ದೂರವಾಣಿ ಬಾಡಿಗೆ ತುಟ್ಟಿ, ಸ್ಥಳೀಯ ಕರೆಗಳ ವ್ಯಾಪ್ತಿ 200 ಕಿ.ಮೀಗೆ ವಿಸ್ತರಣೆ
ನವದೆಹಲಿ : ಭಾರತ್ ಸಂಚಾರ್ ನಿಗಮ ಶುಕ್ರವಾರ ತೆಗೆದುಕೊಂಡಿರುವ ಮಹತ್ವದ ನಿರ್ಧಾರದಲ್ಲಿ ಸ್ಥಳೀಯ ದೂರವಾಣಿ ಕರೆಗಳ ವ್ಯಾಪ್ತಿಯನ್ನು 200 ಕಿ.ಮೀಟರ್ವರೆಗೆ ವಿಸ್ತರಿಸಿದೆ. ಗ್ರಾಮೀಣ ಪ್ರದೇಶದ ಗ್ರಾಹಕರ ದೂರವಾಣಿ ಮಾಸಿಕ ಬಾಡಿಗೆಯನ್ನು 10 ರು.ನಿಂದ 30ರು. ವರೆಗೆ ಹಾಗೂ ಕಡಿಮೆ ದೂರವಾಣಿ ಬಳಸುವ ನಗರ ಪ್ರದೇಶದ ಗ್ರಾಹಕರ ದೂರವಾಣಿ ಬಾಡಿಗೆಯನ್ನು 20ರು. ನಿಂದ 70ರು. ವರೆಗೂ ಹೆಚ್ಚಿಸಲಾಗಿದೆ. ಇದನ್ನು ಎಕ್ಸ್ಚೇಂಜ್ ವ್ಯವಸ್ಥೆ ಹಾಗೂ ಸಾಮರ್ಥ್ಯವನ್ನು ಆಧರಿಸಿ ನಿರ್ಧರಿಸಲಾಗುತ್ತದೆ.
ಈ ವಿಷಯವನ್ನು ಕೇಂದ್ರ ಸಂಪರ್ಕ ಖಾತೆ ಸಚಿವ ರಾಮ್ ವಿಲಾಸ್ ಪಾಸ್ವಾನ್ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ಸ್ಥಳೀಯ ದೂರವಾಣಿ ಕರೆಗಳ ವ್ಯಾಪ್ತಿಯನ್ನು ವಿಸ್ತರಿಸಿರುವುದರಿಂದ ಎಸ್ಟಿಡಿ ಸೌಲಭ್ಯ ಹೊಂದಿಲ್ಲದ ಗ್ರಾಹಕರಿಗೆ ಹೆಚ್ಚಿನ ಅನುಕೂಲ ಆಗಲಿದೆ ಎಂದೂ ಅವರು ಹೇಳಿದರು.
ಇದರ ಜೊತೆಗೆ 50ರಿಂದ 100 ಕಿ.ಮೀಟರ್ ನಡುವಿನ ದೂರವಾಣಿ ಕರೆಗಳ ಪಲ್ಸ್ ಅವಧಿಯನ್ನು 15 ಸೆಕೆಂಡ್ಗಳಿಂದ 30 ಸೆಕೆಂಡ್ಗಳಿಗೂ ಏರಿಸಲಾಗಿದೆ. ಹೀಗಾಗಿ ಇನ್ನು ಮುಂದೆ ಗ್ರಾಹಕರು ಈಗ ನೀಡುತ್ತಿರುವ ದರದ ಅರ್ಧದಷ್ಟು ದರ ನೀಡಿದರೆ ಸಾಕು ಎಂದು ಅವರು ವಿವರಿಸಿದರು.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications