ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್‌ 11ರಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆ

By Staff
|
Google Oneindia Kannada News

ಬೆಂಗಳೂರು : 2000-2001ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಗಳು ಏಪ್ರಿಲ್‌ ತಿಂಗಳ 11ನೇ ತಾರೀಖಿನಿಂದ ಆರಂಭಗೊಳ್ಳಲಿವೆ.

ಈ ಮುನ್ನ ಪದವಿ ಪೂರ್ವ ಶಿಕ್ಷಣ ಇಲಾಖೆ ಹೊರಡಿಸಿದ್ದ ವೇಳಾಪಟ್ಟಿಯ ರೀತ್ಯ ಪರೀಕ್ಷೆಗಳು ಏಪ್ರಿಲ್‌ 9ನೇ ತಾರೀಖಿನಿಂದಲೇ ಆರಂಭವಾಗಬೇಕಿತ್ತು. ವಿದ್ಯಾರ್ಥಿಗಳಿಂದ ಬಂದ ಅಹವಾಲುಗಳ ಮೇರೆಗೆ ಪರೀಕ್ಷೆಗಳನ್ನು ಎರಡು ದಿನ ಮುಂದಕ್ಕೆ ಹಾಕಲಾಗಿದೆ.

ಬದಲಾದ ವೇಳಾಪಟ್ಟಿಯಂತೆ ಏ.11ರಿಂದ ದ್ವಿತೀಯ ಪಿ.ಯು.ಸಿ. ಪರೀಕ್ಷೆ ಆರಂಭವಾಗಲಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕ ಬಿ.ಎ. ಹರೀಶ್‌ಗೌಡ ಅವರು ತಿಳಿಸಿದ್ದಾರೆ.

ವೇಳಾಪಟ್ಟಿಯ ಬದಲಾವಣೆಯಿಂದಾಗಿ ಏ.11ರಂದು ನಡೆಯಬೇಕಾಗಿದ್ದ ಎಲೆಕ್ಟ್ರಾನಿಕ್ಸ್‌ ವಿಷಯದ ಪರೀಕ್ಷೆಯನ್ನು ಏ. 18ಕ್ಕೂ ಹಾಗೂ ಏ.25ಕ್ಕೆ ನಿಗದಿಯಾಗಿದ್ದ ತೆಲುಗು ವಿಷಯದ ಪರೀಕ್ಷೆಯು ಏ.27ರಂದೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X