ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಬೇಸಗೆ ರಜೆಯಲ್ಲಿ ನಿಮ್ಮ ಪುಟಾಣಿಯನ್ನು ಎಲ್ಲಿಗೆ ಕಳುಹಿಸುತ್ತೀರಿ?

By Staff
|
Google Oneindia Kannada News

Where will you send your kids this time?ಬೆಂಗಳೂರು : ಪರೀಕ್ಷೆಗಳ ಭಾರ ಕಳೆದು ಬೇಸಿಗೆ ರಜೆ ಬಂದಿದೆ. ದೊಡ್ಡದೊಂದು ರಿಲೀಫ್‌ ಸಿಕ್ಕಿತು ಎಂದೇನಲ್ಲ. ಈ ರಜೆಯಲ್ಲಿ ಏನು ಮಾಡುವುದು ? ಮಕ್ಕಳನ್ನು ಸುಮ್ಮನೇ ಆಟ ಆಡಿಕೊಂಡಿರಲು ಬಿಟ್ಟರೆ, ಕಾಂಪಿಟಿಷನ್‌ ಜಗತ್ತಿನಲ್ಲಿ ಅವರು ಸೋತಾರೇನೋ ಎಂಬ ಭಯ. ಅಜ್ಜಿ ಮನೆಗೆ ಕಳುಹಿಸುವ ಮಾತೆಲ್ಲಾ ಹಳೆಯದಾಗಿ ಬಿಟ್ಟಿದೆ. ಹೆತ್ತವರ ಈ ಗೊಂದಲವನ್ನೇ ಆಯ್ದುಕೊಂಡು ಬೆಂಗಳೂರು ನಗರದ ಸಂಘ ಸಂಸ್ಥೆಗಳು ಬೇಸಿಗೆ ಶಿಬಿರಗಳನ್ನು ಆಯೋಜಿಸಿವೆ. ಶಿಬಿರಕ್ಕೆ ಕಳುಹಿಸುವಾಗ ನಿಮ್ಮ ಪುಟಾಣಿಯ ಆಸಕ್ತಿ ಎತ್ತ ಹೊರಳುತ್ತಿದೆ ಎಂಬ ಎಳೆಯನ್ನು ಆಯುವ ಜಾಣ್ಮೆ ನಿಮಗಿರಲಿ.

ಜೆನೀ ಕಿಡ್ಸ್‌ ಬೇಸಿಗೆ ಶಿಬಿರ : ಬೊಂಬೆ ಮಾಡುವುದು, ಅಡುಗೆ, ನಟನೆ, ಗಾಯನ ಮೊದಲಾದ ವಿದ್ಯೆಗಳನ್ನು ಕಲಿಸುತ್ತಾರೆ. 4ರಿಂದ 13 ರ್ವ ವಯೋಮಿತಿಯ ಮಕ್ಕಳು ಶಿಬಿರಕ್ಕೆ ಸೇರಬಹುದು. ಶಿಬಿರದ ಅವಧಿ- ಏಪ್ರಿಲ್‌ 9ರಿಂದ ಮೇ 31. ಸಮಯಾವಧಿ- ಬೆಳಗ್ಗೆ 1.30 ಗಂಟೆಯಿಂದ ಸಂಜೆ 5. ವಿಳಾಸ- ಜೆನಿ ಕಿಡ್ಸ್‌ ಲರ್ನಿಂಗ್‌ ರಿಸೋರ್ಸಸ್‌, 389 80 ಫೀಟ್‌ ರೋಡ್‌, ಎಚ್‌ಎಎಲ್‌ 2ನೇ ಸ್ಟೇಜ್‌. ವಿವರಗಳಿಗೆ ಸಂಪರ್ಕಿಸಿ- 535-0257, 527-2539.

ಭಾರತೀಯ ವಿದ್ಯಾಭವನ : ಕ್ಯಾಮ್ಲಿನ್‌ ಸಹಯೋಗದಲ್ಲಿ ಕಲೆ ಮತ್ತು ಕುಸುರಿ ತರಪೇತಿ ಬೇಸಿಗೆ ಶಿಬಿರ ಏಪ್ರಿಲ್‌ 16ರಿಂದ 21ರವರೆಗೆ ನಡೆಯಲಿದೆ. ಸಮಯಾವಧಿ- ಬೆಳಗ್ಗೆ 11 ಗಂಟೆಯಿಂದ ಸಂಜೆ 5. ಸಂಪರ್ಕಿಸಿ- 226- 7421/4657.

ಸ್ಪಿರಿಟ್‌ ಆಫ್‌ ನೇಚರ್‌ : 12ರಿಂದ 16 ವರ್ಷದ ಮಕ್ಕಳಿಗೆ ಸಂಗೀತ, ನೃತ್ಯ, ಯೋಗ, ರಂಗತಂತ್ರಗಳನ್ನು ಕಲಿಸಿಕೊಡುವ ಉದ್ದೇಶದಿಂದ ಸಂಸ್ಕೃತಿ ಬೇಸಿಗೆ ಶಿಬಿರವನ್ನು ಆಯೋಜಿಸಿದೆ. ಏಪ್ರಿಲ್‌ 9ರಿಂದ 13 ಹಾಗೂ ಏಪ್ರಿಲ್‌ 15ರಿಂದ 20ನೇ ತಾರೀಖಿನವರೆಗೆ ಶಿಬಿರ ನಡೆಯಲಿದೆ. ಸಮಯಾವಧಿ- ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆ. ಸ್ಥಳ- ಚಿತ್ರಕಲಾ ಪರಿಷತ್‌, ಕುಮಾರಕೃಪ ರಸ್ತೆ, ಬೆಂಗಳೂರು. ಶಿಬಿರದ ಟಿಕೆಟ್‌ ದರ 1500 ರುಪಾಯಿ.

ಯೋಗಾಸನ ಶಿಬಿರ : ಅಲಸೂರಿನ ವಿವೇಕಾನಂದ ಅಶ್ರಮದಲ್ಲಿ ಯೋಗಾಸನ, ವೇದಮಂತ್ರ ಪಠಣ, ನೈತಿಕ ಶಿಕ್ಷಣ ಶಿಬಿರ. ಅವಧಿ- ಏಪ್ರಿಲ್‌ 29ರಿಂದ ಮೇ 12ರವರೆಗೆ. ಹತ್ತರಿಂದ ಹದಿನೈದು ವರ್ಷ ವಯಸ್ಸಿನೊಳಗಿನ ಮಕ್ಕಳಿಗೆ ಪ್ರವೇಶವಿದೆ. ಸಂಪರ್ಕ ವಿಳಾಸ - ವಿವೇಕಾನಂದ ಆಶ್ರಮ, ಸ್ವಾಮಿ ವಿವೇಕಾನಂದ ರಸ್ತೆ, ಅಲಸೂರು, ಬೆಂಗಳೂರು-8

ನಾಟಕ ಮತ್ತು ನೃತ್ಯ : ರಂಗೋತ್ರಿ ಮಕ್ಕಳ ರಂಗಶಾಲೆ ಏಪ್ರಿಲ್‌ 9ರಿಂದ 29ರವರೆಗೆ ನಾಟಕ, ನೃತ್ಯ, ಅಭಿನಯ ಸಂಗೀತ ಮತ್ತು ಮೂಕಾಭಿನಯ ಕಲಿಕಾ ಶಿಬಿರವನ್ನು ಆಯೋಜಿಸಿದೆ. ಏಳರಿಂದ 15 ವರ್ಷದೊಳಗಿನ ಮಕ್ಕಳು ಭಾಗವಹಿಸಬಹುದು. ಸಂಪರ್ಕ ವಿಳಾಸ- ಕೆ. ಎಚ್‌. ಕುಮಾರ್‌, ಸಂಸ್ಥಾಪಕ ಕಾರ್ಯದರ್ಶಿ, ರಂಗೋತ್ರಿ ಮಕ್ಕಳ ರಂಗ ಶಾಲೆ, ಶ್ರೀರಾಮ ಮಂದಿರ ಆಟದ ಮೈದಾನ, ರಂಗಮಂದಿರ, 4ನೇ ವಿಭಾಗ, ರಾಜಾಜಿ ನಗರ, ಬೆಂಗಳೂರು-10, ಫೋನ್‌: 080-3105623

ಶಿಕ್ಷಣ ಶಿಬಿರ : ಸ್ವಾಮಿ ವಿವೇಕಾನಂದ ವಿದ್ಯಾ ಶಾಲಾ ಹೈಸ್ಕೂಲ್‌, ಶಿಕ್ಷಣ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಲ್ಕರಿಂದ 15 ವರ್ಷದೊಳಗಿನ ಮಕ್ಕಳು ಏಪ್ರಿಲ್‌ 12ರೊಳಗೆ ಹೆಸರು ನೋಂದಾಯಿಸಬಹುದು. ವಿವರಗಳಿಗೆ- ಎಚ್‌. ಎನ್‌. ಹೇಮಲತಾ, 439, 4ನೇ ಮುಖ್ಯ ರಸ್ತೆ, ನಾಗೇಂದ್ರ ಬ್ಲಾಕ್‌, ಬೆಂಗಳೂರು -50, ಫೋನ್‌: 080-6507497 ಸಂಪರ್ಕಿಸಿ.

ಯೋಗ , ಸಂಗೀತ : ಸೈಂಟ್‌ ರೋಹಿತ್‌ ಹೈಸ್ಕೂಲ್‌, ಆರರಿಂದ ಹದಿನಾರು ವರ್ಷದೊಳಗಿನ ಮಕ್ಕಳಿಗೆ ಯೋಗ ಮತ್ತು ಸಂಗೀತ ಕಲಿಸಿಕೊಡಲಿದೆ. ಸಂಪರ್ಕಿಸಿ- ಸೈಂಟ್‌ ರೋಹಿತ್‌ ಹೈಸ್ಕೂಲ್‌, 1ನೇ ಅಡ್ಡರಸ್ತೆ, 1ನೇ ಮುಖ್ಯ ರಸ್ತೆ, ಪ್ರಶಾಂತ ನಗರ, ನಾಗರಬಾವಿ ಮುಖ್ಯ ರಸ್ತೆ, ಬೆಂಗಳೂರು-79, ಫೋನ್‌- 080- 3285324, 3280461, 3286461.

ನೃತ್ಯ: ಲೈಫ್‌ ಸ್ಟೈಲ್‌ ಸಂಸ್ಥೆ , ಆರರಿಂದ 13 ವರ್ಷದ ಮಕ್ಕಳಿಗೆ ಸಂಗೀತ, ನೃತ್ಯಗಳನ್ನು ಕಲಿಸಿಕೊಡಲಿದೆ. ಏಪ್ರಿಲ್‌ 9ರಿಂದ ಮೇ 5ರವರೆಗೆ. ಸಂಪರ್ಕ ವಿಳಾಸ - ಲೈಫ್‌ ಸ್ಟೈಲ್‌ ಕ್ಲಿನಿಕ್‌ ಅಕಾಡೆಮಿ, 37, ಒಂದನೇ ಮಹಡಿ, 17ನೇ ಅಡ್ಡರಸ್ತೆ, 6ನೇ ಮುಖ್ಯ ರಸ್ತೆ, ಮಲ್ಲೇಶ್ವರ, ಬೆಂಗಳೂರು, ಫೋನ್‌- 080- 3360373, 3341471

ಕರಾಟೆ : ದಿ ಸ್ಟ್ರೆಕ್ಚರಲ್‌ ಸ್ಕೂಲ್‌ ಆಫ್‌ ಆರ್ಟ್ಸ್‌ ಭಾವಗೀತೆ, ನೃತ್ಯ, ಕರಾಟೆ ಕಲಿಸಿಕೊಡಲಿದೆ. ವಿವರಗಳಿಗೆ- ಕಾರ್ಯದರ್ಶಿ, ದಿ ಸ್ಟ್ರೆಕ್ಚರಲ್‌ ಸ್ಕೂಲ್‌ ಆಫ್‌ ಫೈನ್‌ ಆರ್ಟ್ಸ್‌, 49, ವಿಜಯರಂಗ, 17ನೇ ಅಡ್ಡರಸ್ತೆ, ಎಂಆರ್‌ಸಿಆರ್‌, ವಿಜಯನಗರ, ಬೆಂಗಳೂರು- 40

ಅಜ್ಜಿ ಮನೆ ಸಿಕ್‌ತಾ...?

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X