Get Updates
Get notified of breaking news, exclusive insights, and must-see stories!

ಅಗತ್ಯವಿಲ್ಲದ ಸರ್ಕಾರಿ ನೌಕರರ ಕಡ್ಡಾಯ ನಿವೃತ್ತಿ ಸಿಂಧು : ಸು.ಕೋರ್ಟ್‌

ನವದೆಹಲಿ : ಕೇಂದ್ರ ಸರಕಾರಿ ನೌಕರರ ಕಡ್ಡಾಯ ನಿವೃತ್ತಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಮಹತ್ವದ ತೀರ್ಮಾನ ಪ್ರಕಟಿಸಿದೆ. ಕೇಂದ್ರ ಸರಕಾರ ಫೆ.28ರಂದು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್‌ನಲ್ಲಿ ಸರ್ಕಾರಿ ನೌಕರರ ಸಂಖ್ಯೆ ಇಳಿಸುವ ಸಂಬಂಧ ಆಗಿದ್ದ ಪ್ರಸ್ತಾಪದ ಹಿನ್ನೆಲೆಯಲ್ಲಿ ಈ ತೀರ್ಪು ವಿಶೇಷ ಮನ್ನಣೆ ಗಳಿಸಿದೆ.

ಸರ್ಕಾರಿ ನೌಕರರನ್ನು ಕಡ್ಡಾಯ ನಿವೃತ್ತಿಗೊಳಿಸುವ ಸಂಬಂಧ ಸರ್ವೋಚ್ಚ ನ್ಯಾಯಲಯ 8 ಅಂಶದ ಮಾರ್ಗದರ್ಶಿ ಸೂತ್ರಗಳನ್ನು ಸಹ ಸೂಚಿಸಿದೆ. ಆಡಳಿತಾತ್ಮಕ ಸೇವೆಯಲ್ಲಿ ಯಾವುದೇ ವರ್ಗದ ಸೇವೆ ಅನುಪಯುಕ್ತ ಅಥವಾ ಅನಾವಶ್ಯಕ ಎನಿಸಿದಲ್ಲಿ ಅಂಥಹ ಹುದ್ದೆಯನ್ನು ರದ್ದು ಮಾಡಲು ಹಾಗೂ ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಅದಕ್ಷ ನೌಕರರನ್ನು ಕಡ್ಡಾಯ ನಿವೃತ್ತಿಗೆ ಒಳಪಡಿಸುವುದಕ್ಕೆ ಸರ್ವೋಚ್ಚ ನ್ಯಾಯಾಲಯ ಸಹ ಸಹಮತ ವ್ಯಕ್ತಪಡಿಸಿದೆ.

ಸಾಮಾನ್ಯ ಆಡಳಿತದಲ್ಲೂ ಕೂಡ ಹುದ್ದೆ ಅನಾವಶ್ಯಕ ಎನಿಸಿದಲ್ಲಿ ಅದನ್ನು ರದ್ದು ಮಾಡಲು ಕಡ್ಡಾಯ ನಿವೃತ್ತಿ ಯೋಜನೆ ಜಾರಿಗೆ ತರುವ ಸಂಬಂಧ ಕೂಡ ಈ ತೀರ್ಪು ಬೆಳಕು ಚೆಲ್ಲಿದೆ. ನ್ಯಾಯಮೂರ್ತಿಗಳಾದ ಎಸ್‌. ರಾಜೇಂದ್ರಬಾಬು ಮತ್ತು ಕೆ.ಜಿ. ಬಾಲಕೃಷ್ಣನ್‌ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.

ಆದರೆ, ಕಡ್ಡಾಯ ನಿವೃತ್ತಿ ಆದೇಶವನ್ನು ಸಂವಿಧಾನದ 311ನೇ ಪರಿಚ್ಛೇದದಡಿಯಲ್ಲಿ ಬರುವ ಶಿಕ್ಷೆಯೆಂದು ಪರಿಗಣಿಸಲಾಗದು ಎಂದೂ ನ್ಯಾಯಪೀಠ ಸ್ಪಷ್ಟವಾಗಿ ಹೇಳಿದೆ.

ಈ ಹಿನ್ನೆಲೆಯಲ್ಲಿ ಸರ್ವೋಚ್ಚ ನ್ಯಾಯಾಲಯ ಯಾವುದೇ ಸರಕಾರಿ ನೌಕರರನ್ನು ಕಡ್ಡಾಯ ನಿವೃತ್ತಿ ಅಥವಾ ಹುದ್ದೆಯ ರದ್ದು ಸಂದರ್ಭದಲ್ಲಿ ಆ ವ್ಯಕ್ತಿಯ ಸೇವಾ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ. ಕಡ್ಡಾಯ ನಿವೃತ್ತಿ ಆಜ್ಞೆ ಜಾರಿಗೊಳಿಸುವಾಗ ಸಂಬಂಧಿತ ನೌಕರನ ರಹಸ್ಯ ದಾಖಲೆ ಪುಸ್ತಕದಲ್ಲಿ ಏನಾದರೂ ಪ್ರತಿಕೂಲ ಅಂಶಗಳು ಇವೆಯೇ ಎಂಬುದನ್ನು ಕಡ್ಡಾಯವಾಗಿ ಪರಿಶೀಲಿಸಿ ಖಾತ್ರಿಪಡಿಸಿಕೊಳ್ಳಬೇಕು ಎಂದು ನ್ಯಾಯಪೀಠ ಹೇಳಿದೆ.

ಕಾರ್ಯನಿರ್ವಾಹಕ ಎಂಜಿನಿಯರ್‌ ಒಬ್ಬರನ್ನು ಮರು ನೇಮಕ ಮಾಡಿಕೊಳ್ಳುವಂತೆ ಹೈಕೋರ್ಟ್‌ ನೀಡಿದ ತೀರ್ಪನ್ನು ಪ್ರಶ್ನಿಸಿ ಗುಜರಾತ್‌ ಸರಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ ಈ ಮಹತ್ವದ ತೀರ್ಪು ನೀಡಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+