Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ :ಇದು ಋತು ಪರಿವರ್ತನೆಯ ಕಾಲ. ನಿಮ್ಮ ಬದುಕಲ್ಲೂ ಪರಿವರ್ತನೆ ಕಾದಿದೆ. ಇಂದು ಕೈಗೊಳ್ಳುವ ನಿರ್ಧಾರದಿಂದ ಮುಂದೆ ದೊಡ್ಡ ಲಾಭ ಇದೆ.

ವೃಷಭ : ಪ್ರೇಮ, ಪ್ರೀತಿಗೆ ಇದು ಕಾಲವೂ ಅಲ್ಲ. ಸೂಕ್ತ ವೇದಿಕೆಯೂ ಅಲ್ಲ. ಹತ್ತಾರು ಕಣ್ಣುಗಳು ನಿಮ್ಮನ್ನೇ ನೋಡುತ್ತಿವೆ. ಎಚ್ಚರ ತಪ್ಪಿದರೆ, ಕೆಟ್ಟ ಹೆಸರು ಶಾಶ್ವತ.

ಮಿಥುನ : ನಿಮ್ಮ ಲೆಕ್ಕಾಚಾರಗಳು ಯಾವುದೇ ರೀತಿಯಲ್ಲಿಯೂ ಸರಿಯಾಗಿರುವುದಿಲ್ಲ ಅಂತ ಬೇಸರ ಬೇಡ. ಆರೋಗ್ಯದತ್ತ ಗಮನವಿರಲಿ. ಏರಿಳಿತಗಳು ಎಲ್ಲ ಕಡೆಯೂ ಸಹಜ ತಾನೇ. ತಾಳ್ಮೆಯೇ ನಿಮ್ಮನ್ನು ಕಾಪಾಡುವುದು.

ಕಟಕ : ಕಾಫಿಗೆ ಕರೆಯುವ ಸ್ನೇಹಿತರ ನೋವುಗಳನ್ನು ಕೇಳಿ ಬೆರಗಾಗುತ್ತೀರಿ. ಮನೆಯಲ್ಲಿ ಪುತ್ರನಿಂದ ಶುಭಕಾರ್ಯವಾಗಬಹುದು. ನಿಮ್ಮ ಏಕಾಗ್ರತೆಯಿಂದಾಗಿ ಹಿಡಿದಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸುತ್ತೀರಿ.

ಸಿಂಹ : ಸಂಗಾತಿಯ ಸಿಟ್ಟನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾದರೆ ಮೌನವಾಗಿರಬೇಕು. ಇವತ್ತು ಸಂಜೆ ನಿಮಗೊಂದು ಆಶ್ಚರ್ಯದ ಸುದ್ದಿ ಕಾದಿದೆ. ಖುಷಿಯ ದಿನ. ಎಂಜಾಯ್‌.

ಕನ್ಯಾ : ನಿಮ್ಮ ಲೆಕ್ಕಾಚಾರ ಸರಿಯಾದುದಕ್ಕೆ ಸಮಾಧಾನದ ನಿಟ್ಟುಸಿರು ಬಿಡುತ್ತೀರಿ. ಕೃಷಿ ಕ್ಷೇತ್ರದಲ್ಲಿ ಲಾಭ ಬರಬಹುದು. ಇಷ್ಟು ದಿನ ದುಡಿದಿರುವುದಕ್ಕೆ ನಷ್ಟ ಕಾಣಲಿಲ್ಲವಲ್ಲ ಅಂತ ಖುಷಿ ಪಡಲಿದ್ದೀರಿ.

ತುಲಾ : ಮನೆಯಲ್ಲಿ ಪತ್ನಿ ಕಾಡುವುದು ನಿಮ್ಮ ಮತ್ತು ಮನೆಯವರ ಒಳ್ಳೆಯದಕ್ಕೇ ಅಲ್ವಾ ? ಆರ್ಥಿಕ ಮುಗ್ಗಟ್ಟಿದೆ ಅಂತ ಸಿಟ್ಟು ಮಾಡಿಕೊಳ್ಳಬೇಡಿ. ಸದ್ಯದಲ್ಲಿಯೇ ಹೊಸ ಯೋಜನೆ ನಿಮ್ಮ ಕೈತುಂಬಾ ಹಣ ತರಲಿದೆ.

ವೃಶ್ಚಿಕ : ಸ್ನೇಹಿತರೊಂದಿಗಿನ ಬೇಸರವೊಂದು ಬಿಟ್ಟರೆ ನೀವು ನಿರಾಳವಾಗಿರುತ್ತೀರಿ. ಸುತ್ತಾಡಬೇಕು ಎಂಬ ಆಸೆ ಮತ್ತೆ ಚಿಗುರುತ್ತದೆ. ಹಾಗಂತ ಪ್ರಯಾಣ ಭಾಗ್ಯ ಸದ್ಯಕ್ಕಿಲ್ಲ.

ಧನಸ್ಸು : ಶತ್ರುಗಳ ಬಗ್ಗೆ ಭಯ ಯಾಕೆ. ನಿಮ್ಮ ಕೆಲಸಗಳು ಸರಿಯಾಗಿರುತ್ತವೆ ಆದ್ದರಿಂದ ಅನಗತ್ಯ ಗೊಂದಲಗಳ ಅಗತ್ಯವಿಲ್ಲ.

ಮಕರ : ಕಳೆದು ಹೋದ ಆಸಕ್ತಿಯನ್ನು ಮತ್ತೆ ಚಿಗುರಿಸುವುದು ನಿಮ್ಮ ಮುಂದಿರುವ ಏಕಮೇವ ಕೆಲಸ. ಇಲ್ಲವಾದಲ್ಲಿ ನಿಮ್ಮ ಬಂಧುಗಳಿಗೆ ಮತ್ತೊಮ್ಮೆ ನಿರಾಸೆ ತರುತ್ತೀರಿ.

ಕುಂಭ : ಪ್ರಯಾಣ ಅನಿವಾರ್ಯ. ಮನೆಯಲ್ಲಿ ಕೊಂಚ ಕಿರಿಕಿರಿ. ಹಣ ಕಾಸಿನ ವ್ಯವಹಾರ ಈ ದಿನದ ಮಟ್ಟಿಗೆ ಬೇಡ. ದೇವರ ಪೂಜೆಯಿಂದ ಕಷ್ಟ ಪರಿಹಾರ.

ಮೀನ : ನೌಕರಿಯಲ್ಲಿ ಪ್ರಗತಿ ಕಾಣುತ್ತೀರಿ. ಹೊಸದನ್ನು ಕಲಿಯಬೇಕು ಎಂಬ ಉತ್ಸಾಹ ನಿಮ್ಮನ್ನು ಉನ್ನತ ಹುದ್ದೆಗೆ ಏರಿಸುತ್ತದೆ. ದೈಹಿಕ ಸುಸ್ತಿನತ್ತ ಸ್ವಲ್ಪ ಗಮನವಿರಲಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+