ಭುವಿ ಬೆಳೆಗಳ ಕಾಯುವಾತನಿಗೆ ದೀರ್ಘ ನಮನ
ತುಳುನಾಡಿನ ಹೊಲ, ತೋಟ, ಕಾಡುಗಳಲ್ಲಿ ನಾಗನ ಕಲ್ಲುಗಳು ಸಾಮಾನ್ಯ. ಇಲ್ಲಿನ ಭುವಿ ಬೆಳೆಗಳ ಕಾಯುವ ನಾಗದೇವತೆಗೆ ಎಲ್ಲ ಮನೆಗಳಲ್ಲಿಯೂ ಪವಿತ್ರ ಸ್ಥಾನ. ಕುಟುಂಬ ಕಲಹ, ಭೂಮಿ ಕಾಣಿಗೆ ಸಂಬಂಧಿಸಿದ ಸೋಲು ಗೆಲುವು... ಎಲ್ಲವನ್ನೂ ನಾಗದೇವ ನಿರ್ಧರಿಸುತ್ತಾನೆ.
ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಾಗಾರಾಧನೆಗೆ ಜಾತಿ ಬೇಧವಿಲ್ಲ. ಯಾವುದಾದರೂ ಮನೆಯನ್ನು ಕೊಂಡು ಕೊಳ್ಳಬೇಕಿದ್ದರೆ, ಮುಸ್ಲಿಮರಾಗಲೀ, ಕ್ರಿಶ್ಚಿಯನ್ನರಾಗಲೀ ಆ ಮನೆಗೆ ನಾಗದೋ-ಷ ಇಲ್ಲ ತಾನೇ ಎಂದು ಖಚಿತಪಡಿಸಿಕೊಳ್ಳುವುದುಂಟು. ನಂತರದಲ್ಲಿ ನಾಗದೋ-ಷ ಕಾಣಿಸಿಕೊಂಡರೆ ಆಶ್ಲೇಷ ಬಲಿ, ತಂಬಿಲಗಳನ್ನು ಮಾಡಿ ನಾಗದೇವರನ್ನು ತೃಪ್ತಿ ಪಡಿಸುತ್ತಾರೆ.
ನಾಗಮಂಡಲ ಸೇವೆಯೆಂದರೆ...
ನಾಗ ಪೂಜೆಯಲ್ಲಿ, ಪ್ರಸಿದ್ಧ ಮತ್ತು ಜನಪ್ರಿಯ ಆರಾಧನಾ ವಿಧಾನ ನಾಗಮಂಡಲ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಾಗಮಂಡಲ ಸೇವೆ ವೈಭವದಿಂದ ನಡಯುತ್ತವೆ. ನಾಗಮಂಡಲದಲ್ಲಿ ಬಣ್ಣದ ಹುಡಿಗಳಿಂದ ವರ್ತುಲಾಕಾರದಲ್ಲಿ ನಾಗಬಂಧದ ಚಿತ್ರಗಳನ್ನು ಬಿಡಿಸುತ್ತಾರೆ. ಈ ನಾಗಬಂಧ ವರ್ತುಲದ ತಲೆಭಾಗದಲ್ಲಿ ಕಿರೀಟ ಧರಿಸಿದ ಮುಖವನ್ನು ಚಿತ್ರಿಸಲಾಗುತ್ತದೆ. ಈ ತಲೆಗೆ ಯಕ್ಷಬ್ರಹ್ಮ ಎನ್ನುತ್ತಾರೆ. ಈ ಬ್ರಹ್ಮ ಮತ್ತು ನಾಗ ಒಟ್ಟು ಸೇರಿದರೆ ನಾಗಬ್ರಹ್ಮರಾಗುತ್ತಾರೆ. ಈ ನಾಗಬ್ರಹ್ಮ ಅಥವಾ ಸ್ಥಳೀಯವಾಗಿ ಕರೆಯಲ್ಪಡುವ ಬಿರ್ಮೆರ್ ಪ್ರಾಚೀನ ಕಾಲದಿಂದಲೂ ತುಳುನಾಡಿನ ಆರಾಧ್ಯ ದೈವ.
ತುಳುನಾಡಿನ ಹಿರಿಯರು ತುಳುನಾಡಿನ ರಾಜಕೀಯ ಇತಿಹಾಸಕ್ಕೆ ಸಂಬಂಧಿಸಿದ ಸಾಹಿತ್ಯಗಳಲ್ಲಿ ರಾಜ ರಾಣಿಯರು ಮತ್ತೆ ಮತ್ತೆ ನಾಗಬ್ರಹ್ಮನ ಮೊರೆ ಹೋಗುವುದು ಕಂಡು ಬರುತ್ತದೆ. ನಾವು ಸುಸ್ತಾದಾಗಲೆಲ್ಲಾ ಶಿವನೇ... ಹರನೇ... ಎನ್ನುವ ಹಾಗೆ ತುಳುನಾಡಿನ ಹಿರಿಯರು ನಾಗದೇವನೇ ಕಾಪಾಡಪ್ಪಾ... ಎಂದೇ ಹೇಳುವುದು. ಹಿಂದೂ ಪುರಾಣಗಳ ಪ್ರಕಾರ ಭೂಮಿಯನ್ನು ಆದಿಶೇಷ ಹೊತ್ತು ಕೊಂಡಿದ್ದಾನೆ. ಪ್ರಕೃತಿ ವಿಕೋಪವಾಗಿದೆ ಎಂದರೆ ಆತನಿಗೆ ಸಿಟ್ಟು ಬಂದಿದೆ ಎಂದೋ ಅಥವಾ ಆತನ ಮನಸ್ಸಿಗೆ ನೋವಾಗಿದೆ ಎಂದೋ ಅರ್ಥ. ಆದಿಶೇಷನನ್ನು ಸುಪ್ರೀತಿಗೊಳಿಸುವುದಕ್ಕೆ ನಾಗಮಂಡಲ ಆರಾ-ಧನೆಯನ್ನು ನಡೆಸುತ್ತಾರೆ. ನಾಗಮಂಡಲವನ್ನು ಯಾವ ಮನೆಯವರೇ ಮಾಡಲಿ ಸುತ್ತ ಮುತ್ತಲಿನವರು ಹೊರೆ ಕಾಣಿಕೆ ಅಂತ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಾರೆ. ನಾಗನಿಗೆ ಹಿಂಗಾರ ಹೂವೆಂದರೆ ಪ್ರೀತಿ ಆದ್ದರಿಂದ ಯಾರ ಮನೆಯ ಕಂಗಿನ ತೋಟವಿದೆಯೋ ಅವರೆಲ್ಲರೂ ನಾಗಮಂಡಲ ಪೂಜೆಗೆ ಸ್ವ ಇಚ್ಛೆಯಿಂದ ಹಿಂಗಾರ ಹೂವು ಅರ್ಪಿಸುತ್ತಾರೆ.
ಶಾಸನಗಳತ್ತ ಹೊರಳಿದರೆ ...
ನಾಗ ಮಂಡಲ ಖಚಿತವಾಗಿ ಎಂದಿನಿಂದ ಆರಂಭವಾಯಿತು ಎಂದು ಹೇಳಲಾಗದು. ಕ್ರಿ.ಶ. 1458ರ ಬಾರಕೂರಿನ ಶಾಸನದಲ್ಲಿ ಢಕ್ಕೆ ಬಲಿಯ ಪ್ರಸ್ತಾಪವಿದೆ. 13ನೇ ಶತಮಾನಕ್ಕೆ ಸಂಬಂಧಿಸಿದ ನಾಗಮಂಡಲದ ಶಿಲ್ಪ ಕಾರ್ಕಳದ ನಂದಳಿಕೆಯಲ್ಲಿ ದೊರೆತಿದೆ.
ನಾಗಮಂಡಲ ಮನೆಯಿಂದ ತುಸು ದೂರದ ವಿಸ್ತಾರ ಪ್ರದೇಶದಲ್ಲಿ ನಡೆಯುತ್ತದೆ. ತುಂಬಾ ಕಡಿಮೆಯೆಂದರೂ ಹತ್ತು ಸಾವಿರ ಮಂದಿ ನಾಗಮಂಡಲಕ್ಕೆ ಬಂದೇ ಬರುತ್ತಾರೆ. ಕೇಳಿ ತಿಳಿದ ಸುದ್ದಿಯೇ ಅವರಿಗೆ ಆಹ್ವಾನ ಪತ್ರಿಕೆ. ಅವರಿಗೆಲ್ಲರಿಗೂ ಊಟ, ಉಪಚಾರ, ದಾನ ಧರ್ಮ ಅಂತ ಲಕ್ಷಗಟ್ಟಲೆ ಹಣ ಹರಿಯುತ್ತದೆ. ಆದರೆ ನಂಬಿಕೆ ನೀಡುವ ತೃಪ್ತಿಗೆ ಸಮನುಂಟೇ ? ನಾಗಮಂಡಲದಲ್ಲಿ ನಾಗಯಕ್ಷಿಯನ್ನು ಆವಾಹಿಸಿಕೊಳ್ಳುವ ಪಾತ್ರಿ ಹಿಂಗಾರದ ಹೂವುಗಳನ್ನು ಮುಖಕ್ಕೆ ಆಗಾಗ ತುರುಬಿಕೊಳ್ಳುತ್ತಾರೆ. ನಾಗಮಂಡಲ ಚಿತ್ತಾರದ ಹೊರಸುತ್ತಿನಲ್ಲಿ ನಡೆಯುವ ಕುಣಿತ ಅತ್ಯಂತ ಸುಂದರವೂ, ತರಂಗಬದ್ಧವೂ ಆಗಿರುತ್ತದೆ.
ಪುತ್ತೂರಿನಲ್ಲಿ ಇತ್ತೀಚೆಗೆ ನಡೆದ ನಾಗಮಂಡಲದಲ್ಲಿ ರಾಜಕೀಯ ವ್ಯಕ್ತಿಗಳೂ ಸೇರಿದಂತೆ ಅಂದಾಜು 30 ಸಾವಿರಕ್ಕೂ ಹೆಚ್ಚು ಮಂದಿ ಭಕ್ತಾದಿಗಳು ಭಾಗವಹಿಸಿದ್ದರು. ಬೇಸಿಗೆ ಬಂದಂತೆ, ನಾಗಮಂಡಲ ಉತ್ಸವಗಳ ಹರಕೆ ಹೊತ್ತವರು ಚಪ್ಪರಗಳನ್ನು ಹಾಕುವುದರಲ್ಲಿಯೋ, ಗದ್ದೆಗಳನ್ನು ಸಮತಟ್ಟು ಮಾಡುವುದರಲ್ಲೋ ವ್ಯಸ್ತರಾಗಿರುತ್ತಾರೆ. ಎಲ್ಲ ಆಧುನಿಕತೆಗಳನ್ನು ಮೀರಿ ತುಳು ನಾಡಿನವರ ಏಳು ಬೀಳುಗಳ ಭಾವನೆಗಳ ಹಿಂದೆ ನಾಗದೇವನಿದ್ದಾನೆ.
-
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral












Click it and Unblock the Notifications