ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್‌ 21ರಿಂದ 28ರವರೆಗೆ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆ

By Staff
|
Google Oneindia Kannada News

ಬೆಂಗಳೂರು : 2000-2001ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ. ಪರೀಕ್ಷೆಯು ಮಾರ್ಚ್‌ 21ರಿಂದ 28ರವರೆಗೆ ನಡೆಯಲಿದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಈ ವಿಷಯವನ್ನು ತಿಳಿಸಿದೆ.

ಮಂಡಳಿಯ ಪರೀಕ್ಷಾ ವೇಳಾಪಟ್ಟಿ ಹೀಗಿದೆ: ಮಾರ್ಚ್‌ 21ರಂದು ಪ್ರಥಮ ಭಾಷೆ, 22ರಂದು ದ್ವಿತೀಯ ಭಾಷೆ, 23ರಂದು ವಿಜ್ಞಾನ ಪ್ರಥಮ ಹಾಗೂ ದ್ವಿತೀಯ ಪತ್ರಿಕೆ ಮತ್ತು ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ರಾಜ್ಯಶಾಸ್ತ್ರ ಮತ್ತು ಪೌರನೀತಿ, 24ರಂದು ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ಅರ್ಥಶಾಸ್ತ್ರ ಮತ್ತು ಕಿರಿಯ ತಾಂತ್ರಿಕ ಪರೀಕ್ಷೆ.

26ರಂದು ಗಣಿತ ಮತ್ತು ಅಂಧ ವಿದ್ಯಾರ್ಥಿಗಳಿಗೆ ಭಾರತೀಯ ಸಮಾಜಶಾಸ್ತ್ರ, 27ರಂದು ತೃತೀಯ ಭಾಷೆ, 28ರಂದು ಸಮಾಜ ವಿಜ್ಞಾನ ಪ್ರಥಮ ಹಾಗೂ ದ್ವಿತೀಯ ಪತ್ರಿಕೆಗಳ ಪರೀಕ್ಷೆ ನಡೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X