Get Updates
Get notified of breaking news, exclusive insights, and must-see stories!

ನಿತ್ಯ ಭವಿಷ್ಯ

*ಜಾನುಕೊಂಡ ಶಾಮಾ ಶಾಸ್ತ್ರೀ

ಮೇಷ : ನಿಮ್ಮ ಪಾಲಿಗಿದು ಅತ್ಯುತ್ತಮವಾದ ದಿನ. ಆದರೆ, ಕೆಲಸದ ಒತ್ತಡದ ಕಾರಣದಿಂದಾಗಿ ದಿನ ನಿಧಾನವಾಗಿ ಸಾಗುತ್ತಿದೆ ಅನ್ನಿಸಬಹುದು. ಮಧ್ಯಾಹ್ನದ ನಂತರ ಶ್ರಮದಾಯಕ ಕೆಲಸಗಳಲ್ಲಿ ತೊಡಗುವುದು ಬೇಡ.

ವೃಷಭ :ಹೊರಾಂಗಣ ಚಟುವಟಿಕೆಗಳಲ್ಲಿ ಹೆಚ್ಚಿನ ಯಶಸ್ಸಿದ್ದು , ಹವೆ ಕೂಡ ನಿಮ್ಮ ಚಟುವಟಿಕೆಗಳಿಗೆ ಸಹಕರಿಸಲಿದೆ. ಸಂಜೆ ಮಕ್ಕಳನ್ನು ಹೊರಗೆ (ಬಹುಶಃ ಪಿಜ್ಜಾ ಕಾರ್ನರ್‌) ಕರೆದೊಯ್ಯುವುದು ಅನಿವಾರ್ಯವಾದೀತು.

ಮಿಥುನ : ಎಲ್ಲಾ ಟ್ಯಾಕ್ಸಿಗಳನ್ನು ಏಕಕಾಲದಲ್ಲಿ ಚಲಾಯಿಸುವುದು ಸಾಧ್ಯವಿಲ್ಲ . ನೀವು ಮನುಷ್ಯರಾದ್ದರಿಂದ ಅನಾರೋಗ್ಯ ಸಹಜ. ಇಷ್ಟಕ್ಕೆಲ್ಲ ಧೃತಿಗೆಡುವ ಸ್ವಭಾವ ನಿಮಗೆ ಒಗ್ಗುವಂಥದ್ದಲ್ಲ.

ಕಟಕ : ಸದ್ಯಕ್ಕೆ ನಿಮ್ಮ ಪಾಲಿಗೆ ಯಶಸ್ಸಿನ ಹವಾ ಅಷ್ಟು ಚೆನ್ನಾಗಿಲ್ಲವಾದ್ದರಿಂದ ನೀವು ಪ್ಲಾನಿಂಗ್‌ನಲ್ಲಿ ತೊಡಗುವುದು ಒಳ್ಳೆಯದು. ಇದರಿಂದಾಗಿ ನಾಳೆಯ ಕೆಲಸಗಳು ಸುಲಭವಾಗಲಿವೆ.

ಸಿಂಹ : ಹೆಚ್ಚಿನ ನಿರೀಕ್ಷೆಯ ಬಾಲ ಹಿಡಿದಿರುವುದರಿಂದ ನೀವೀಗ ಬೀಗುತ್ತಿದ್ದೀರಿ. ಆದರೆ ರೇಸಿನಲ್ಲಿ ಎಡವಿ ಬೀಳುವ ಸಾಧ್ಯತೆಯೂ ಇರುವುದರಿಂದ ಜೋಪಾನವಾಗಿರಿ. ಯಾವುದಕ್ಕೂ ಜೀವ ವಿಮೆ ಪಡೆಯುವುದು ಜಾಣತನ.

ಕನ್ಯಾ : ವೃತ್ತಿ ಸಂಬಂಧವಾಗಿ ಕಠಿಣ ವಿಮರ್ಶೆಯನ್ನು ಎದುರಿಸುತ್ತೀರಿ. ಈವರೆಗೂ ಪ್ರಶಂಸಿದವರೇ ಟೀಕಿಸಲು ಪ್ರಾರಂಭಿಸಿದರೆ ಅಚ್ಚರಿಯೇನಿಲ್ಲ . ಇದರಿಂದಾಗಿ ನಿಮ್ಮ ವೃತ್ತಿಪರತೆ ಹೆಚ್ಚುತ್ತದೆ ಎನ್ನುವುದೇ ವಿಶೇಷ.

ತುಲಾ : ನಿಮ್ಮ ವ್ಯಕ್ತಿತ್ವ ತೆರೆದ ಪುಸ್ತಕದಂತಾದರೂ, ಯುವಕರೊಂದಿಗೆ ಹೆಚ್ಚಿನ ಮನಸ್ತಾಪ ಕಟ್ಟಿಕೊಳ್ಳುತ್ತಿದ್ದೀರಿ. ಅವರ ದೃಷ್ಟಿಕೋನ ನಿಮಗೆ ಇಷ್ಟವಾಗದಿರುವುದೇ ವೈಮನಸ್ಯಕ್ಕೆ ಕಾರಣ. ಅವನ್ನು ನಿರ್ಲಕ್ಷಿಸುವುದೇ ಸರಿ.

ವೃಶ್ಚಿಕ : ಬಂಧುಗಳು ಅನಾರೋಗ್ಯದಿಂದ ನರಳುತ್ತಿರುವುದರಿಂದ ಖಿನ್ನರಾಗಿದ್ದೀರಿ. ಶುಭ ಸಮಾಚಾರ ಹತ್ತಿರದಲ್ಲೇ ಇದೆ. ಸೃಜನಶೀಲ ಚಟುವಟಿಕೆಗಳಲ್ಲಿ ವ್ಯಸ್ತರಾಗುವುದು ಬೇಜಾರಿಗೆ ಒಳ್ಳೆಯ ಮದ್ದು.

ಧನಸ್ಸು : ಇಷ್ಟ ಪಾತ್ರರ ಪ್ರೀತಿ ಪೂರದಲ್ಲಿ ಮುಳುಗಿ ಧನ್ಯತೆ ಅನುಭವಿಸಲಿದ್ದೀರಿ. ಬದಲಿಗೆ ನೀವೇನು ಕೊಡುತ್ತೀರಿ ಅನ್ನುವುದರ ಆತ್ಮಾವಲೋಕನ ಅವಶ್ಯ. ತುಸು ತಲೆಭಾರದ ದಿನ.

ಮಕರ : ದಣಿದಿದ್ದೀರಿ. ಸಾಕಷ್ಟು ವಿಶ್ರಾಂತಿಯ ಅಗತ್ಯವಿದೆ. ಮುಖ್ಯವಾಗಿ ಮಾನಸ ಸರೋವರದಲ್ಲಿ ಅಶಾಂತಿಯ ಅಲೆಗಳು ಏಳದಂತೆ ಎಚ್ಚರಿಕೆ ವಹಿಸಿ. ಅದು ನಿಮ್ಮ ಕೈಯ್ಯಲ್ಲೇ ಇದೆ.

ಕುಂಭ : ಗೆಳೆಯನೊಬ್ಬನ ಅನಿರೀಕ್ಷಿತ ಹಾಜರಿ ಕುಟುಂಬದಲ್ಲಿ ಅಶಾಂತಿಯ ಅಲೆಗಳನ್ನು ಎಬ್ಬಿಸಲಿದೆ. ತಪ್ಪು ತಿಳಿವಳಿಕೆಗಳಿಗೆ ಆಸ್ಪದವಿರುವುದರಿಂದ ಮುಕ್ತ ಚರ್ಚೆಯಾಂದೆ ಪರಿಸ್ಥಿತಿ ತಿಳಿಗೊಳ್ಳಲು ಪರಿಹಾರ.

ಮೀನ : ಹಲೋ ಹೇಳುವ ಮೂಲಕ ಅಪರಿಚಿತನನ್ನು ಗೆಲ್ಲಲು ಪ್ರಯತ್ನಿಸಿ. ಮಾತುಗಾರಿಕೆಯಲ್ಲಿ ನೀವು ಜಾಣರು. ಅಂದಹಾಗೆ ರಜೆಯ ದಿನ ದೈಹಿಕ ಶ್ರಮದೊಂದಿಗೆ ದುಡ್ಡೂ ಕೈ ಬಿಡುತ್ತದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+