ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡೆಯೂರು ಸಿದ್ಧಲಿಂಗೇಶ್ವರ ಜಾತ್ರೆಗೆ ವಿಶೇಷ ಬಸ್‌ ಸೌಕರ್ಯ

By Staff
|
Google Oneindia Kannada News

ತುಮಕೂರು : ಕುಣಿಗಲ್‌ ಬಳಿ ಇರುವ ಎಡೆಯೂರಿನಲ್ಲಿ ಈ ಹೊತ್ತು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಾತ್ರೆಯ ಸಂಭ್ರಮ. ಸಾವಿರಾರು ಭಕ್ತಾದಿಗಳು ಯುಗಾದಿಯ ದಿನದಿಂದಲೇ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗಳ ಗದ್ದುಗೆಯ ದರ್ಶನ ಮಾಡುತ್ತಿದ್ದಾರೆ.

ಏಪ್ರಿಲ್‌ 8ನೇ ತಾರೀಖಿನವರೆಗೆ ಇಲ್ಲಿ ಜಾತ್ರೆಯ ಪ್ರಯುಕ್ತ ವಿವಿಧ ಧಾರ್ಮಿಕ ವಿಧಿಗಳು ಜರುಗುತ್ತಲಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತುಮಕೂರು ವಿಭಾಗ ವಿಶೇಷ ಬಸ್‌ ಸೌಕರ್ಯವನ್ನೂ ಒದಗಿಸಿದೆ.

ತುಮಕೂರು, ಕುಣಿಗಲ್‌, ತುರುವೇಕೆರೆ ಹಾಗೂ ಬೆಂಗಳೂರಿನಿಂದ ಎಡೆಯೂರು ಜಾತ್ರೆ ವಿಶೇಷ ಎಂಬ ಫಲಕ ಹೊತ್ತ ವಿಶೇಷ ಬಸ್‌ಗಳು ಸಂಚರಿಸುತ್ತಿವೆ.

(ಇನ್ಫೋ ವರದಿ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X