರಾಸ್ತ್ರಗಳ ಮಾರುಕಟ್ಟೆಯ ಗ್ರಾಹಕರಲ್ಲಿ ಭಾರತ ನಂ.2

By Staff
|
Google Oneindia Kannada News

ವಾಷಿಂಗ್ಟನ್‌ : ಶಸ್ತ್ರಾಸ್ತ್ರಗಳನ್ನು ಕೊಳ್ಳುವಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿದೆ ಎಂದು American Congressional ವರದಿ ತಿಳಿಸಿದೆ. ಅಗ್ರಸ್ಥಾನ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಪಾಲಿಗೆ.

ಮೊದಲನೇ ಸ್ಥಾನದಲ್ಲಿರುವ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ 18.6 ಬಿಲಿಯನ್‌ ಡಾಲರ್‌ಗಳನ್ನು ಶಸ್ತ್ರಾಸ್ತ್ರ ಖರೀದಿಗೆ ಖರ್ಚು ಮಾಡಿದರೆ, ಕಳೆದ ವರ್ಷ 4.8 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಖರೀದಿಸುವ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ ಎಂದು ವರದಿ ತಿಳಿಸಿದೆ. ಈಗ ಹೇಳಿ ಭಾರತ ಬಡರಾಷ್ಟ್ರವಾ?

ರಿಚರ್ಡ್‌ ಎಫ್‌ ಗ್ರಿಮ್ಮೆಟ್‌ ಎನ್ನುವ ನ್ಯಾಶನಲ್‌ ಡಿಫೆನ್ಸ್‌ನ ತಜ್ಞನೊಬ್ಬ ಈ ವರದಿಯನ್ನು ತಯಾರಿಸಿದ್ದು , ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಮಾರುವ ಪ್ರಮಾಣ ಕಳೆದ ವರ್ಷ ಪ್ರತಿಶತ 8 ರಷ್ಟು , ಅಂದರೆ 36.9 ಬಿಲಿಯನ್‌ ಡಾಲರ್‌ಗಳಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಶೀತಲಯುದ್ಧ ಕೊನೆಗೊಂಡ ನಂತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಆಯುಧ ಮಾರಾಟ ಕೇಂದ್ರಗಳಾಗಿದ್ದು , ಅಭಿವೃದ್ಧಿ ಶೀಲ ರಾಷ್ಟ್ರಗಳು ಪ್ರಮುಖ ಗಿರಾಕಿಗಳಾಗಿವೆ. ಆಯುಧ ಮಾರಾಟಗಾರರಲ್ಲಿ ಎಂದಿನಂತೆ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 7.7 ಬಿಲಿಯನ್‌ ಡಾಲರ್‌ ಮಾರಾಟ ವ್ಯಾಪ್ತಿಯನ್ನು ಹೊಂದಿರುವ ರಷ್ಯಾ 2 ನೇ ಸ್ಥಾನದಲ್ಲಿ , 4.1 ಬಿ.ಡಾಲರ್‌ಗಳ ವ್ಯಾಪ್ತಿಯ ಫ್ರಾನ್ಸ್‌ ಮೂರನೇ ಸ್ಥಾನದಲ್ಲಿವೆ. ಜರ್ಮನಿ, ಬ್ರಿಟನ್‌, ಚೀನಾ ಕೂಡ ಶಸ್ತ್ರಾಸ್ತ್ರ ಮಾರಾಟದಲ್ಲಿ ಹಿಂದೆ ಬಿದ್ದಿಲ್ಲ .

(ಪಿಟಿಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X