ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡಿಯಾ ಅಬ್ರಾಡ್‌ ಸಂಸ್ಥೆಯಿಂದ ಗುಜರಾತ್‌ನಒಂದು ಗ್ರಾಮ ದತ್ತು

By Staff
|
Google Oneindia Kannada News

ನ್ಯೂಯಾರ್ಕ್‌ : ಭೂಕಂಪನದಿಂದ ಹಾಳಾಗಿರುವ ಗುಜರಾತ್‌ನ ಒಂದು ಹಳ್ಳಿಯನ್ನು ದತ್ತು ಪಡೆದು, ಪುನರ್‌ ನಿರ್ಮಿಸಲು ಇಲ್ಲಿನ ಇಂಡಿಯಾ ಅಬ್ರಾಡ್‌ ಫೌಂಡೇಷನ್‌ ಮುಂದೆ ಬಂದಿದೆ.

ಸಂಸ್ಥೆಯ ಅಧ್ಯಕ್ಷ ಗೋಪಾಲ್‌ ರಾಜು ಮಂಗಳವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಈ ಕೆಲಸಕ್ಕಾಗಿ ಒಂದು ಕೋಟಿ ರುಪಾಯಿಯನ್ನು ಸಂಸ್ಥೆ ವಿನಿಯೋಗಿಸಲಿದ್ದು, ಫೆಬ್ರವರಿ ತಿಂಗಳ ನಂತರ ಸಮೂಹದ ಗುಜರಾತ್‌ ಟೈಮ್ಸ್‌ನ ಇಡೀ ಜಾಹೀರಾತಿನ ಹಣವನ್ನು ಹಳ್ಳಿಯ ಪುನರ್‌ ನಿರ್ಮಾಣಕ್ಕೆ ಬಳಸಲಾಗುತ್ತದೆ. ಯಾವ ಗ್ರಾಮವನ್ನು ದತ್ತು ಪಡೆಯಬೇಕು ಎಂಬುದು ಇನ್ನೂ ಇತ್ಯರ್ಥವಾಗಿಲ್ಲ ಎಂದರು.

1978ರಲ್ಲಿ ಆಂಧ್ರಪ್ರದೇಶದಲ್ಲಿ ನೆರೆ ಬಂದಾಗ ಸಂಸ್ಥೆ 60 ಸಾವಿರ ಡಾಲರ್‌ ನೆರವನ್ನು ನೀಡಿತ್ತು. ಕಳೆದ ವರ್ಷವೂ ವಿವಿಧ ಸಾಮಾಜಿಕ ಉಪಯೋಗಿ ಕೆಲಸಗಳಿಗೆ 10 ಲಕ್ಷ ಡಾಲರ್‌ ಮೊತ್ತದ ಸಹಾಯ ಕೊಟ್ಟಿದೆ. 1979ರಲ್ಲಿ ಇದೇ ಗುಜರಾತಿನ ಮೌರ್ವಿ ಅಟೆಕಟ್ಟು ಒಡೆದು, ಹಾನಿಯಾದಾಗ ಭಾರತೀಯ ರೆಡ್‌ ಕ್ರಾಸ್‌ ಸೊಸೈಟಿ ಹಾಗೂ ರಾಮಕೃಷ್ಣ ಮಿಷನ್‌ಗೂ ಸಂಸ್ಥೆ 20 ಸಾವಿರ ಡಾಲರ್‌ ದೇಣಿಗೆ ನೀಡಿದೆ. 1993ರಲ್ಲಿ ಲಾಥೂರ್‌ ಭೂಕಂಪವಾದಾಗ ಎರಡು ಶಾಲೆಗಳನ್ನು ಕಟ್ಟಲು ಮಹಾರಾಷ್ಟ್ರ ಸರ್ಕಾರಕ್ಕೆ 81 ಸಾವಿರ ಡಾಲರ್‌ ಸಹಾಯ ಮಾಡಿತ್ತು. ಇಂಡಿಯಾ ಅಬ್ರಾಡ್‌ ಹಾಗೂ ಇಂಡಿಯಾ ಅಬ್ರಾಡ್‌ ನ್ಯೂಸ್‌ ಸರ್ವಿಸ್‌ನ ಪ್ರತಿಯಾಬ್ಬ ನೌಕರರನೂ ತನ್ನ ಒಂದು ದಿನದ ಸಂಬಳವನ್ನು ಗುಜರಾತ್‌ ಸಂತ್ರಸ್ತರ ನೆರವಿಗೆ ನೀಡಿದ್ದು, ಇದರಿಂದ ಒಟ್ಟು 34 ಸಾವಿರ ರುಪಾಯಿ ಸಂಗ್ರಹವಾಗಿದೆ.

(ಐಎಎನ್‌ಎಸ್‌)

ಮುಖಪುಟ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X