‘ಯುಎನ್ ಶಾಂತಿ ಪಾಲನಾ ಪ್ರಮಾಣ ಪತ್ರ’ಕ್ಕೆ 3.5 ಕೋಟಿ ಭಾರತೀಯರ ಸಹಿ
*ದೀಪ್ಷಿಕ ಘೋಷ್‌ನವದೆಹಲಿ : ದಗಾಬಾಜಿ, ಕೊಲೆ- ಸುಲಿಗೆಗಳು ನಮ್ಮ ದೇಶದಲ್ಲಿ ನಿಲ್ಲುತ್ತದೋ ಇಲ್ಲವೋ. ಆದರೆ ಸಂಯುಕ್ತ ರಾಷ್ಟ್ರಗಳು (ಯುಎನ್) ಸಿದ್ಧಪಡಿಸಿರುವ ಮ್ಯಾನಿಫೆಸ್ಟೋ 2000 ಎಂಬ ಶಾಂತಿ ಪಾಲನಾ ಪ್ರಮಾಣ ಪತ್ರಕ್ಕೆ ಮೂರೂವರೆ ಕೋಟಿಗೂ ಹೆಚ್ಚು ಭಾರತೀಯರು ಸಹಿ ಹಾಕಿದ್ದಾರೆ.
ಈ ಭಾರತೀಯರ ಪೈಕಿ ಏಡ್ಸ್ ಜಾಗೃತಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿರುವ ಚಳವಳಿಗಾರ್ತಿ ಮತ್ತು ಹಿಂದಿ ಚಿತ್ರನಟಿ ಶಬಾನ ಆಜ್ಮಿ ಕೂಡ ಒಬ್ಬರು. ನೊಬೆಲ್ ಪ್ರಶಸ್ತಿ ವಿಜೇತರೆಲ್ಲಾ ಸೇರಿ ಸಿದ್ಧಪಡಿಸಿರುವ ಈ ಪ್ರಮಾಣ ಪತ್ರದಲ್ಲಿ ಹಿಂಸೆಯ ನಿರ್ಮೂಲನೆ, ಜೀವನ ಪ್ರೀತಿ, ಕರುಣೆ ಇವುಗಳಿಗೆ ಬದ್ಧರಾಗಿರುತ್ತೇವೆ ಎಂದು ಬರೆಯಲಾಗಿದೆ. ವಿಶ್ವಾದ್ಯಂತ 100 ಕೋಟಿ ಜನರ ಸಹಿ ಪಡೆಯುವುದು ಸಂಯುಕ್ತ ರಾಷ್ಟ್ರಗಳ ಗುರಿ.
ಭಾರತದಲ್ಲಿ ಬ್ರಹ್ಮಕುಮಾರಿಯರು ಈ ಸಹಿ ಪಡೆಯುವ ಕೆಲಸವನ್ನು ನಡೆಸಿದ್ದಾರೆ. ನಮ್ಮ ಗುರಿ 4 ಕೋಟಿ ಜನರ ಸಹಿ ಪಡೆಯುವುದಾಗಿತ್ತು. ಈಗಾಗಲೇ ನಮ್ಮ ಗುರಿಯ ಶೇ. 90ರಷ್ಟು ಜನರ ಸಹಿ ಪಡೆದಿದ್ದೇವೆ ಎನ್ನುತ್ತಾರೆ ಬ್ರಹ್ಮಕುಮಾರಿ ಆಶಾ.
ಗೃಹ ಸಚಿವ ಎಲ್.ಕೆ.ಅಡ್ವಾಣಿ, ವಿತ್ತ ಸಚಿವ ಯಶವಂತ ಸಿನ್ಹ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಪ್ರಸಿದ್ಧ ನ್ಯೂಕ್ಲಿಯಾರ್ ವಿಜ್ಞಾನಿ ಎ.ಪಿ.ಜೆ. ಅಬ್ದುಲ್ ಕಲಮ್, ಮಾಜಿ ರಾಷ್ಟ್ರಪತಿ ಆರ್.ವೆಂಕಟರಾಮನ್ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಶಾಂತಿ ಪ್ರಮಾಣ ಪತ್ರಕ್ಕೆ ಸಹಿ ಹಾಕಿರುವ ಪ್ರಮುಖ ಭಾರತೀಯರು.
ಹೆಚ್ಚು ಹಿಂಸಾ ಪ್ರಕರಣಗಳು ವರದಿಯಾಗುತ್ತಿರುವ ಗುಜರಾತ್‌ನ ಜನರೇ ಹೆಚ್ಚಾಗಿ ಸಹಿ ಮಾಡಿದ್ದಾರೆ. ಉಳಿದಂತೆ ಮಹಾರಾಷ್ಟ್ರ, ಕರ್ನಾಟಕದ ಜನ ಅಧಿಕ ಸಂಖ್ಯೆಯಲ್ಲಿ ಪ್ರಮಾಣ ಪತ್ರಕ್ಕೆ ಸಹಿ ಹಾಕಿದ್ದಾರೆ. ಸಹಿ ಸಂಗ್ರಹಿಸಲು ಬ್ರಹ್ಮಕುಮಾರಿಯರು ಹೊಟೇಲು, ಕಚೇರಿ, ಕ್ಲಬ್ಬು, ಜೈಲು ಎಲ್ಲೆಡೆಯೂ ಸುತ್ತಿದ್ದಾರೆ.
ನಮ್ಮ ದೇಶದ ಜನಸಂಖ್ಯೆ 100 ಕೋಟಿಯಾದರೆ, ಶಾಂತಿ ಕಾಪಾಡುತ್ತೇನೆ ಎಂದು ಸಹಿ ಹಾಕಿರುವವರು ಕೇವಲ 4 ಕೋಟಿ. ಶಾಂತಿ ಕಾಪಾಡಬೇಕಾದುದು ಪ್ರತಿಯಾಬ್ಬರ ನೈತಿಕ ಕರ್ತವ್ಯ. ಇದಕ್ಕೂ ಭಾಷೆ ತೆಗೆದುಕೊಳ್ಳುವ ಈ ಪರಿ ಹಿಂಸೆ ಎಂಥ ತಾರಕ ಮುಟ್ಟಿದೆ ಎಂಬುದಕ್ಕೆ ಹಿಡಿದ ಕನ್ನಡಿ.
(ಐಎಎನ್‌ಎಸ್)
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications