ನೆಲ ಜಲಕ್ಕೆ ಹಾನಿ ಮಾಡುವ ಯೋಜನೆ ಬೇಕಿಲ್ಲ - ಬೇಡ್ತಿ ಸಮಾವೇಶ
ಕಾರವಾರ: ಅಭಿವೃದ್ಧಿಯ ಹೆಸರಲ್ಲಿ ಜಿಲ್ಲೆಯ ನೆಲ ಜಲಕ್ಕೆ ಹಾನಿಮಾಡುವ ಯಾವುದೇ ಯೋಜನೆಯನ್ನು ಶತಾಯ ಗತಾಯ ವಿರೋಧಿಸಲು ಯಲ್ಲಾಪುರದ ಮಾಗೋಡಿನಲ್ಲಿ ಇತ್ತೀಚೆಗೆ ನಡೆದ ಬೇಡ್ತಿ ಸಮಾವೇಶದಲ್ಲಿ ನಿರ್ಧರಿಸಲಾಯಿತು.
ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಗೌರವಾಧ್ಯಕ್ಷರಾದ ಗಂಗಾಧರೇಂದ್ರ ಸ್ವಾಮೀಜಿಯವರು ಜಿಲ್ಲೆಯ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಬೇಕಿದೆ. ಇಲ್ಲಿನ ನೆಲ ಜಲ, ದುರುಪಯೋಗವಾಗಬಾರದು. ಅಭಿವೃದ್ಧಿಯ ಹೆಸರಲ್ಲಿ ಆಗುತ್ತಿರುವ ಪ್ರಕೃತಿ ನಾಶ ತಡೆಯಬೇಕು. ಸುಂದರ ಪರಿಸರವನ್ನು ಉಳಿಸಿ, ಬೆಳೆಸುವುದು, ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವುದು ಸಮಾವೇಶದ ಉದ್ದೇಶ. ಜನಕ್ಕೆ, ಪರಿಸರಕ್ಕೆ ಧಕ್ಕೆಯಾಗದಂತಹ ಯೋಜನೆಗಳು ಬರಲಿ ಎಂದರು.
ಕೆ.ಎಂ. ಹೆಗಡೆ ಬೈರಂಬೆ ಅವರು ಗ್ರಾಮ ಹಿತಕ್ಕೆ ಯಾವುದು ಮುಖ್ಯ ಎಂಬುದರ ಬಗ್ಗೆ ಸ್ಪಷ್ಟ ಅರಿವು ಜನರಲ್ಲಿ ಮೂಡಬೇಕಿದೆ ಎಂದರು. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರವಾಸೋದ್ಯಮ ಹಾಗು ತೋಟಗಾರಿಕೆ ಈ ಜಿಲ್ಲೆಗೆ ಸೂಕ್ತ . ಪರಿಸರ ವಿರೋಧಿ ಯೋಜನೆಯನ್ನು ತಡೆಗಟ್ಟುವ ಹೋರಾಟದ ಮುಂಚೂಣಿಯಲ್ಲಿ ನಾನಿರುವೆ ಎಂದು ಘೋಷಿಸಿದರು. ಇನ್ನೋರ್ವ ಅತಿಥಿ ಮಾಜಿ ಸಂಸದ ಅನಂತಕುಮಾರ್ ಮಾತನಾಡಿ ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಸದರ ಹಾಗೂ ಸಚಿವರ ಅವಶ್ಯಕತೆಯ ಬಗ್ಗೆ ಒತ್ತಿ ಹೇಳಿದರು. ಶಾಸಕರಾದ ವಿವೇಕಾನಂದ ವೈದ್ಯ, ಪ್ರಮೋದ ಹೆಗಡೆ ರಮಾನಂದ ನಾಯಕ ಹಾಗೂ ಇನ್ನೂ ಅನೇಕ ಧುರೀಣರು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಸಹಸ್ರಾರು ಪರಿಸರವಾದಿಗಳ ಮೆರವಣಿಗೆ ತಂದಗುಳಿ ದೇವಸ್ಥಾನದಿಂದ ಆರಂಭವಾಗಿ ಕರಡಿಪಾಲು ಶಾಲಾ ಆವರಣದಲ್ಲಿ ಸಭೆಯ ಸೇರಿತು.
(ಕಾರವಾರ ಪ್ರತಿನಿಧಿಯಿಂದ)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications