Get Updates
Get notified of breaking news, exclusive insights, and must-see stories!

ಮಿಲ್ಲರ್‌ ಮೋಡಿ : ಆಸ್ಟ್ರೇಲಿಯಾಕ್ಕೆ ಸತತ 13ನೇ ಟೆಸ್ಟ್‌ ಜಯ

ಅಡಿಲೇಡ್‌ : ವಿಂಡೀಸ್‌ ವಿರುದ್ಧದ 3ನೇ ಟೆಸ್ಟ್‌ ಗೆಲ್ಲಲು ಆಸ್ಟ್ರೇಲಿಯಾಕ್ಕೆ ಮಂಗಳವಾರದ 38 ನಿಮಿಷ ಸಾಕಾಯಿತು. ಈ ಗೆಲುವಿನಿಂದ ಆಸ್ಟ್ರೕಲಿಯಾ ಸತತ 13 ಟೆಸ್ಟ್‌ಗಳನ್ನು ಗೆದ್ದಂತಾಗಿದೆ.

ಫಾರ್ಮ್‌ ಕಂಡುಕೊಂಡ ಲಾರಾ ಸಿಡಿಸಿದ ಅನಿರೀಕ್ಷಿತ ಶತಕದಿಂದ (182) ಮೊದಲ ಇನ್ನಿಂಗ್ಸ್‌ನಲ್ಲಿ 391 ರನ್‌ಗಳ ಸವಾಲಿನ ಮೊತ್ತ ಪೇರಿಸಿದ್ದ ವಿಂಡೀಸ್‌, ಎರಡನೇ ಇನ್ನಿಂಗ್ಸ್‌ನಲ್ಲಿ 141 ರನ್‌ಗಳಿಗೇ ಅಗ್ಗವಾಗಿ ಆಲೌಟ್‌ ಆದದ್ದು ಆಸ್ಟ್ರೇಲಿಯಾದ ವಿಜಯೋತ್ಸವ ಮುಂದುವರಿಯಲು ಕಾರಣವಾಯಿತು.

ಎರಡನೇ ಇನ್ನಿಂಗ್ಸ್‌ನಲ್ಲಿ ಗೆಲ್ಲಲು 130 ರನ್‌ಗಳ ಸಾಧಾರಣ ಮೊತ್ತ ಬೆನ್ನಟ್ಟಿದ ಆಸ್ಟ್ರೇಲಿಯಾ ಸೋಮವಾರ 4 ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿತ್ತು. ಗೆಲ್ಲಲು 32 ರನ್‌ ಸಂಪಾದಿಸುವ ನಿಟ್ಟಿನಲ್ಲಿ ಮಂಗಳವಾರ ಆಟ ಮುಂದುವರೆಸಿದ ಆಸ್ಟ್ರೇಲಿಯಾ, ಜಸ್ಟಿನ್‌ ಲ್ಯಾಂಗರ್‌ (48) ವಿಕೆಟ್‌ ಕಳೆದುಕೊಂಡಿತು. ಡೇಮಿಯನ್‌ ಮಾರ್ಟಿನ್‌ 34 ರನ್‌ಗಳಿಸಿ ನಾಟೌಟ್‌ ಆದರು. ಗಿಲ್‌ಕ್ರಿಸ್ಟ್‌ ಅಜೇಯ 10 ರನ್‌ ಹೊಡೆದು ಆಟ ಮುಗಿಸಿದರು.

ಮೂವತ್ತೆರಡು ವರ್ಷಗಳ ನಂತರ ಆಸ್ಟ್ರೇಲಿಯಾದ ವಿಕೆಟ್‌ ಕೀಪರ್‌ ನಾಯಕನಿಗೆ ಸಲ್ಲುತ್ತಿರುವ ವಿಜಯದ ಗೌರವ ಇದಾಗಿದೆ. ಅನಾರೋಗ್ಯದ ಕಾರಣ ಸ್ಟೀವ್‌ ವಾ ಕೆಲಸವನ್ನು ಗಿಲ್‌ಕ್ರಿಸ್ಟ್‌ ವಹಿಸಿದ್ದರು. ವಿಂಡೀಸ್‌ ಪರ ಧಿಲ್ಲಾನ್‌ 3, ವಾಲ್ಷ್‌ 2 ವಿಕೆಟ್‌ ಪಡೆದರು. ಆಸ್ಟ್ರೇಲಿಯಾ ಪರ ಎರಡೂ ಇನ್ನಿಂಗ್ಸ್‌ಗಳಿಂದ 10 ವಿಕೆಟ್‌ ಗಳಿಸಿದ ಆಫ್‌ ಸ್ಪಿನ್ನರ್‌ ಕೊಲಿನ್‌ ಮಿಲ್ಲರ್‌ ಪಂದ್ಯ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು. ಡಿಸೆಂಬರ್‌ 26ರಿಂದ ಮೆಲ್ಬೋರ್ನ್‌ನಲ್ಲಿ 4ನೇ ಟೆಸ್ಟ್‌ ಪ್ರಾರಂಭವಾಗಲಿದೆ.

ಪಂದ್ಯದ ಪೂರ್ಣ ಸ್ಕೋರ್‌ಬೋರ್ಡ್‌ಗಾಗಿ ಮುಖಪುಟ / ಆಟದ ಅಂಗಳ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+