Get Updates
Get notified of breaking news, exclusive insights, and must-see stories!

ಬೆಂಗಳೂರು : ಅಗ್ನಿ ಆಕಸ್ಮಿಕದಲ್ಲಿ ‘ಎಂ.ಐ-8’ ಹೆಲಿಕ್ಯಾಫ್ಟರ್‌ ಭಸ್ಮ

ಬೆಂಗಳೂರು : ಭಾರತೀಯ ವಿಮಾನಪಡೆಯ ಎಂ.ಐ-8 ಹೆಲಿಕ್ಯಾಫ್ಟರ್‌ ಹೆಸರಘಟ್ಟ ರಸ್ತೆಯ ಚಿಮಿನಿ ಹಿಲ್ಸ್‌ನಲ್ಲಿ ಮಂಗಳವಾರ ಸಂಭವಿಸಿದ ಅಗ್ನಿ ಆಕಸ್ಮಿಕದಲ್ಲಿ ಸಂಪೂರ್ಣವಾಗಿ ಸುಟ್ಟುಹೋಗಿದೆ. ಹೆಲಿಕ್ಯಾಫ್ಟರ್‌ನಲ್ಲಿದ್ದ ಐವರೂ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದು , ಸಣ್ಣಪುಟ್ಟ ಸುಟ್ಟಗಾಯಗಳ ಹೊರತಾಗಿ ಆರೋಗ್ಯವಾಗಿದ್ದಾರೆ.

ಹೆಲಿಕ್ಯಾಫ್ಟರ್‌ ಮೇಲೇರಿದ ತಕ್ಷಣ ತಾಂತ್ರಿಕ ದೋಷ ಗೋಚರಿಸಿದ್ದರಿಂದ, ನೆಲಕ್ಕೆ ಇಳಿಯಿತು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ, ಹಾರಾಟದ ಸಮಯದಲ್ಲಿ ಚಿಮಿನಿ ಹಿಲ್ಸ್‌ನಲ್ಲಿರುವ ರೆಡಾರ್‌ಗೆ ಎಂ.ಐ-8 ಹೆಲಿಕ್ಯಾಫ್ಟರ್‌ ತಾಕಿದ್ದರಿಂದ ಬೆಂಕಿ ಹತ್ತಿಕೊಂಡಿದೆ.

ಪೀಣ್ಯ, ಸೋಲದೇವನಹಳ್ಳಿ, ನೆಲಮಂಗಲ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ತೀವ್ರ ತಪಾಸಣೆ ನಡೆಸಿದ ನಂತರ ಅಪಘಾತಕ್ಕೀಡಾದ ಹೆಲಿಕ್ಯಾಫ್ಟರ್‌ ಪತ್ತೆಯಾಯಿತು. ಸೋಲದೇವನಹಳ್ಳಿ ಪೊಲೀಸ್‌ ಠಾಣೆಯ ಸಿಬ್ಬಂದಿ ಹಾಗೂ ಹೊಯ್ಸಳ ಪಡೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಗಳಲ್ಲಿ ಭಾಗವಹಿಸಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+