ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2002ರಲ್ಲಿ ಕಾರ್ಕಳ ಗೊಮ್ಮಟನಿಗೆ ಮಹಾಮಸ್ತಕಾಭಿಷೇಕ

By Staff
|
Google Oneindia Kannada News

ಕಾರ್ಕಳ : ಬರುವ ಏಪ್ರಿಲ್‌ನಲ್ಲಿ -ಭ-ಗ--ವಾ-ನ್‌ ಮಹಾವೀರರ 2600ನೇ ಜಯಂತಿಯನ್ನು ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲು ಕೇಂದ್ರ ಸರ್ಕಾರ 100 ಕೋಟಿ ರುಪಾಯಿ ನೆರ-ವು -ನೀಡಲಿದೆ ಎಂದು ಕೇಂದ್ರ ಜವಳಿ ಖಾತೆ ರಾಜ್ಯ ಸಚಿವ ವಿ.ಧನಂಜಯ ಕುಮಾರ್‌ ಹೇಳಿದ್ದಾರೆ.

ಇಲ್ಲಿನ ಬಾಹುಬಲಿ ಪ್ರತಿಮೆಗೆ 2002ರಲ್ಲಿ ಮಹಾಮಸ್ತಕಾಭಿಷೇಕ ನಡೆಯಲಿದ್ದು, ತತ್ಸಂಬಂಧ ಕಾರ್ಕಳ ಮಹಾಮಸ್ತಕಾಭಿಷೇಕ ಸಮಿತಿ ಆಯೋಜಿಸಿದ್ದ ಸಭೆಯಲ್ಲಿ ಅವರು ಮಾತಾಡುತ್ತಿದ್ದರು. ಜೈನ ಅಧ್ಯಯನ ಕೇಂದ್ರ ಸ್ಥಾಪನೆ, ಜೈನ ಧರ್ಮತತ್ವಗಳನ್ನು ಪಸರಿಸಲು ಗ್ರಂಥಾಲಯಗಳ ನಿರ್ಮಾಣ, ಸ್ಮರಣ ಅಂಚೆಚೀಟಿಗಳು ಹಾಗೂ ನಾಣ್ಯಗಳ ಬಿಡುಗಡೆ- ಮಹಾವೀರ ಜಯಂತಿ ಸಂದರ್ಭದಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರ್ಕಾರ ಯೋಚಿಸುತ್ತಿದೆ ಎಂದರು.

ಈ ಕಾರ್ಯಕ್ರಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪ್ರಧಾನಿ ಎ.ಬಿ.ವಾಜಪೇಯಿ ನೇತೃತ್ವದಲ್ಲಿ ಈಗಾಗಲೇ ಸಮಿತಿ ಸಿದ್ಧವಾಗಿದ್ದು, ಕೇಂದ್ರ ಸಚಿವ ಸುಂದರಲಾಲ್‌ ಪಟ್ವ ಹಾಗೂ ಕಮಲಾ ಹಂಪನಾ ಅದರ ಸದಸ್ಯರಾಗಿದ್ದಾರೆ. ಇಲ್ಲಿನ ಮಹಾಮಸ್ತಕಾಭಿಷೇಕಕ್ಕೆ ಕೇಂದ್ರ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಭರವಸೆ ಕೊಟ್ಟರು.

ಮಹಾಮಸ್ತಕಾಭಿಷೇಕದ ಸಂದರ್ಭದ ಸ್ಮರಣಾರ್ಥ 40 ಲಕ್ಷ ರುಪಾಯಿ ವೆಚ್ಚದಲ್ಲಿ ಪ್ರವಚನ ಮಂದಿರ ನಿರ್ಮಿಸಲು ಸಮಿತಿ ನಿರ್ಧರಿಸಿದೆ ಎಂದು ದಕ್ಷಿಣ ಜಿಲ್ಲಾ ಕೋ- ಆಪರೇಟಿವ್‌ ಬ್ಯಾಂಕ್‌ ಅಧ್ಯಕ್ಷ ಎಂ.ಎನ್‌.ರಾಜೇಂದ್ರ ಕುಮಾರ್‌ ಹೇಳಿದರು.

(ಯುಎನ್‌ಐ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X