ನಿತ್ಯ ಭವಿಷ್ಯ
*ಜಾನುಕೊಂಡ ಶಾಮಾ ಶಾಸ್ತ್ರೀ
ಮೇಷ : ನಿಮ್ಮೊಡನೆ ಕೆಲಸ ಮಾಡುವ ನಿಮ್ಮ ಸ್ನೇಹಿತರು ಸುಸ್ತಾಗುವಂತೆ ಮಾಡಬೇಡಿ. ಖುಷಿಗಾಗಿ ಅವರನ್ನು ಛೇಡಿಸುವಾಗಲೂ ಸ್ವಲ್ಪ ಜಾಗರೂಕರಾಗಿರಿ.ವೃಷಭ : ಬಚ್ಚಿಟ್ಟುಕೊಂಡ ಸತ್ಯ ತುಂಬಾ ದಿನಗಳ ಕಾಲ ಜೇಬಿನಲ್ಲಿ ಉಳಿಯುವುದಿಲ್ಲ. ಆದ್ದರಿಂದ ನಿಮ್ಮ ಗಾಂಭೀರ್ಯವನ್ನು ಕಾಯ್ದುಕೊಳ್ಳಲಾದರೂ ಈಗ ಎಲ್ಲವನ್ನೂ ತಿಳಿಸಿಬಿಡಿ.
ಮಿಥುನ : ಎಲ್ಲವನ್ನೂ ಮರೆತು ಹಾಯಾಗಿರುವ ಕಾಲವನ್ನು ನೆನೆಸಿಕೊಂಡು ಈಗ ಸಮಯ ವ್ಯರ್ಥ ಮಾಡುವುದರಲ್ಲಿ ಅರ್ಥವಿಲ್ಲ. ಖರ್ಚು ವೆಚ್ಚಗಳ ಲೆಕ್ಕಾಚಾರದ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ.
ಕಟಕ : ಧರಣಿಯಾಳುವಾತನಿಗೆ ಸಲ್ಲುವ ಮರ್ಯಾದೆ ನಿಮ್ಮ ಕಾಲಬುಡಕ್ಕೆ ಬರಲಿದೆ. ಆದ್ದರಿಂದ ಸ್ನೇಹಿತರು ತುಂಬಾ ಮಂದಿ ಹತ್ತಿರ ಬರುತ್ತಾರೆ. ಅಂದಮೇಲೆ ಜಾಗ್ರತೆ ಇರಬೇಕು ಎಂದಾಯಿತು.
ಸಿಂಹ : ಹೆಗಲ ಮೇಲಿನ ಜವಾಬ್ದಾರಿಯನ್ನು ಇಳಿಸಲು ಹೆಣಗಾಡುತ್ತೀರಿ. ಆದಾಯದಲ್ಲಿ ಪ್ರಗತಿ ಇರುವುದರಿಂದ ಬಡ್ತಿಯ ಅವಶ್ಯಕತೆಯೇ ನಿಮಗಿಲ್ಲ.
ಕನ್ಯಾ : ತುಂಬಾ ಹಣ ಇಟ್ಟುಕೊಂಡು ಭಂಡ ಧೈರ್ಯದಿಂದ ಸುತ್ತಾಡಬೇಡಿ. ಕಳ್ಳತನದ ಭಯವಿದೆ. ನಿಮ್ಮ ಮಕ್ಕಳ ಸಂಭ್ರಮ ನೋಡಿ ಖುಷಿಯಾಗುತ್ತೀರಿ.
ತುಲಾ : ನಿಮ್ಮ ಯೋಚನೆಗಳು ಪುರಾಣಗಳನ್ನು ಸಣ್ಣವರ ಮೇಲೆ ಹೇರುವುದರಿಂದ ತುಂಬಾ ನಷ್ಟವಾಗಬಹುದು. ಏನಿದ್ದರೂ ಎಲ್ಲವೂ ನಿಮ್ಮ ನೇತೃತ್ವದಲ್ಲಿ ನಡೆಯುವುದರಿಂದ ಕೊನೆಗೆ ನೀವೇ ಜವಾಬ್ದಾರರಾಗುತ್ತೀರಿ.
ವೃಶ್ಚಿಕ : ಮತ್ತೆ ಯಥಾ ಪ್ರಕಾರ ನಿಮ್ಮವೇ ದಿನಗಳು. ಸ್ನೇಹಿತರು, ಬಂಧುಗಳು ನಿಮ್ಮ ಬಳಿ.ಹುಸಿ ಜಗಳಗಳೆಲ್ಲಾ ಇನ್ನೂ ಬಹು ದೂರ ಇದೆ ಅಲ್ಲವೇ?
ಧನಸ್ಸು : ಇವತ್ತು ಬರೀ ವ್ಯವಹಾರದಲ್ಲಿ ವ್ಯಸ್ತರಾಗಿರುತ್ತೀರಿ. ಅವುಗಳ ನಡುವೆಯೂ ಮನೆಯವರಿಗಾಗಿ ಸ್ವಲ್ಪ ಸಮಯ ವ್ಯಯಿಸಿದರೆ ಸಿಟ್ಟು ಪಟ್ಟುಗಳೆಲ್ಲಾ ಮುಗಿದು ಹೋಗುತ್ತವೆ. ಆಲ್ ದ ಬೆಸ್ಟ್.
ಮಕರ : ಬಡವರು - ಶ್ರೀಮಂತರು ಎನ್ನುವ ಬೇಧ ಯಾವ ಕ್ಷೇತ್ರದಲ್ಲಾದರೂ ಸರಿ ಅಗತ್ಯವಿಲ್ಲ. ಮೂಗಿನ ನೇರಕ್ಕೆ ಮಾತನಾಡಿ ಇಮೇಜು ಕೆಡಿಸಿಕೊಳ್ಳಬೇಡಿ.
ಕುಂಭ : ಇವತ್ತು ಧನಲಾಭದ ಸುದ್ದಿ ನಿಮ್ಮ ಕಿವಿ ತಲುಪಲಿದೆ. ಮತ್ತೆ ಖರ್ಚುಗಳ ಲೆಕ್ಕ ಹಾಕುತ್ತೀರಿ. ಮನೆಯವರೊಂದಿಗೆ ಸಂಭ್ರಮ ಆಚರಿಸಲು ತೊಂದರೆ ಇಲ್ಲ.
ಮೀನ : ನೀವು ಹಾಕುವ ಲೆಕ್ಕಾಚಾರಗಳು ತಿರುವು ಮುರುವು ಆಗುವ ಸಾಧ್ಯತೆ ಇದೆ. ಆದ್ದರಿಂದ ಮತ್ತೆ ಜಗಳಗಳಿಗಾಗಿ ಸಮಯ ಕಾಯಬೇಡಿ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications