ನವೆಂಬರ್ ತಿಂಗಳೊಳಗೆ ವಾಜಪೇಯಿ ಪಾಕ್ ಪ್ರವಾಸ?
ನವದೆಹಲಿ : ಬರುವ ನವೆಂಬರ್ ತಿಂಗಳೊಳಗಾಗಿ ಭಾರತದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕಿಸ್ತಾನಕ್ಕೆ ಭೇಟಿ ಕೊಡಲಿದ್ದಾರೆ ಎಂದು ಸಮಾಜ ವಿಜ್ಞಾನಗಳ ಅಧ್ಯಯನ ಸಮಿತಿ (ಐಸಿಎಸ್ಎಸ್ಆರ್) ಯ ಅಧ್ಯಕ್ಷ ಎಂ.ಎಲ್.ಸೋಂಧಿ ಬುಧವಾರ ತಿಳಿಸಿದ್ದಾರೆ.
ಭಾರತೀಯ ಮತ್ತು ಪಾಕಿಸ್ತಾನಿ ವಿಜ್ಞಾನಿಗಳು ಆಗ್ರಾ ಶೃಂಗಸಭೆಗೆ ಮುನ್ನ ಐಸಿಎಸ್ಎಸ್ಆರ್ ಆಯೋಜಿಸಿದ್ದ ಸಭೆಯಾಂದರಲ್ಲಿ ಪಾಲ್ಗೊಂಡಿದ್ದರು. ಆ ಸಭೆಯ ಶಿಫಾರಸ್ಸುಗಳನ್ನು ನೀಡಲು ಆಗ್ರಾದಲ್ಲಿ ಪ್ರಧಾನಿ ವಾಜಪೇಯಿ ಅವರನ್ನು ತಾವು ಭೇಟಿಯಾಗಿದ್ದಾಗ, ವಾಜಪೇಯಿ ಈ ವಿಷಯ ತಿಳಿಸಿದ್ದರು ಎಂದು ಸೋಂಧಿ ಹೇಳಿದ್ದಾರೆ.
ನವೆಂಬರ್ ಒಳಗಾಗಿ ವಾಜಪೇಯಿ ಇಸ್ಲಾಮಾಬಾದ್ಗೆ ಹೋಗಬಹುದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರ ಅನೌಪಚಾರಿಕ ಮಾತುಕತೆಯಲ್ಲಿ ನನಗೆ ಹೇಳಿದರು ಎಂದು ಸೋಂಧಿ ತಿಳಿಸಿದ್ದಾರೆ.
ವಾಜಪೇಯಿ ಹಾಗೂ ಮುಷರ್ರಫ್ ಪರಸ್ಪರ ತಾಳಮೇಳ ಕಂಡುಕೊಂಡಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಮೆಚ್ಚಿಕೊಂಡಿದ್ದಾರೆ. ನಾನು ಆಗ್ರಾದಲ್ಲಿ ಇಬ್ಬರನ್ನೂ ಒಟ್ಟಾಗಿ ಭೇಟಿಯಾಗಿದ್ದೆ. ಭಾರತ- ಪಾಕ್ ನಡುವೆ ಬಾಂಧವ್ಯ ಬೆಸೆಯಬಲ್ಲ ವಾಸ್ತವ ಪ್ರಸ್ತಾವನೆಗಳನ್ನು ಐಸಿಎಸ್ಎಸ್ಆರ್ ನೀಡಿದೆ ಎಂದು ಮುಷರ್ರಫ್ ಹೇಳಿದರು ಎಂದು ಸೋಂಧಿ ವಿವರಿಸಿದ್ದಾರೆ.
ವಾಜಪೇಯಿ ಪಾಕ್ ಪ್ರವಾಸದ ದಿನಾಂಕ ಇನ್ನೂ ಗೊತ್ತುಪಡಿಸಿಲ್ಲ ಎಂದು ಮಂಗಳವಾರ ವಿದೇಶೀ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ತಿಳಿಸಿದ್ದರು. ಪ್ರಧಾನಿ ವಾಜಪೇಯಿ ಪಾಕ್ಗೆ ಹೋಗುವ ಮುನ್ನ ಎರಡು ಬಾರಿ ಮುಷರ್ರಫ್ ಅವರನ್ನು ಭೇಟಿಯಾಗುವ ನಿರೀಕ್ಷೆಯಿದೆ - ಸೆಪ್ಟೆಂಬರ್ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಮಹಾಸಭೆಯಲ್ಲೊಮ್ಮೆ ಹಾಗೂ ಕಠ್ಮಂಡುವಿನಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ.
(ಐಎಎನ್ಎಸ್)
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications