ಮದುವೆ ದಿಬ್ಬಣವ ಮಸಣಕೊಯ್ದ ವಿಧಿರಾಯ - 13 ಸಾವು
ಬೆಂಗಳೂರು : ಬಿಜಾಪುರದಲ್ಲಿ ಮದುವೆ ದಿಬ್ಬಣ ಹೊತ್ತು ಸಾಗುತ್ತಿದ್ದ ಮಿನಿ ಲಾರಿ ಅಪಘಾತ ಮತ್ತು ದೇವನಹಳ್ಳಿಯಲ್ಲಿ ಪಲ್ಟಿಯಾದ ಟೆಂಪೋ ದುರಂತ ಒಟ್ಟು ಹದಿನಾರು ಮಂದಿಯನ್ನು ಬಲಿ ತೆಗೆದುಕೊಂಡ ದುರ್ಘಟನೆ ಬುಧವಾರ ಸಂಭವಿಸಿದೆ. ಈ ನಡುವೆ ಚೆನ್ನ ಪಟ್ಟಣದಲ್ಲಿ ತಮಿಳರ ಕಾಲೋನಿಗೆ ಬೆಂಕಿ ಹತ್ತಿಕೊಂಡಿದ್ದು, ಅಲ್ಲಿನ ನಿವಾಸಿಗಳು ನೆಲೆ ಕಳೆದುಕೊಂಡಿದ್ದಾರೆ.
ಬಿಜಾಪುರದ ಇಂಡಿ ತಾಲ್ಲೂಕಿನಲ್ಲಿ ಮದುವೆ ತಂಡದ ಜನರಿದ್ದ ಮಿನಿ ಲಾರಿ ಮತ್ತು ಪೈಪುಗಳನ್ನು ಸಾಗುತ್ತಿದ್ದ ಲಾರಿ ಡಿಕ್ಕಿಯಾಗಿ 13 ಜನ ಮೃತ ಪಟ್ಟಿದ್ದು, 40 ಮಂದಿ ಗಾಯಗೊಂಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 13 ಕ್ಕೆ ಹೊಂದಿಕೊಂಡಿರುವ ಇಂಡಿ ತಾಲ್ಲೂಕಿನ ಹೊರ್ತಿ ಗ್ರಾಮ ಸಮೀಪದ ಹಳಗುಣಕಿ ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು, ಮದುಮಗ ಮತ್ತು ಆತನ ತಂದೆಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೃತಪಟ್ಟವರನ್ನು ನಾಜೂಕಬಿ ಸತ್ತಾರ ತಾಂಬೋಳಿ( 50), ಹಸನ್ ಸಾಬ್ ಯಾಕೂಬ್ ಸಾಬ್ ಮಣಿಯಾರ್( 40), ಫಾತಿಮಾ ಷಬ್ಬೀರ್ ಮಣಿಯಾರ್ (50), ತೈಮಾನ್ ಮಣಿಯಾರ್ ತಾಳಿಕೋಟೆ (30), ಜುಬೇದಾ ಇಬ್ರಾಹಿಂ ಮಣಿಯಾರ್ (50), ಮಮ್ತಾಜ್ ಬಿ. ಬಾಳೇ ಸಾಬಿ (50), ರಾಜಮಾ ಮದರ್ ಸಾಬ್ ತಾಬೋ, ಮಿನಿಲಾರಿಯ ಚಾಲಕ ಅಕ್ಕಲ ಕೋಟ ತಾಲ್ಲೂಕಿನ ಬಾಸ ಲೇಗಾಂವದ, ಸಲೀಮಾ ತಾಂಬೋಳೆ(40), ತಬಸಮ್ ಅಯ್ಯಾತ್ ತಾಂಬೋಳೆ ಮತ್ತು ಫಾತಿಮಾ ತಾಂಬೋಳೆ(35) ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಹಚ್ಚುವ ಪ್ರಯತ್ನ ನಡೆಯುತ್ತಿದೆ.
ಚೆನ್ನಪಟ್ಟಣದಲ್ಲಿ 60 ಗುಡಿಸಲು ಬೆಂಕಿಗಾಹುತಿ : ಚೆನ್ನಪಟ್ಟಣದ 9ನೇ ಅಡ್ಡ ರಸ್ತೆಯಲ್ಲಿರುವ ತಮಿಳರ ಕಾಲೋನಿಯಲ್ಲಿ ಬುಧವಾರ ಮಧ್ಯಾಹ್ನ ಭೀಕರ ಅಗ್ನಿ ದುರಂತ ಸಂಭವಿಸಿದ್ದು 60 ಗುಡಿಸಲುಗಳು ಬೂದಿಯಾಗಿವೆ. ಇಡೀ ತಮಿಳ ಕಾಲೋನಿಯೇ ಭಸ್ಮವಾಗಿದ್ದು, ತಕ್ಷಣ ಬದಲಿ ವ್ಯವಸ್ಥೆ ಕಲ್ಪಿಸಿಕೊಡುವಂತೆ ವಿಭಾಗಾಧಿಕಾರಿ ಪುಟ್ಟ ಹಲಗಯ್ಯನವರನ್ನು ಕಾರ್ಮಿಕರು ಕೇಳಿಕೊಂಡಿದ್ದಾರೆ.
ದೇವನಹಳ್ಳಿಯ ಬೆಂಗಳೂರು- ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿಕ್ಕ ಸನ್ನೆ- ದೇವನಹಳ್ಳಿ ಪಟ್ಟಣದ ಮಧ್ಯೆ ಚಿಕ್ಕ ಜಾಲ ಕಡೆಯಿಂದ ದೇವನಹಳ್ಳಿ ಕಡೆಗೆ ಜನರನ್ನು ತುಂಬಿಕೊಂಡು ಬರುತ್ತಿದ್ದ ಟೆಂಪೋದ ಹಿಂದಿನ ಟೈರ್ ಸಿಡಿದು ಟೆಂಪೊ ಪಲ್ಟಿಯಾಗಿದ್ದರಿಂದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ದೊಡ್ಡ ಸನ್ನೆ ಗ್ರಾಮದ ಚೆನ್ನಕೇಶವ (32), ಟೆಂಪೋ ಚಾಲಕ ಯಲಹಂಕ ನಿವಾಸಿ ತಿಮ್ಮಯ್ಯ ಮತ್ತು ಡಿ. ಹೊಸೂರು ಗ್ರಾಮದ ಚಿನ್ನಿ (23) ಮೃತಪಟ್ಟವರು.
(ಇನ್ಫೋ ವಾರ್ತೆ)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications