Get Updates
Get notified of breaking news, exclusive insights, and must-see stories!

ಕರ್ನಾಟಕದಲ್ಲಿ ಭೂಕಂಪ ? ಆತಂಕಕ್ಕೆ ಆಸ್ಪದವಿಲ್ಲ,ವದಂತಿಗಳೆಲ್ಲಾ ಸುಳ್ಳು

(ಇನ್ಫೋ ವರದಿ)

ಬೆಂಗಳೂರು : ಭೂಕಂಪ ಕುರಿತಂತೆ ಯಾವುದೇ ಆತಂಕಗಳಿಗೆ ಕಾರಣವಿಲ್ಲ . ಬೆಂಗಳೂರು ಸೇರಿದಂತೆ ಇಡೀ ರಾಜ್ಯ ಸುರಕ್ಷಿತ ವಲಯದಲ್ಲಿದೆ. ವದಂತಿಗಳಿಗೆ ಕಿವಿ ಕೊಡಬೇಡಿ ಎಂದು ಭೂಕಂಪ ಪರಿಣತರು ರಾಜ್ಯದ ಜನತೆಗೆ ತಿಳಿಸಿದ್ದಾರೆ.

ಸೋಮವಾರ ಬೆಳಿಗ್ಗೆ 20 ಕ್ಕೂ ಹೆಚ್ಚು ಸೆಕೆಂಡುಗಳ ಕಾಲ ಸಂಭವಿಸಿದ ಭೂಕಂಪದ ನಂತರ, ನಗರದಲ್ಲಿ ವದಂತಿಗಳದ್ದೇ ಮೇಲುಗೈ. ಮತ್ತೆ ಭೂಕಂಪವಾಗುತ್ತದಂತೆ ಅನ್ನುವ ಮಾತಿನಿಂದ ಹಿಡಿದು, ಭೂಕಂಪ ಹನ್ನೊಂದು - ಹನ್ನೆರಡು ಗಂಟೆಗೆ ಸಂಭವಿಸುತ್ತದಂತೆ ಅನ್ನುವ ಗಡುವುಗಳೂ ಚಾಲ್ತಿಯಲ್ಲಿದ್ದವು. ಈ ಕುರಿತ ಆತಂಕದ ದೂರವಾಣಿ- ಈ ಮೆಯಿಲ್‌ ಕರೆಗಳು ಇಂಡಿಯಾ ಇನ್ಫೋ ಕಚೇರಿಗೆ ಬಿಡುವಿಲ್ಲದಂತೆ ಬರುತ್ತಿವೆ. ಈ ನಿಟ್ಟಿನಲ್ಲಿ ತಜ್ಞರನ್ನು ಸಂಪರ್ಕಿಸಿದಾಗ ಅವರು ಒಂದೇ ಮಾತಿನಲ್ಲಿ ಹೇಳಿದ್ದು - ಆತಂಕಕ್ಕೆ ಆಸ್ಪದವೇ ಇಲ್ಲ , ವದಂತಿಗಳೆಲ್ಲಾ ಸುಳ್ಳು.

ತಜ್ಞರು ಹೀಗೆನ್ನುತ್ತಾರೆ : ಗುಜರಾತ್‌ನಲ್ಲಿ ಸಂಭವಿಸಿರುವ ಭೂಕಂಪದ ಆತಂಕ ವಲಯಕ್ಕೆ ಕರ್ನಾಟಕ ಸೇರಿಲ್ಲ . ಆದ್ದರಿಂದ ಆತಂಕಕ್ಕೆ ಕಾರಣವೇನೂ ಇಲ್ಲ ಎಂದು ಹೈದರಾಬಾದ್‌ನ ಜಿಯಾ- ಫಿಸಿಕಲ್‌ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ನ (ಎನ್‌ಜಿಪಿಆರ್‌ಐ) ಡಾ. ಆರ್‌.ಎನ್‌. ಅಥಾವಳೆ ಹೇಳಿದ್ದಾರೆ. ಅದೇ ಸಂಸ್ಥೆಗೆ ಸೇರಿದ ಡಾ. ಕೌಸಲ್ಯ ಹೇಳುವಂತೆ- ಬೆಂಗಳೂರಿನಲ್ಲಿ ಅನುಭವಕ್ಕೆ ಬಂದಿರುವ ಭೂಕಂಪದ ಕೇಂದ್ರ (ಎಪಿ ಸೆಂಟರ್‌) ಇರುವುದು ತಮಿಳುನಾಡಿನ ಧರ್ಮಪುರಿಯಲ್ಲಿ . ತಮಿಳುನಾಡಿನ ರಾಷ್ಟ್ರೀಯ ಭೂಗರ್ಭ ಅಧ್ಯಯನ ಸಂಸ್ಥೆಯ ಮೂಲಗಳ ಪ್ರಕಾರ, ಧರ್ಮಪುರಿಯ ಇತಿಹಾಸದಲ್ಲಿ ಇಂಥಾ ಲಘು ಕಂಪನಗಳು ಮಾಮೂಲು. ಸೋಮವಾರದ ಕಂಪನದ ತೀವ್ರತೆಯನ್ನು ಅಲ್ಲಿನ ರಿಕ್ಟರ್‌ ಮಾಪಕ 4.5 ಎಂದು ಗುರುತಿಸಿದೆ.

ಮಾಹಿತಿ ಸಂಗ್ರಹಣೆ : ಭೂಕಂಪದ ಬಗೆಗಿನ ಮಾಹಿತಿಗಳನ್ನು ಇನ್ನೂ ಸಂಗ್ರಹಿಸಲಾಗುತ್ತಿದೆ ಎಂದು ಹವಾಮಾನ ಇಲಾಖೆಯ ನಿರ್ದೇಶಕ ಎ.ಎಲ್‌. ಕ್ಪೊಪಾರ್‌ ಹೇಳಿದ್ದಾರೆ. ಬೆಂಗಳೂರು. ತುಮಕೂರು ಹಾಗೂ ಕೊಳ್ಳೇಗಾಲದಲ್ಲಿ ಭೂಕಂಪ ಸಂಭವಿಸಿರುವ ವರದಿಗಳು ಬಂದಿದೆ ಎಂದು ಅವರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+