ಮೇಲ್ಮನೆಗೆ ಸುಧಾ ಮೂರ್ತಿ, ವಿಷ್ಣುವರ್ಧನ್, ಸರೋಜಾದೇವಿ?
(ವಿಶೇಷ ವರದಿ)
ಬೆಂಗಳೂರು : ಮೇಲ್ಮನೆಯ ಐವರು ನಾಮಕರಣ ಸದಸ್ಯರ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನಕ್ಕೆ ಇನ್‌ಫೋಸಿಸ್ ಪ್ರತಿಷ್ಠಾನದ ಸುಧಾ ನಾರಾಯಣಮೂರ್ತಿ, ಚಿತ್ರನಟ ವಿಷ್ಣುವರ್ಧನ್, ಹಿರಿಯ ಅಭಿನೇತ್ರಿ ಬಿ. ಸರೋಜಾ ದೇವಿ , ಪತ್ರಕರ್ತ ಜಯಶೀಲರಾವ್ ಹಾಗೂ ಸಾಹಿತಿ ದೇಜಗೌ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.
ಈ ಐವರ ಪೈಕಿ ಸುಧಾ ಮೂರ್ತಿ, ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿ ಅವರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬಗ್ಗೆ ಮುಖ್ಯಮಂತ್ರಿ ಕೃಷ್ಣ ಒಲವು ತೋರಿದ್ದಾರೆ ಎನ್ನಲಾಗಿದೆ. ಆದರೂ ಐದು ಮೇಲ್ಮನೆ ಸ್ಥಾನಕ್ಕಾಗಿ ಸಾಹಿತ್ಯ, ಕಲೆ, ಸಾಂಸ್ಕೃತಿಕ ವಲಯದಲ್ಲಿ ಭಾರಿ ಲಾಬಿಯೇ ಆರಂಭವಾಗಿದೆ.
ಹಾಲಿ ನಾಮಕರಣ ಸದಸ್ಯರಾಗಿರುವ ಡಾ. ಏಜಾಸುದ್ದೀನ್, ಕವಿ ಡಾ. ಸಿದ್ಧಲಿಂಗಯ್ಯ, ಎಚ್.ಎಲ್. ನಾಗೇಗೌಡ, ಮಹಾದೇವ ಬಣಕಾರ್ ಹಾಗೂ ಸರಿತಾ ಕುಸುಮಾಕರ ದೇಸಾಯಿ ಅವರು ಇನ್ನೆರಡು ದಿನದಲ್ಲಿ ನಿವೃತ್ತರಾಗಲಿದ್ದಾರೆ. ಹೊಸಬರ ನಾಮಕರಣಕ್ಕೆ 3 ತಿಂಗಳ ಕಾಲಾವಕಾಶ ಇದೆ. ಈ ಬಾರಿ ಅರ್ಹರಾದವರನ್ನು ಮಾತ್ರ ಮೇಲ್ಮನೆಗೆ ನೇಮಕ ಮಾಡಲು ಕೃಷ್ಣ ನಿರ್ಧರಿಸಿದ್ದಾರೆ. ಪ್ರಮುಖವಾಗಿ ಈ ಕೆಳಕಂಡ ಐವರ ಹೆಸರು ವಿಧಾನಸೌಧದಲ್ಲಿ ಕೇಳಿಬರುತ್ತಿದೆ.
ಸುಧಾಮೂರ್ತಿ : ಸಾಹಿತ್ಯ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿರುವ ಸುಧಾಮೂರ್ತಿ ಅವರು, ಸಮಾಜ ಸೇವೆಯಲ್ಲೂ ಹೆಸರು ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿಗೆ ನೆರವಾಗುವ ಹಲವು ಜನಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ಇವರನ್ನು ಮೇಲ್ಮನೆಗೆ ನಾಮಕರಣ ಮಾಡುವ ಬಗ್ಗೆ ಕೃಷ್ಣ ಚಿಂತಿಸಿದ್ದಾರೆ.
ವಿಷ್ಣುವರ್ಧನ್ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ವಿಷ್ಣುವರ್ಧನ್ ಅವರನ್ನು ಬಸವನಗುಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸುವ ಪ್ರಯತ್ನವೂ ನಡೆದಿತ್ತು. ವಿಷ್ಣು ಅವರನ್ನು ರಾಜಕೀಯಕ್ಕೆ ತರಲು ಕಾಂಗ್ರೆಸ್ ಸಂಸದ ಅಂಬರೀಶ್ ಪ್ರಯತ್ನಿಸುತ್ತಿದ್ದಾರೆ. ಕೃಷ್ಣರೂ ಹೆಚ್ಚೂ ಕಡಿಮೆ ಹ್ಞೂಂ ಅಂದಿದ್ದಾರಂತೆ.
ಸರೋಜಾದೇವಿ : ಇನ್ನು ಬಿ. ಸರೋಜಾ ದೇವಿ ಅವರು ಹಿರಿಯ ನಟಿ. ರಾಜಕೀಯದ ಮುಖ್ಯವಾಹಿನಿಯಲ್ಲಿ ಅವರ ಹೆಸರು ಅಷ್ಟಾಗಿ ಕೇಳಿಬಂದಿಲ್ಲವಾದರೂ, ಸರೋಜಾದೇವಿ ಅವರಿಗೆ ರಾಜಕೀಯ ನಂಟಿರುವ ವಿಚಾರ ಗೌಪ್ಯವಾಗೇನೂ ಉಳಿದಿಲ್ಲ. ಹಲವು ಸಮಿತಿ, ಮಂಡಳಿಗಳಲ್ಲಿ ಈಗಾಗಲೇ ಸದಸ್ಯರಾಗಿ ದುಡಿದಿರುವ ಸರೋಜಾ ದೇವಿ ಅವರನ್ನು ನಾಮಕರಣ ಮಾಡಲು ಕೃಷ್ಣ ಉತ್ಸುಕರಾಗಿದ್ದಾರೆ.
ದೇ. ಜವರೇಗೌಡ : ಮುಖ್ಯಮಂತ್ರಿ ಕೃಷ್ಣ ಅವರ ಪಕ್ಕದೂರಿನ ದೇ. ಜವರೇಗೌಡ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದವರು. ಅಧ್ಯಾಪಕರಾಗುವ ಮುನ್ನ ಸೆಕ್ರೇಟರಿಯೆಟ್‌ನಲ್ಲಿ ಸೇವೆ ಸಲ್ಲಿಸಿದ್ದ ಅವರನ್ನು ಮೇಲ್ಮನೆಗೆ ತರಲು ಒಕ್ಕಲಿಗ ಸಚಿವರು ಪ್ರಭಾವ ಬೀರಿದ್ದಾರೆ ಎನ್ನಲಾಗಿದೆ.
ಜಯಶೀಲರಾವ್ : 26 ವರ್ಷಗಳ ಕಾಲ ಪ್ರಜಾವಾಣಿಯಲ್ಲಿ, 8 ವರ್ಷಗಳ ಕಾಲ ಸಂಯುಕ್ತ ಕರ್ನಾಟಕದಲ್ಲಿ
ಸೇವೆ ಸಲ್ಲಿಸಿದ ಬಳಿಕ ಮುಂಜಾನೆ ಪತ್ರಿಕೆಯ ಸಂಪಾದಕರಾಗಿದ್ದ ಜಯಶೀಲರಾವ್, ಈಗ ಮಾಜಿ ಪ್ರಧಾನಿ ದೇವೇಗೌಡರ ಪತ್ರಿಕಾ ಕಾರ್ಯದರ್ಶಿಯಾಗಿದ್ದಾರೆ. ವಾರ್ತಾ ಸಚಿವ ಪ್ರೊ. ಬಿ.ಕೆ. ಚಂದ್ರಶೇಖರ್ ಹಾಗೂ ಮಣಿಶಂಕರ ಐಯ್ಯರ್ ಬೆಂಬಲ ಇವರಿಗಿದೆ ಎನ್ನಲಾಗಿದೆ. ಅಂತೆಯೇ ಕಾಂಗ್ರೆಸ್ ವಲಯದಲ್ಲಿ ವಿರೋಧವೂ ಇದೆ.
ಈ ಮಧ್ಯೆ, ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ನಟಿ ಉಮಾಶ್ರೀ, ಪತ್ರಕರ್ತ ಹಾಗೂ ದಲಿತ ಸಾಹಿತಿ ಕೆಂಪಹನುಮಯ್ಯ, ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಸನಬ್ಬ, ಬಂಡಾಯ ಸಾಹಿತಿ ಎಲ್. ಹನುಮಂತಯ್ಯ, ಮಾಜಿ ಶಾಸಕ ಭೂಪತಿ ಮೊದಲಾದವರ ಹೆಸರೂ ಕೇಳಿಬರುತ್ತಿದೆ.
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications