ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಫ್ಟ್‌ವೇರ್‌ ರಫ್ತು : ಹಿನ್ನಡೆ ಕಾಣದಕರ್ನಾಟಕದ ದಾಖಲೆ ವ್ಯವಹಾರ

By Staff
|
Google Oneindia Kannada News

ಬೆಂಗಳೂರು : ಸಾಫ್ಟ್‌ವೇರ್‌ ರಫ್ತಿನಲ್ಲಿ ಕರ್ನಾಟಕ ಗಣನೀಯ ಸಾಧನೆಯನ್ನು ತೋರಿದೆ. ಮಾರ್ಚ್‌ 31 ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಪ್ರತಿಶತ 71 ರ ಹೆಚ್ಚಳ ಸಾಧಿಸಿದ್ದು , ಒಟ್ಟು 74.7 ಬಿಲಿಯನ್‌ (1.6 ಬಿಲಿಯನ್‌ ಡಾಲರ್‌) ರುಪಾಯಿ ವ್ಯವಹಾರ ನಡೆಸಿದೆ.

ಸಾಫ್ಟ್‌ವೇರ್‌ ಕ್ಷೇತ್ರದಲ್ಲಿ ಕರ್ನಾಟಕದ ಈ ಸಾಧನೆ ದೇಶದ ಉಳಿದ ಸಾಫ್ಟ್‌ವೇರ್‌ ಕೇಂದ್ರಗಳಿಗೆ ಹೋಲಿಸಿದಲ್ಲಿ ಸಾಕಷ್ಟು ಉತ್ತಮವಾಗಿದೆ ಎಂದು ಸಾಫ್ಟ್‌ವೇರ್‌ ಟೆಕ್ನಾಲಜಿ ಪಾರ್ಕ್‌(ಎಸ್‌ಟಿಪಿಐ)ನ ನಿರ್ದೇಶಕ ಬಿ.ವಿ. ನಾಯ್ಡು ತಿಳಿಸಿದ್ದಾರೆ. 1991 ರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಿಂದ ರೂಪಿತವಾದ ಎಸ್‌ಟಿಪಿಐ, ದೇಶದ ಸಾಫ್ಟ್‌ವೇರ್‌ ರಫ್ತಿನ ಉತ್ತೇಜನ ಕಾರ್ಯಗಳಲ್ಲಿ ತೊಡಗಿದೆ.

ವಿಶ್ವಾದ್ಯಂತ ಭಾರತದ ಸಿಲಿಕಾನ್‌ ವ್ಯಾಲಿ ಎಂದೇ ಹೆಸರಾಗಿರುವ ಬೆಂಗಳೂರು 928 ಸಾಫ್ಟ್‌ವೇರ್‌ ಕಂಪನಿಗಳನ್ನು ಹೊಂದಿದ್ದು , ಅವುಗಳಲ್ಲಿ 165 ಕಂಪನಿಗಳು ಮಾರ್ಚ್‌ 31 ಕ್ಕೆ ಕೊನೆಗೊಂಡ ವಿತ್ತ ವರ್ಷದಲ್ಲಿ ತಮ್ಮನ್ನು ಸ್ಥಳೀಯ ಪ್ರಾಧಿಕಾರಗಳಲ್ಲಿ ನೋಂದಾಯಿಸಿಕೊಂಡಿವೆ. ಶೇ. 34 ರಷ್ಟು ಕಂಪನಿಗಳು ಸಂಪೂರ್ಣ ಸ್ವಾಯತ್ತೆ ಹೊಂದಿದ ಕಂಪನಿಗಳಾಗಿದ್ದು , ಉನ್ನತ ತಂತ್ರಜ್ಞಾನದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ ಎಂದು ನಾಯ್ಡು ಹೇಳಿದ್ದಾರೆ.

ಎರಡು ಕಂಪನಿಗಳು 10 ಬಿಲಿಯನ್‌ಗಿಂತ ಹೆಚ್ಚು ಮೊತ್ತದ ಸಾಫ್ಟ್‌ವೇರ್‌ ರಫ್ತು ಲಾಭ ಗಳಿಸಿದ್ದರೆ, 13 ಕಂಪನಿಗಳು ಒಂದು ಬಿಲಿಯನ್‌ ಮೌಲ್ಯದ ರಫ್ತು ಸಾಧನೆ ಮಾಡಿವೆ. ವರ್ಷದಿಂದ ವರ್ಷಕ್ಕೆ ಕರ್ನಾಟಕದ ಸಾಫ್ಟ್‌ವೇರ್‌ ರಫ್ತಿನ ಪ್ರಮಾಣ ಹೆಚ್ಚುತ್ತಿದ್ದು , ಬರುವ ವರ್ಷದಲ್ಲಿ ಸಾಫ್ಟ್‌ವೇರ್‌ ರಫ್ತಿನ ಮೊತ್ತ 110 ಬಿಲಿಯನ್‌ ರು. ಹಾಗೂ 2003 ನೇ ಸಾಲಿನಲ್ಲಿ 170 ಬಿಲಿಯನ್‌ ರುಪಾಯಿ ಮುಟ್ಟುವ ಅಂದಾಜಿದೆ ಎಂದು ನಾಯ್ಡು ಹೇಳಿದ್ದಾರೆ.

(ಎಎಫ್‌ಪಿ)

ವಾರ್ತಾಸಂಚಯ
ಮುಖಪುಟ / ಕರ್ನಾಟಕ ಸಿಲಿಕಾನ್‌ ಕಣಿವೆ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X