Get Updates
Get notified of breaking news, exclusive insights, and must-see stories!

ರಾಂಗ್‌ ಡ್ರೆೃವಿಂಗ್‌ಗೆ ಕಡಿವಾಣ : ವಿವಿಐಪಿಗಳ ರಸ್ತೆಗಳಲ್ಲಿ ಟೆಲಿ ಕ್ಯಾಮರಾ

ಬೆಂಗಳೂರು : ವಿವಿಐಪಿಗಳು ಓಡಾಡುವ ಜಾಗದಲ್ಲಿ ಇನ್ನು ಮುಂದೆ ನೀವು ರಾಂಗ್‌ ಡ್ರೆೃವಿಂಗ್‌ ಮಾಡಿದಲ್ಲಿ , ದಂಡ ತೆರದೆ ನೀವು ಮುಂದೆ ಹೋಗುವಂತೆಯೇ ಇಲ್ಲ. ಕ್ಯಾಮರಾದಲ್ಲಿ ನಿಮ್ಮ ತಪ್ಪು ನೀಟಾಗಿ ರೆಕಾರ್ಡ್‌ ಆಗಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದಿಂದ ರಾಜಭವನದ ರಸ್ತೆಯಲ್ಲಿ , ನಗರದ ಮುಖ್ಯ ಟ್ರಾಫಿಕ್‌ ಜಂಕ್ಷನ್‌ಗಳಲ್ಲಿ ಮತ್ತು ವಿವಿಐಪಿಗಳು ಓಡಾಡುವಲ್ಲಿ ಟೆಲಿ ಕ್ಯಾಮರಾಗಳನ್ನು ಅಳವಡಿಸುವ ಪ್ರಸ್ತಾವನೆ ಟ್ರಾಫಿಕ್‌ ಪೊಲೀಸರ ಮುಂದಿದೆ.

ಟೆಲಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸಕ್ಕೆ 15 ಲಕ್ಷ ರೂಪಾಯಿ ಖರ್ಚಾಗಲಿದೆ. ಇದು ಪೊಲೀಸರಿಗೆ ಮಾಹಿತಿ ನೀಡುವ ಮುಖ್ಯ ಅಸ್ತ್ರವಾಗಲಿದೆ ಎಂದು ನಗರದ ಸೆಕ್ಯುರಿಟಿ ಮತ್ತು ಟ್ರಾಫಿಕ್‌ ವಲಯದ ಹೆಚ್ಚುವರಿ ಆಯುಕ್ತ ಎಂ.ಎನ್‌. ರೆಡ್ಡಿ ಹೇಳುತ್ತಾರೆ. ಸದ್ಯಕ್ಕೆ ಈ ಯೋಜನೆಗೆ ರಾಜ್ಯ ಸರಕಾರ ಮತ್ತು ಪೊಲೀಸ್‌ ಕಮೀಷನರ್‌ ಅವರ ಅಪ್ಪಣೆ ಸಿಗಬೇಕು.

ಇವುಗಳನ್ನು ಅಳವಡಿಸಿದ ನಂತರ ಅಪರಾಧಿಗಳನ್ನು ಪತ್ತೆ ಹಚ್ಚಲು, ದಂಡ ವಿಧಿಸಲು ಸಹಾಯಕವಾದರೆ ಮಾತ್ರ ಈ ಯೋಜನೆಯನ್ನು ಮುಂದುವರೆಸಲಾಗುವುದು. ಸಿರ್ಸಿ ಸರ್ಕಲ್‌ ಫ್ಲೈ ಓವರ್‌, ಎಂ.ಜಿ. ರೋಡ್‌ ಮತ್ತು ಬ್ರಿಗೇಡ್‌ ರೋಡ್‌ ಜಂಕ್ಷನ್‌, 100 ಫೀಟ್‌ ರಿಂಗ್‌ ರೋಡ್‌, ಟ್ರಿನಿಟಿ ಸರ್ಕಲ್‌, ಗಾಂಧಿ ಪ್ರತಿಮೆ ಮತ್ತು ರಾಜಭವನದ ಬಳಿ ಕ್ಯಾಮರಾಗಳನ್ನು ಫಿಕ್ಸ್‌ ಮಾಡಲಾಗುವುದು.

ಈ ವಾರದ ಆರಂಭದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ ಕ್ಯಾಮರಾದಲ್ಲಿ ಸೇನೆಯ ಕ್ಯಾಪ್ಟನ್‌ ಒಬ್ಬ ಭಾನುವಾರದಂದು ತಪ್ಪು ದಿಕ್ಕಿನಲ್ಲಿ ವಾಹನ ಓಡಿಸುತ್ತಿದ್ದು, ಆತ ಸಿಕ್ಕಿ ಬಿದ್ದಾಗ, ಎರಡು ಮಾತಿಲ್ಲದೆ ದಂಡ ತೆತ್ತಿದ್ದಾನೆ. ವೀಡಿಯೋ ಕ್ಯಾಮರಾದಲ್ಲಿ ಪ್ರಯಾಣಿಕರು ಮಾಡಿರುವ ತಪ್ಪು, ಸಮಯ, ವಾಹನದ ನಂಬರ್‌ ಎಲ್ಲವೂ ನಮೂದಾಗುತ್ತದೆ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+