Get Updates
Get notified of breaking news, exclusive insights, and must-see stories!

ಟೆನಿಸ್‌ನಲ್ಲೂ ಮೋಸದಾಟಕ್ಕೆ ಕುಮ್ಮಕ್ಕು, ಅದೂ ಸ್ಟೆಫಿಯಿಂದ !

ಮುಂಬೈ : ಮೊನ್ನೆಯಷ್ಟೇ ವಿಶ್ವಸಂಸ್ಥೆಯ ಶಾಂತಿದೂತರಾಗಿ ನೇಮಕಗೊಂಡಿರುವ ಭಾರತದ ಟೆನಿಸ್‌ ಆಟಗಾರ ವಿಜಯ್‌ ಅಮೃತ್‌ರಾಜ್‌ ಟೆನಿಸ್‌ನಲ್ಲೂ ಫಿಕ್ಸಿಂಗ್‌ಗೆ ಕುಮ್ಮಕ್ಕು ಇತ್ತು ಎಂಬ ವಿಷಯವನ್ನು ಬುಧವಾರ ಬಹಿರಂಗಗೊಳಿಸಿದ್ದಾರೆ.

ಪ್ರಶಸ್ತಿ, ಹೆಸರುಗಳನ್ನು ಎರಡೂ ಕೈಗಳಿಂದ ಬಾಚಿಕೊಂಡಿರುವ ಟೆನಿಸ್‌ ತಾರೆ ಸ್ಟೆಫಿ ಗ್ರಾಫ್‌ ಮೋಸದಾಟ ಆಡಲು ವಿಜಯ್‌ ಅವರನ್ನು ಕೇಳಿಕೊಂಡಿದ್ದರಂತೆ. ಇದನ್ನು ವಿಜಯ್‌ ಮಾತುಗಳಲ್ಲೇ ಕೇಳಿ...

ಮೂರು ವರ್ಷಗಳ ಹಿಂದೆ ನನ್ನ ಮತ್ತು ಸ್ಟೆಫಿಗ್ರಾಫ್‌ ನಡುವೆ ಪ್ರಾಯೋಜಕರು ಪಂದ್ಯವೊಂದನ್ನು ಆಯೋಜಿಸಿದ್ದರು. ಪಂದ್ಯ ಆಡಲು ನಮ್ಮಿಬ್ಬರಿಗೂ ಇಂತಿಷ್ಟು ಹಣ ಕೊಡುವುದಾಗಿಯೂ ಹೇಳಿದ್ದರು. ಆಟದ ದಿನಾಂಕವೂ ನಿಗದಿಯಾಗಿತ್ತು. ಆದರೆ ಪಂದ್ಯ ನಡೆಯೋದಕ್ಕೆ ಕೆಲವು ದಿನ ಮುಂಚೆ ಸ್ಟೆಫಿ ನನ್ನನ್ನು ಭೇಟಿಯಾಗಿ, ನೀವು ಸೋಲುವುದಾದರೆ ಮಾತ್ರ ನಾನು ಆಡಲು ಸಿದ್ಧ ಎಂದುಬಿಟ್ಟರು. ನನಗೆ ಶಾಕ್‌ ಆಯಿತು. ಆಗ ನಾನೇನಾದರೂ ಸ್ಟೆಫಿ ಷರತ್ತಿಗೆ ಒಪ್ಪಿದ್ದಿದ್ದರೆ ಕ್ರಿಕೆಟ್‌ನಂತೆ ಟೆನಿಸ್‌ನಲ್ಲೂ ಇವತ್ತು ಫಿಕ್ಸಿಂಗ್‌ ನಡೆಯುತ್ತಿತ್ತೋ ಏನೋ. ಕೊನೆಗೆ ನನ್ನ ಹಾಗೂ ಸ್ಟೆಫಿ ವಿರುದ್ಧದ ಪಂದ್ಯ ನಡೆಯಲೇ ಇಲ್ಲ.

(ಇನ್ಫೋ ವಾರ್ತೆ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+