Get Updates
Get notified of breaking news, exclusive insights, and must-see stories!

ಮೈಸೂರು ವಿಶ್ವವಿದ್ಯಾಲಯದಲ್ಲಿಜೋತಿರ್ವಿಜ್ಞಾನ ಪದವಿ ಕೋರ್ಸ್‌

ನವದೆಹಲಿ : ಮೈಸೂರು ವಿಶ್ವವಿದ್ಯಾಲಯವೂ ಸೇರಿದಂತೆ ರಾಷ್ಟ್ರದ 20 ವಿಶ್ವವಿದ್ಯಾಲಯಗಳಲ್ಲಿ ಜ್ಯೋತಿಷ್ಯ ಶಾಸ್ತ್ರ ಅಥವಾ ಜ್ಯೋತಿರ್ವಿಜ್ಞಾನ ಅಧ್ಯಯನ ಪ್ರಾರಂಭಿಸಲಾಗುವುದು ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯು.ಜಿ.ಸಿ)ದ ಅಧ್ಯಕ್ಷ ಹರಿಗೌತಮ್‌ ದೆಹಲಿಯಲ್ಲಿ ತಿಳಿಸಿದ್ದಾರೆ.

ಜ್ಯೋತಿಷ್ಯಶಾಸ್ತ್ರ ಒಂದು ವಿಜ್ಞಾನವೋ ಅಲ್ಲವೋ ಎಂಬ ಜಿಜ್ಞಾಸೆಯ ನಡುವೆಯೇ ವಿಶ್ವವಿದ್ಯಾಲಯಗಳಲ್ಲಿ ಈ ವಿಷಯದ ಬಗ್ಗೆ ಅಧ್ಯಯನಕ್ಕೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು. ಮೈಸೂರು ವಿ.ವಿ. ಸೇರಿದಂತೆ ದೇಶದ ಒಟ್ಟು 20 ವಿ.ವಿ.ಗಳಲ್ಲಿ ಬಿ.ಎ, ಬಿ.ಎ. (ಆನರ್ಸ್‌), ಎಂ.ಎ ಮತ್ತು ಪಿಎಚ್‌ಡಿ ಪದವಿಗೆ ವೈದಿಕ ಜ್ಯೋತಿಷ್ಯ ಶಾಸ್ತ್ರ ಒಂದು ವಿಷಯವಾಗಲಿದೆ ಎಂದರು.

ಇನ್ನು ಮುಂದೆ ವಿ.ವಿ.ಗಳಲ್ಲಿ ಲಭ್ಯವಿರುವ 45 ವೃತ್ತಿ ಪ್ರಾಧಾನ್ಯ ಹೊಂದಿದ ಕೋರ್ಸ್‌ಗಳ ಪೈಕಿ ವೈದಿಕ ಜ್ಯೋತಿಷ್ಯ ಶಾಸ್ತ್ರವೂ ಒಂದಾಗಲಿದೆ ಎಂದು ಅವರು ಹೇಳಿದರು. ಜ್ಯೋತಿಷ್ಯ ಶಾಸ್ತ್ರ ವಿಜ್ಞಾನವೋ - ಅಲ್ಲವೋ ಎಂಬ ಚರ್ಚೆ ವಿವಾದಗಳ ನಡುವೆಯೇ ಯು.ಜಿ.ಸಿ. ಕಲಾ ವಿಭಾಗದಲ್ಲಿ ಜೋತಿರ್ವಿಜ್ಞಾನದ ಪದವಿ ನೀಡಲು ಮುಂದಾಗಿದೆ.

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+