ಕ್ರಿಕೆಟ್‌ನಲ್ಲಿ ಕಳ್ಳಾಟ, ಟೆನಿಸ್‌ನಲ್ಲಿ ಮುಚ್ಚುಮರೆಯಿಲ್ಲದ ಮೋಸದಾಟ !
ನವದೆಹಲಿ : ಕ್ರಿಕೆಟ್‌ನಲ್ಲಾಯಿತು, ಚೆಸ್‌ನಲ್ಲಾಯಿತು. ಈಗ ಟೆನಿಸ್‌ನಲ್ಲೂ ಮೋಸದಾಟ ನಡೆದಿದೆ ; ಅದೂ ಜಗಜ್ಜಾಹೀರಾಗಿ.
ಶನಿವಾರ ಏಷ್ಯಾ ಕಪ್ ಪುರುಷರ ಲೀಗ್‌ನ ಅಂತಿಮ ಪಂದ್ಯ; ಈಗಾಗಲೇ ಫೈನಲ್ಸ್ ಪ್ರವೇಶಿಸಿರುವ ಕೊರಿಯಾ ಮತ್ತು ಥಾಯ್ಲೆಂಡ್ ನಡುವಣದ್ದು. ಥಾಯ್ಲೆಂಡ್ ಸೋತರೆ ಭಾರತ ಫೈನಲ್ಸ್‌ಗೆ, ಗೆದ್ದರೆ ಮನೆಗೆ. ಕೊರಿಯಾದಂಥ ಪ್ರಬಲ ತಂಡದ ಮುಂದೆ ಥಾಯ್ಲೆಂಡ್ ಬಚ್ಚಾ ಕೂಡ ಹೌದು. ಆದರೆ ಕೊರಿಯಾ ಆಟಗಾರರ ಸ್ವಾರ್ಥ, ಲೆಕ್ಕಾಚಾರವನ್ನೆಲ್ಲಾ ತಿರುಗು ಮುರುಗಾಗಿಸಿತು.
ನಿರ್ಣಾಯಕ ಡಬಲ್ಸ್‌ನಲ್ಲಿ ಕೊರಿಯಾದ ಸ್ಯೂಂಗ್ ಹುನ್ಲಿ ಮತ್ತು ಯಾಂಗ್ ಈ ಯೂನ್ ಜೋಡಿ ಥಾಯ್ಲೆಂಡಿನ ಸುಪಾಟ್ ಚುಕಾವಾನ್- ಉಧಾಮ್‌ಚೋಕ್ ಜೋಡಿಯಿಂದ 1-6. 4-6ರ ಸೋಲನ್ನು ಸ್ವಇಚ್ಛೆಯಿಂದ ಪಡೆದು ಭಾರತದ ಆಸೆಗೆ ತಣ್ಣೀರೆರಚಿತು.
ರೌಂಡ್ ರಾಬಿನ್ ಲೀಗ್ ಕೊನೆ ಸಿಂಗಲ್ಸ್‌ನಲ್ಲೂ ಥಾಯ್ಲೆಂಡಿನ ಅಟ್ಟಾಪೊಲ್ ರಿಟ್ಟಿವಟ್ಟನ್‌ಪೊಂಗ್, ಕೊರಿಯಾದ ಸ್ಯೂಂಗ್ ಹುನ್ ಲೀ ವಿರುದ್ಧ 2-1ರ ಜಯ ಗಳಿಸಿದರು. ಇಲ್ಲೂ ಕೊರಿಯಾ ಆಟಗಾರನ ಪೂರ್ವ ನಿರ್ಧರಿತ ಪ್ರದರ್ಶನವೇ ಥಾಯ್ಲೆಂಡ್ ವಿಜಯಕ್ಕೆ ದಾರಿಯಾಯಿತು.
ಆಟಗಾರರಿಗೆ ಗೆಲ್ಲುವುದಕ್ಕಾಗೇ ಆಡುವಂತೆ ಹೇಳಿದೆ. ಆದರೆ ಫೈನಲ್ಸ್‌ನಲ್ಲಿ ಭಾರತದ ವಿರುದ್ಧ ಆಡುವ ಪರಿಸ್ಥಿತಿ ಬಂದರೆ, ಪ್ರಶಸ್ತಿ ಗೆಲ್ಲುವುದು ಸುಲಭವಲ್ಲ. ಲೀಗ್‌ನಲ್ಲಿ ಥಾಯ್ಲೆಂಡ್ ವಿರುದ್ಧ ಸೋತು ಅದನ್ನೇ ಫೈನಲ್‌ಗೆ ಕರೆದುಕೊಳ್ಳೋಣ. ಆಗ ಗೆಲುವು ನಮ್ಮದೇ ಅನ್ನೋದು ಆಟಗಾರರ ಅಭಿಪ್ರಾಯವಾಗಿತ್ತು. ಅವರು ಆಡಿದ್ದೂ ಅದರಂತೆಯೇ. ಡೇವಿಸ್ ಕಪ್‌ನಲ್ಲಾದರೆ ಗೆಲ್ಲುವ ಹಣವನ್ನು ಕೊರಿಯನ್ ಸಂಸ್ಥೆಯಾಂದಿಗೆ ಆಟಗಾರರು ಹಂಚಿಕೊಳ್ಳಬೇಕು. ಆದರೆ ಏಷ್ಯಾ ಕಪ್‌ನಲ್ಲಿ ಸಂಸ್ಥೆಗೆ ಹಣ ಕೊಡಬೇಕಿಲ್ಲ. ಕಂಡಾಪಟ್ಟೆ ಪ್ರಶಸ್ತಿ ಹಣ ಗೆಲ್ಲುವ ಉದ್ದೇಶದಿಂದ ಆಟಗಾರರು ಹೀಗೆ ಮಾಡಿದರು ಎಂದು ಸ್ವತಃ ಕೊರಿಯ ತಂಡದ ನಾಯಕ ವೊನ್ ಹೊಂಗ್ ಹೇಳಿದರು.
ಕೊರಿಯಾ ನಮಗಿದ್ದ ಅವಕಾಶವನ್ನು ದರೋಡೆ ಮಾಡಿತು. ಭಾರತಕ್ಕೆ ಮೋಸ ಮಾಡಿತು ಎಂದು ಭಾರತದ ನಾಯಕ ಮಹೇಶ್ ಭೂಪತಿ ಪ್ರತಿಕ್ರಿಯಿಸಿದರು. ಭಾರತ ಫೈನಲ್ಸ್ ಪ್ರವೇಶಿಸುವ ಅವಕಾಶವನ್ನು ಕಸಿಯಲೆಂದೇ ಕೊರಿಯಾ ಆಡಿರುವುದು ಸ್ಪಷ್ಟವಾಗಿದೆ. ಇದನ್ನು ಏಷ್ಯನ್ ಟೆನಿಸ್ ಒಕ್ಕೂಟ (ಎಟಿಎಫ್) ದ ಗಮನಕ್ಕೆ ತಂದು, ಸೂಕ್ತ ಕ್ರಮ ಜರುಗಿಸುವಂತೆ ಕೋರುತ್ತೇವೆ ಎಂದು ಅಖಿಲ ಭಾರತ ಟೆನಿಸ್ ಒಕ್ಕೂಟ ಹೇಳಿದೆ.
ಮೂರು ವರ್ಷದ ಹಿಂದೆ ಆರಂಭವಾದ ಈ ಟೂರ್ನಿಯ ಮೊದಲೆರಡು ವರ್ಷ ಭಾರತ ಚಾಂಪಿಯನ್. ಕಳೆದ ವರ್ಷ ಉಜ್ಬೇಕಿಸ್ತಾನ ಆ ಪಟ್ಟ ಕಸಿದುಕೊಂಡಿತ್ತು. ಈ ವರ್ಷ ಉಜ್ಬೇಕಿಸ್ತಾನವಿಲ್ಲದ ಕಣದಲ್ಲಿ ಕೊರಿಯಾ ಭಾರತದ ಬೆನ್ನಿಗೆ ಚೂರಿ ಹಾಕಿತು.
ಬಾಲಂಗೋಚಿ : ತೆರೆಹಿಂದೆ ನಡೆಯುತ್ತಿದ್ದ ಮೋಸದಾಟ ಬಟಾ ಬಯಲಿಗೇ ಇಳಿದಿದೆ. ಹೀಗೇ ಬಿಟ್ಟರೆ ಎಲ್ಲಾ ಆಟಗಳೂ ಡಬ್ಲ್ಯು ಡಬ್ಲ್ಯು ಎಫ್‌ನಂತಾಗುತ್ತವೆ.
(ಇನ್ಫೋ ವಾರ್ತೆ)
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications