Get Updates
Get notified of breaking news, exclusive insights, and must-see stories!

ಕೊರಳ ಕನ್ನಡವ ಕರುಳ ಕನ್ನಡವಾಗಿಸಲು ಬರಗೂರು ಕರೆ

ಬೆಂಗಳೂರು : ಕನ್ನಡಾಭಿಮಾನ ಮರುಳು ಘೋಷಣೆಗಳ ಕೊರಳಿನ ಕನ್ನಡವಾಗಬಾರದು. ಅದು ಕರುಳಿನ ಕನ್ನಡವಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಆಶಿಸಿದ್ದಾರೆ.

ಕನ್ನಡ ಒಂದು ಜಾತ್ಯತೀತ ಭಾಷೆ . ಯಾವ ಭಾಷೆಯೂ ಧರ್ಮ, ಜಾತಿಗಳ ಸಂಬಂಧವನ್ನು ಹೊಂದಿರುವುದಿಲ್ಲ . ಆದ್ದರಿಂದ ಕರ್ನಾಟಕದಲ್ಲಿ ವಾಸ ಮಾಡುವ ವಿವಿಧ ಧರ್ಮೀಯರು ಕನ್ನಡ ಕಲಿಯಬೇಕು. ಪ್ರಜಾಪ್ರಭುತ್ವದಲ್ಲಿ ಗೌರವ ಇರುವವರೆಲ್ಲ ಕನ್ನಡ ಹಾಗೂ ಕನ್ನಡ ಸಂಸ್ಕೃತಿಯನ್ನು ಗೌರವಿಸಬೇಕು. ಎಂದು ಬರಗೂರು ಅಭಿಪ್ರಾಯಪಟ್ಟರು. ಸಂತ ಜೋಸೆಫರ ಕಾಲೇಜಿನ ಕನ್ನಡ ಸಂಘದ ವಾರ್ಷಿಕೋತ್ಸವ ಹಾಗೂ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮಗೆ ಆದರ್ಶ ಅಮೇರಿಕವಲ್ಲ , ಜಪಾನ್‌ : ನಾವಿಂದು ಕಾಣುತ್ತಿರುವುದು ಜಾಗತೀಕರಣವನ್ನಲ್ಲ , ಅಮೇರಿಕರಣವನ್ನು . ಜಾಗತೀಕರಣದ ಹೆಸರಿನಲ್ಲಿ ಮಾಹಿತಿ ತಂತ್ರಜ್ಞಾನದ ಭ್ರಮೆಯನ್ನು ಹುಟ್ಟಿಸಲಾಗುತ್ತಿದೆ. ವಿಷಾದದ ಸಂಗತಿಯೆಂದರೆ ಕಂಪ್ಯೂಟರೀಕರಣದಲ್ಲಿ ಇಂಗ್ಲೀಷಿಗೆ ಆದ್ಯತೆ ಕೊಟ್ಟಿದ್ದೇವೆ. ಅಲ್ಲೆಲ್ಲಾ ಕನ್ನಡಕ್ಕೆ ಅನ್ಯಾಯವಾಗಿದೆ ಎಂದು ಬರಗೂರು ವಿಷಾದಿಸಿದರು.

ಕಂಪ್ಯೂಟರ್‌ ಕ್ಷೇತ್ರದಲ್ಲಿ ಇಂಗ್ಲೀಷಿನ ಬದಲು ಜಪಾನಿ ಭಾಷೆಯನ್ನೆ ಬಳಸುತ್ತಿರುವ ಜಪಾನ್‌ ಜಾಗತಿಕ ಕಂಪ್ಯೂಟರ್‌ ಕ್ಷೇತ್ರದಲ್ಲಿ ಮೊದಲ ಸ್ಥಾನದಲ್ಲಿದೆ. ಆದರೆ, ನಾವು ಅನುಸರಿಸ ಹೊರಟಿರುವ ಅಮೇರಿಕ 32 ನೇ ಸ್ಥಾನದಲ್ಲಿದೆ. ವಾಸ್ತವ ಹೀಗಿದ್ದರೂ ನಾವು ಅಮೇರಿಕವನ್ನೇ ಅನುಸರಿಸುತ್ತಿದ್ದೇವೆ. ಕನ್ನಡದಲ್ಲೂ ಕಂಪ್ಯೂಟರ್‌ ಕಲಿಕೆ ಅಸಾಧ್ಯವೇನಲ್ಲ ಎಂದರು.

ಕನ್ನಡ ಕಲಿಸುವುದೆಂದರೆ ತಮಾಷೆಯಲ್ಲ , ಅದು ಸಮಾಜ ಸೇವೆ : ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬೆಂಗಳೂರು ಜಿಲ್ಲಾ ಕಸಾಪ ಅಧ್ಯಕ್ಷ ಎಂ.ಎಚ್‌. ವಿಜಯೇಂದ್ರ ಅವರು, ಕನ್ನಡ ಬಾರದವರಿಗೆ ಕನ್ನಡ ಕಲಿಸುವುದನ್ನು ಸಮಾಜಸೇವೆ ಎಂದು ನಮ್ಮ ವಿದ್ಯಾರ್ಥಿಗಳು ಪರಿಗಣಿಸಬೇಕು. ಇತ್ತೀಚೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಕ್ಕೆ ಸಲ್ಲಿಸಿರುವ ವರದಿಯ ಬಗ್ಗೆ ವ್ಯಾಪಕ ಚರ್ಚೆಯಾಗಬೇಕು ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಸುಗಮ ಸಂಗೀತ ಗಾಯಕ ಸಿ. ಅಶ್ವಥ್‌ ಕನ್ನಡ ಗೀತೆಗಳನ್ನು ಹಾಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ಯೂಜಿನ್‌ ಲೋಬೊ, ಪ್ರದೀಪ್‌ ಸಿಕ್ವೇರಾ, ಕನ್ನಡ ಸಂಘದ ಅಧ್ಯಕ್ಷ ಹಿ.ಮ. ಬಸವಯ್ಯ ಹಾಗೂ ಉಪನ್ಯಾಸಕರಾದ ಕೋ.ವೆಂ. ರಾಮಕೃಷ್ಣೇಗೌಡ, ಪ್ರೊ. ಕೆ. ನಾಗರಾಜನ್‌ ಮತ್ತಿತರರು ಕಾರ್ಯಕ್ರಮದಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+